ಎಬಿಡಿ ಧಿಡೀರ್ ನಿವೃತ್ತಿ ಕುರಿತು ಕೊನೆಗೂ ಮೌನ ಮುರಿದ RCB ನಾಯಕ ವಿರಾಟ್.. ನಿವೃತ್ತಿ ಕುರಿತು ಹೇಳಿದ್ದೇನು..?

ಎಬಿಡಿ ನಿವೃತ್ತಿಯ ಬಗ್ಗೆ ಕೊನೆಗೂ ಮೌನ ಮುರಿದ ವಿರಾಟ್ ಹೇಳಿದ್ದೇನು ಗೊತ್ತಾ..?

ಈ ಇಬ್ಬರು ಆಟಗಾರರ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ.. ತಾವೂ ಫಿಲ್ಡ್ ನಲ್ಲಿ ಇದ್ರೆ ಎದುರಾಳಿ ತಂಡಕ್ಕೆ ಎಷ್ಟು ಮಾರಕವಾಗ ಬಹುದು ಅನ್ನೋದನ್ನ ಹಲವು ಬಾರಿ ಪ್ರೂವ್ ಮಾಡಿದ್ದಾರೆಶ್ರೇಷ್ಠ ಕ್ರಿಕೆಟ್ ಕಲಿಗಳನ್ನ ಒಂದೇ ಟೀಮ್ ನಲ್ಲಿ ಆಡುವಂತೆ, ಅವರ ಆಟವನ್ನ ನೋಡುವಂತೆ ಮಾಡಿದ ಕೀರ್ತಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಸಲ್ಲುತ್ತದೆ

ಬರೀ ಆಟಗಾರ ಹಾಗೆ ಕ್ಯಾಪ್ಟನ್ ಆಗಿ ಮಾತ್ರ ಈ ಇಬ್ಬರು ಉಳಿದುಕೊಂಡಿಲ್ಲ ಅನ್ನೋದು ನಿಮಗೆ ಗೊತ್ತು.. ಈ ಇಬ್ಬರ ಸ್ನೇಹ ಅದಕ್ಕೂ ಮಿಗಿಲಾಗಿದೆ.. ಹೀಗಾಗೆ ಐಪಿಎಲ್ ನಲ್ಲಿ ಅತೀ ಹೆಚ್ಚು ಒಗ್ಗಿಕೊಂಡ ಆಟಗಾರ ಸಾಲಿನಲ್ಲಿ ಈ ಇಬ್ಬರು ಮುಂಚುಣಿಯಲ್ಲಿ ನಿಲ್ತಾರೆ.. ಇನ್ನೂ ವರ್ಲ್ಡ್ ಕ್ಲಾಸ್ ಬ್ಯಾಟ್ಸಮನ್ ಅಂತ ಕರೆಸಿಕೊಳ್ಳುವ ಕೊಹ್ಲಿಗೂ ಎಬಿಡಿ ಆಟವೆಂದ್ರೆ ಎಲ್ಲಿಲ್ಲದ ಖುಷಿ.. ಇಂತಹ ಗೆಳೆಯನನ್ನ ಇನ್ನೂ ಮುಂದೆ ಸೌತ್ ಆಫ್ರಿಕಾ ರಾಷ್ಟ್ರೀಯ ತಂಡದಲ್ಲಿ ನೋಡೋಕೆ ಸಾಧ್ಯವಾಗ್ದೆ ಇರೋದ್ರ ಬಗ್ಗೆ ಸ್ವತಃ ವಿರಾಟ್ ಗೂ ಬೇಸರ ಮೂಡಿದೆ

ಎಬಿಡಿ ತನ್ನ ನಿವೃತ್ತಿಯನ್ನ ಧಿಡೀರ್ ಘೋಷಿಸುತ್ತಿದಂತೆ ಕ್ರಿಕೆಟ್ ಸೆಲೆಬ್ರಿಟಿಗಳಿಂದ ಹಿಡಿದು ಎಲ್ಲ ಕ್ರಿಕೆಟ್ ಅಭಿಮಾನಿಗಳು ತಮ್ಮ ತಮ್ಮ ಅಭಿಪ್ರಾಯ ವನ್ನ ಹಂಚಿಕೊಂಡ್ರು.. ಆದರೆ ಮುಖ್ಯವಾಗಿ ವಿರಾಟ್ ಕೊಹ್ಲಿ ತನ್ನ ಗೆಳೆಯನ ನಿವೃತ್ತಿಯ ಬಗ್ಗೆ ಏನು ಹೇಳ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ರು.. ಕೊನೆಗೂ ವಿರಾಟ್ ಎಬಿಡಿ ನಿವೃತ್ತಿಯ ಬಗ್ಗೆ ಮೌನ ಮುರಿದಿದ್ದಾರೆ

ಬ್ಯಾಟಿಂಗ್ ಆಡುವ ದಿಕ್ಕನ್ನ ಬದಲಿಸಿದ ಎಬಿಡಿಗೆ ಧನ್ಯವಾದ ತಿಳಿಸಿ, ನಿನ್ನ ಮುಂದಿನ ಜೀವನ ಹಾಗೆ ನಿಮ್ಮ ಕುಟುಂಬಕ್ಕೆ ನನ್ನ ಹಾರೈಕೆಗಳು ಸಹೋದರ ಎಂದಿದ್ದಾರೆ.. ಈ ಮೂಲಕ ಎಬಿಡಿ ಗೆ ವಿರಾಟ್ ಸಹೋದರನ ಸ್ಥಾನವನ್ನ ನೀಡಿದ್ದಾರೆ.. ಜೊತೆಗೆ ಕೊಹ್ಲಿ ಎಂದು ಸಹ ಎಬಿಡಿಯನ್ನ ಹೊಗಳುವುದರಲ್ಲಿ ಹಿಂದೆ ಬಿದ್ದವರಲ್ಲ

ಎಬಿಡಿ ಆರ್ ಸಿಬಿ ಪರ ಆಡುವಾಗೆಲ್ಲಾ ಆತನ ಆಟವನ್ನ ಮೆಚ್ಚಿ ಮನಬಿಚ್ಚಿ ಮಾತನಾಡಿದ್ದಾರೆ.. ಅಂದು ಹೈದ್ರಾಬಾದ್ ತಂಡದ ವಿರುದ್ದ ನಡೆದ ಮ್ಯಾಚ್ ಸಂದರ್ಭದಲ್ಲಿ ಬೌಂಡರಿ ಲೈನ್ ನಲ್ಲಿ ವಿಲಿಯರ್ಸ್ ಹಿಡಿದ ಕ್ಯಾಚ್ ಗೆ, ಕೊಹ್ಲಿ ಎಬಿಡಿಗೆ ಹೇಳಿದ್ದು, ಸ್ಪೈಡರ್ ಮನ್ ಅಂತ‌

Saw #SpiderMan Live today! 😮 @abdevilliers17 #RCBvsSRH #IPL2018

A post shared by Virat Kohli (@virat.kohli) on

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

Top