ಯಶ್ ಬೆಳೆಸಿದ ನಿರ್ದೇಶಕ ಈಗ ಯಶ್ ಪಾಲಿಗೆ ಕಿರಾತಕ.! ಏನಿದು ಕಿರಾತಕ ವಿವಾದ…

ಕಳೆದ ಎರಡು ವರ್ಷಗಳ‌ ನಂತರ ಯಶ್ ಮತ್ತೊಂದು ಚಿತ್ರದಲ್ಲಿ‌ ಕಾಣಿಸಿಕೊಳ್ಳುತ್ತಿದ್ದಾರೆ. ಬಹುತೇಕ ಕೆಜಿಎಫ್ ಚಿತ್ರ ಮುಗಿಸಿರುವ ಯಶ್, ಕಿರಾತಕ 2 ಚಿತ್ರಕ್ಕೆ ತಯರಾಗುತ್ತಿದ್ದಾರೆ. ಕಿರಾತಕ ಯಶ್ ಗೆ ದೊಡ್ಡ ಮಟ್ಟದಲ್ಲಿ ಬ್ರೇಕ್ ಕೊಟ್ಟ ಚಿತ್ರ. ಇದೀಗ ಕಿರಾತಕ 2 ಬರುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಮತ್ತೊಮ್ಮೆ ಯಶ್ ಅವರನ್ನು ಮಂಡ್ಯ ಹುಡುಗನಾಗಿ‌ ನೋಡಲು ಕಾಯುತ್ತಿದ್ದಾರೆ.

ಇನ್ನೂ ಮುಂದೆ ಈ ಕೆಲಸಗಳನ್ನ ಜೀವನದಲ್ಲಿ ನಾನು ಮಾಡೋದಿಲ್ಲ ಎಂದ ಶಿವಣ್ಣ..!! ಏನದು..?

ವರ ಮಹಾಲಕ್ಷ್ಮೀ ಹಬ್ಬದಂದು ಸೆಟ್ಟೇರುತ್ತಿರುವ ಯಶ್ ‘ಕಿರಾತಕ -2’ ಎಂಬ ಶೀರ್ಷಿಕೆ ಖಾಯಂ ಆಗಿದೆ. ಆದರೆ ಇದೀಗ ಶೀರ್ಷಿಕೆಯ ಬಗ್ಗೆ ತಕರಾರುಗಳು ಕೇಳಿ ಬರುತ್ತಿವೆ. ಈ ಹಿಂದೆ ಕಿರಾತಕ ಚಿತ್ರವನ್ನು ಪ್ರದೀಪ್ ರಾಜ್ ನಿರ್ದೇಶಿಸಿದರು. ಅದೇ ಸಂದರ್ಭದಲ್ಲಿ ಕಿರಾತಕ 2 ಶೀರ್ಷಿಕೆಯನ್ನು ನೋಂದಾಯಿಸಿದರು. ಯಶ್ ಜೊತೆ ಕಿರಾತಕ 2 ಚಿತ್ರವನ್ನು ಮಾಡಬೇಕೆಂಬ ಆಸೆ ಕೂಡ ವ್ಯಕ್ತಪಡಿಸಿದರು. ಕಾರಣಾಂತರಗಳಿಂದ ಈಗ ಹೊಸಬರನ್ನು ಹಾಕಿಕೊಂಡು ನಿರ್ದೇಶಕ ಪ್ರದೀಪ್ ರಾಜ್ ಕಿರಾತಕ 2 ಚಿತ್ರ ಶುರುಮಾಡಿದ್ದಾರೆ.

ಮೈಸೂರು ಅರಮನೆಯಲ್ಲಿ ನಿಷೇಧವಿದ್ದರು ಫೋಟೊ ಕ್ಲಿಕ್ಕಿಸಿಕೊಂಡ ಕನ್ನಡ ಖ್ಯಾತಿ ನಟಿ.. !!

ಹೀಗಿರುವ ಕಿರಾತಕ 2 ಚಿತ್ರ ಯಶ್ ಮಾಡುತ್ತಿರುವುದಾಗಿ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಇದನ್ನು ಕೇಳಿ ಕೊಂಚ ಟೈನ್ಷನ್ ಆಗಿರುವ ಪ್ರದೀಪ್ ರಾಜ್, ನಮ್ಮ ಬ್ಯಾನರ್ ನಲ್ಲಿರುವ ಟೈಟಲ್ ಮತ್ತೊಬ್ಬರು ಹೇಗೆ ಸಿನಿಮಾ ಮಾಡಲು ಸಾಧ್ಯ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಒಂದು ವೇಳೆ ಯಶ್ ಜೊತೆಯಲ್ಲಿ‌ ನಾನು ಕಿರಾತಕ 2 ಚಿತ್ರವನ್ನು ಮಾಡುವುದಾದರೆ ಮಾತ್ರ ಈ ಟೈಟಲ್ ಬಿಟ್ಟು ಕೊಡುವುದಾಗಿ ಯಶ್ ಬಳಿ ನಾನು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕನ್ನಡ ಬಿಗ್ ಬಾಸ್ 6ಕ್ಕೆ ಬರಲಿದ್ದಾರೆ ಈ ಸ್ಟಾರ್ ಗಳು..!!

ಇನ್ನೂ ಕಿರಾತಕ 2 ಚಿತ್ರದ ನಿರ್ಮಾಪಕ ಜಯಣ್ಣ ಟೈಟಲ್ ಕೊಡುವುದಿಲ್ಲ, ತಮ್ಮ ಬಳಿಯೇ ಟೈಟಲ್ ಇದೆ ಎನ್ನುತ್ತಿದ್ದಾರೆ. ಇದರಲ್ಲಿ ಯಾವುದೇ ವಿವಾದ ಇಲ್ಲ ಟೈಟಲ್ ರಿಜಿಸ್ಟರ್ ಆಗಿದೆ. ಆಗಸ್ಟ್‌ 27ರಂದು ಚಿತ್ರೀಕರಣ ಪ್ರಾರಂಭವಾಗಲಿದೆ‌ ಎಂದು ಜಯಣ್ಣ ಸ್ಪಷ್ಟಪಡಿಸಿದರು.

ದಚ್ಚು-ಕಿಚ್ಚ, ಅಪ್ಪು-ಶಿವಣ್ಣ, ಯಶ್-ಉಪ್ಪಿ ಇವರಲ್ಲಿ ಶ್ರೀಮಂತ ನಟ ಯಾರು..?

Comments

comments

Similar Articles

Top