ಶೃತಿಹರಿಹರನ್ ರೀಟಾ ಕಹಾನಿಗೆ ದಿಗ್ಗಜ ನಟರೆ ಫಿದಾ..!!

ಶೃತಿಹರಿಹರನ್ ರೀಟಾ ಕಹಾನಿಗೆ ದಿಗ್ಗಜ ನಟರೆ ಫಿದಾ..!!

ಕೆಲವೊಂದು ಚಿತ್ರಗಳೇ ಹಾಗೆ ನೋಡಿದೊಡನೆ ಕಾಡಿಸಿ ಬಿಡುತ್ತೆಇಂತಹದ್ದೇ ಸಾಲಿನಲ್ಲಿ ನಿಲ್ಲುವ ಕಿರು ಚಿತ್ರವೇ ರೀಟಾ.. ಇದೊಂದು ಕಿರುಚಿತ್ರವಾದ್ರು, ಆಯ್ಕೆ ಮಾಡಿಕೊಂಡಿರುವ ಸಬ್ಜೆಕ್ಟ್ ಇದ್ಯಲ್ಲ, ಅದರ ಮಿತಿ ತುಂಬಾ ದೊಡ್ಡದು.. ಮದುವೆಯಾದ ಅದೆಷ್ಟೋ ಹೆಣ್ಣು ಮಕ್ಕಳು, ತನ್ನನ್ನ ಕಾಪಾಡಬೇಕಾದ ಗಂಡನಿಂದಲೇ ಅತ್ಯಾಚಾರಕ್ಕೆ ಒಳಗಾಗುವುದು, ದೌರ್ಜನ್ಯವನ್ನ ಅನುಭವಿಸುವ ಘಟನೆಗಳ ಸುತ್ತ ಸುತ್ತುವ ಕಥೆ ಇದು

ಮಹಿಳಾ‌ ಪ್ರಧಾನವಾದ ಈ ಕಿರುಚಿತ್ರವನ್ನು ನಿರ್ಮಾಣ ಮಾಡಿರುವುದು,  ನಟಿ ಶೃತಿ ಹರಿಹರನ್ ಹಾಗೂ ದೀಪಕ್ ಗೌಡ  ಯಾವುದೇ ಸಿನಿಮಾಗೂ ಕಮ್ಮಿ ಇಲ್ಲದಂತೆ ಇಡೀ ಚಿತ್ರವನ್ನ ಅದ್ಭುತವಾಗಿ ಕಟ್ಟಿಕೊಡುವಲ್ಲಿ ಇವರಿಬ್ಬರ ಶ್ರಮವಿದೆ.. ಈಗಾಗ್ಲೇ ಶೃತಿಹರಿಹರ್ ಶಾರ್ಟ್ ಮೂವೀಗಳನ್ನ ನಿರ್ಮಾಣ ಮಾಡುವಲ್ಲಿ ತಮ್ಮನ್ನ ತಾವೂ ತೊಡಗಿಸಿಕೊಂಡಿದ್ದಾರೆ.. ಇನ್ನು ರೀಟಾ ಬಗ್ಗೆ ಮಾತನಾಡಿದ ರಾಟೆ ಚೆಲುವೆ, ಮ್ಯಾರಿಟಲ್ ರೇಪ್ ಬಗ್ಗೆ ಬೆಳಕು ಚೆಲ್ಲುವ ಕಿರುಚಿತ್ರ ಇದಾಗಿದ್ದು, ಇದಕ್ಕೆ ಕಾನೂನಾತ್ಮಾಕವಾಗಿ ಕ್ರಮ ಕೈಗೊಳ್ಳಲು ಯಾವುದೇ ಅವಕಾಶ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಈ ಸಮಾಜದಲ್ಲಿಲ್ಲ.. ಈ ಬಗ್ಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ರೀಟಾ‌ ಸಿನಿಮಾವನ್ನ ನಿರ್ಮಾಣ ಮಾಡಲಾಗಿದೆ ಎಂದ್ರು

ಸಹ ನಿರ್ಮಾಪಕರಾದ ಗೌರಿ ವೆಂಚರ್ಸ್ ನ  ಪ್ರೊಪ್ರೈಟರ್ ದೀಪಕ್ ಗೌಡರವರು ಮಾತನಾಡಿ, ಇಂತಹದೊಂದು ಸಾಮಾಜಿಕ ಪಿಡುಗಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ ಹಾಗು ಅದರ ಅವಶ್ಯಕತೆ‌ಯಿದೆ.. ಎಲ್ಲರಿಗೂ ಗೌರವದಿಂದ ಬದುಕುವ ಸ್ವಾತಂತ್ರ್ಯವಿದ್ದು, ಅದನ್ನ ಯಾರಿಂದಲೂ ಕಸಿಯಲು ಸಾಧ್ಯವಿಲ್ಲ.. ಕುಟುಂಬ, ಸಂಸಾರ ಎಂಬುದೇ ಹೆಣ್ಣಿಗೆ ಭದ್ರ ಕೋಟೆ ಇದ್ದಂತೆ.. ಆದರೆ, ಇಂತಹ ಕಡೆಯೇ ಹೆಣ್ಣಿನ ಮೇಲಾಗುವ ಶೋಷಣೆಗಳು ಶೋಚನೀಯ, ಇದು ನಿಲ್ಲಬೇಕು‌ ಎಂದ್ರು

ದೀಪಕ್ ಗೌಡ ಅವರು ಹೋಟಲ್ ಉದ್ಯಮಿಯಾಗಿದ್ದು, ಕಿರು ಚಿತ್ರಗಳನ್ನ ನಿರ್ಮಾಣ ಮಾಡುವುದರಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದಾರೆ.. ರೀಟಾ ಸ್ಟೋರಿ ಕೇಳಿದ ತಕ್ಷಣ ಮರು ಮಾತನಾಡದೆ ಮುಂದೆ ಬಂದು, ಶೃತಿ ಹರಿಹರನ್ ಜೊತೆಗೆ ಕೈ ಜೋಡಿಸಿದ್ದಾರೆಈ ಇಬ್ಬರ ನಿರ್ಮಾಣದಲ್ಲಿ ಮೂಡಿಬಂದ ಈ ರೀಟಾ ಕಿರುಚಿತ್ರಕ್ಕೆ ಚಿತ್ರರಂಗದ ದಿಗ್ಗಜ ಕಲಾವಿದರೆ ಶರಣು ಶಾರಣಾರ್ಥಿ ಎಂದಿದ್ದಾರೆಕಿರುಚಿತ್ರವೊಂದನ್ನ ಸಿನಿಮಾ ರೇಂಜಿಂಗೆ ತೆರೆಗೆ ತಂದ ಕೀರ್ತಿ ಈ ಇಬ್ಬರಿಗೆ ಸಲ್ಲಬೇಕು.. ಇವರಿಂದ ಮತ್ತಷ್ಟು ಇಂತಹ ಸಮಾಜಮುಖಿ ಕೆಲಸಗಳ ಮೂಲಕ ನಮ್ಮ ಈ ಸಮಾಜದಲ್ಲಿ ಗುಣಾತ್ಮಕ ಬದಲಾವಣೆಗಳು ಮೂಡುವಂತಾಗಲಿ ಎಂಬುದೊಂದೆ ನಮ್ಮ ಆಶಯ

Comments

comments

Similar Articles

Top