ಪವರ್ ಫುಲ್ ಕಮ್ ಬ್ಯಾಕ್ ಮಾಡ್ತಿದ್ದಾರೆ ಚಂದನ್ ಶರ್ಮಾ…!

ಪವರ್ ಫುಲ್ ಕಮ್ ಬ್ಯಾಕ್ ಮಾಡ್ತಿದ್ದಾರೆ ಚಂದನ್ ಶರ್ಮಾ…!

ಕನ್ನಡ ದೃಶ್ಯ ಮಾಧ್ಯಮ ಲೋಕದ ಸ್ಟಾರ್ ಆ್ಯಂಕರ್ ಚಂದನ್ ಶರ್ಮಾ ಬರೋಬ್ಬರಿ 9 ತಿಂಗಳ ಬಳಿಕ ರೀ ಎಂಟ್ರಿ ಕೊಡ್ತಿದ್ದಾರೆ.  ಅವರ ರೀ ಎಂಟ್ರಿ ಈ ಬಾರಿಪವರ್ ಫುಲ್ ಆಗಿರಲಿದೆಚಂದನ್ ಶರ್ಮಾ ಅಂದ್ರೆ ಯಾರು ಅಂತ ಬಿಡಿಸಿ ಹೇಳೋದು ಬೇಕಿಲ್ಲ. ಅತ್ಯಂತ ಕಮ್ಮಿ ಅವಧಿಯಲ್ಲಿ ಜನಪ್ರಿಯತೆ ಪಡೆದ ಪತ್ರಕರ್ತ. ಇವರ ಮಾತಿನ‌ ಶೈಲಿ, ಖಡಕ್ ದನಿ, ಮುಲಾಜಿಲ್ಲದೆ ತಪ್ಪಿಸ್ಥರನ್ನು ಮಾತಿನ ಚಾಟಿಯಲ್ಲಿ ಚಚ್ಚುವುದನ್ನು ಜ‌ನ ತುಂಬಾನೇ ಇಷ್ಟಪಟ್ಟಿದ್ದಾರೆ.

ವರ್ಷದ ಹಿಂದೆ ಬಿ.ಟಿವಿ ಬಿಟ್ಟು, ಟಿವಿ9 ಸ್ಕ್ರೀನ್ ನಲ್ಲಿ ಸ್ವಲ್ಪದಿನ ಕಾಣಿಸಿಕೊಂಡಿದ್ದರು. ಆದರೆ, ಒಂಭತ್ತು ತಿಂಗಳಿಂದ ಮರೆಯಾಗಿದ್ರು. ಚಂದನ್ ಎಲ್ಲೋದ್ರಿ? ಯಾವಾಗ ವಾಪಸ್ಸು ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ತೀರಿ ಅಂತ ಅಭಿಮಾನಿಗಳು ಕೇಳ್ತಾನೇ ಇದ್ರು. ಇದೀಗ ಚಂದನ್ ಹೊಸ ಚಾನಲ್ ನ ಸಾರಥ್ಯವಹಿಸಿಕೊಂಡು ಕಮ್ ಬ್ಯಾಕ್ ಆಗ್ತಿದ್ದಾರೆ. ಪವರ್ ಟಿವಿ ಎಂಬ ಹೊಸ ಸುದ್ದಿವಾಹಿನಿಯೊಂದು ಚಂದನ್ ಶರ್ಮಾ ಅವರ ನೇತೃತ್ವದಲ್ಲಿ ನಿಮ್ಮ ಮುಂದೆ ಬರ್ತಿದೆ.  ನೋ‌ ನಾನ್ಸೆನ್ಸ್  ಅನ್ನೋದು ಈ ವಾಹಿನಿಯ ಟ್ಯಾಗ್ ಲೈನ್.

ಬೆಂಗಳೂರಿನ ಇನ್ ಫ್ರೆಂಟ್ರಿ ರೋಡಲ್ಲಿರೋ ಎಂಬಿಸಿ ಪಾಯಿಂಟ್ ನ ಮೂರನೇ ಮಹಡಿಯಲ್ಲಿದೆ ಪವರ್ ಆಫೀಸ್. ಅಕ್ಟೋಬರ್ 19 ರಂದು ಲಾಂಚ್ ಆಗ್ತಿದೆ. ಬಹುತೇಕ ಎಲ್ಲಾ ನೆಟ್ ವರ್ಕ್ ಗಳಲ್ಲೂ ಕನೆಕ್ಟಿವಿಟಿ ಇದೆ. ಅಂದ್ರೆ, ಬಹುತೇಕ ನಿಮ್ಮೆಲ್ಲರ ಮನೆ ತಲುಪುತ್ತೆ. ಯಾವ್ದೇ‌ ರಾಜಕಾರಣಿಗಳಿಗೂ ಈ ಚಾನಲ್ ಸಂಬಂಧಿಸಿಲ್ಲ‌. ನೋ‌ ನ್ಯೂಡಿಟಿ, ನೋ ನೆಗೆಟಿವಿಟಿ, ನೋ ನೆಗ್ಲಿಜೆನ್ಸಿ, ನೋ ನಾನ್ಸೆನ್ಸ್, ಓನ್ಲಿ ನ್ಯೂಸ್ ಸೆನ್ಸ್ ಅಂತಿದೆ ಚಂದನ್ ಅವರಪವರ್ಟೀಂ.  ನೂರೆಂಟು ಚಾನಲ್ ಗಳ ಮಧ್ಯೆ ಇದು ಒಂದಾಗದೆ, ಜನ ಕಾಯ್ತಿರೋ ಒಂದೊಳ್ಳೆ ಚಾನಲ್ ಆಗಲಿ ಅಂತ ಹಾರೈಸೋಣ.

Comments

comments

Similar Articles

Top