ಕಾನ್ಸ್ ಟೇಬಲ್ ಸರೋಜಗೆ ಸಿಕ್ಕಿದೆ ಸಖತ್ ಅವಕಾಶ.. ಕನ್ನಡದ ಖ್ಯಾತ ನಟನೊಂದಿಗೆ ಅಭಿನಯಿಸುವ ಚಾನ್ಸ್…!

ಕಾನ್ಸ್ ಟೇಬಲ್ ಸರೋಜಗೆ ಸಿಕ್ಕಿದೆ ಸಖತ್ ಅವಕಾಶ.. ಕನ್ನಡದ ಖ್ಯಾತ ನಟನೊಂದಿಗೆ ಅಭಿನಯಿಸುವ ಚಾನ್ಸ್…!

ಟಗರು ಸಿನಿಮಾ ಹಲವರ ಸಿನಿಮಾ ಕೆರಿಯರ್ ಗೆ ದೊಡ್ಡ ಬ್ರೇಕ್ ಕೊಟ್ಟಿದೆಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಪೊಲೀಸ್ ಗೆಟಪ್ ನಲ್ಲಿ ಕಾಣಿಸಿಕೊಂಡ ಈ ಸಿನಿಮಾದಿಂದ ಹೆಚ್ಚು ಹೆಚ್ಚು ಗುರುತಿಸಿಕೊಂಡವರ ಹಿಂಡೆ ಇದೆಅದರಲ್ಲಿ ಒಬ್ಬಾಕೆ ಅಂದ್ರೆ ಕಾನ್ಸ್ ಟೇಬಲ್ ಸರೋಜ ಅವರು.. ಟಗರು ಸಿನಿಮಾದಲ್ಲಿ ಚಿಕ್ಕ ಪಾತ್ರವನ್ನೇ ಮಾಡಿದ್ರು, ಕಾನ್ಸ್ ಟೇಬಲ್ ಸರೋಜ  ಖ್ಯಾತಿಯ ತ್ರಿವೇಣಿಗೆ ಮಾತ್ರ ದೊಡ್ಡ ಹೆಸರು ಬಂತು

ಈಗ ಈ ನಟಿಗೆ ಕನ್ನಡದಲ್ಲಿ ಒಳ್ಳೊಳ್ಳೆ ಸಿನಿಮಾಗಳ ಆಫರ್ ಹೆಚ್ಚಾಗಿದೆ.. ಸದ್ಯಕ್ಕೆ ಅಜಯ್ ರಾವ್ ನಾಯಕನಾಗಿರುವ ತಾಯಿಗೆ ತಕ್ಕಮಗ ಸಿನಿಮಾದಲ್ಲಿ ಈ ನಟಿ ಕಾಣಿಸಿಕೊಳ್ತಿದ್ದಾರೆಇಲ್ಲಿ ಈಕೆ ಸ್ಕ್ರೀನ್ ಷೇರ್ ಮಾಡಿಕೊಳ್ತಿರೋದು ಕನ್ನಡದ ಹೆಸರಾಂತ ಹಾಸ್ಯನಟ ಸಾಧುಕೋಕಿಲ ಅವರೊಂದಿಗೆ

ತಾಯಿಗೆ ತಕ್ಕಮಗ ಅಜಯ್ ರಾವ್ ನಟಿಸುತ್ತಿರು 25 ಸಿನಿಮಾ.. ನಿರ್ದೇಶಕ ಶಶಾಂಕ ಬ್ಯಾನರ್ ನಲ್ಲಿ ಮೂಡಿ ಬರುತ್ತಿದೆಈ ಸಿನಿಮಾದ ಮತ್ತೊಂದು ವಿಶೇಷವೆಂದ್ರೆ ಎಕ್ಸ್ ಕ್ಯೂಸ್ ಮಿ ಸಿನಿಮಾದ ಬಳಿಕ ಸುಮಲತಾ ಅಂಬರೀಶ್ ಅವರು ಅಜಯ್ ರಾವ್ ಗೆ ತಾಯಿಯಾಗಿ ಕಾಣಿಸಿಕೊಳ್ತಿದ್ದಾರೆಸಿನಿಮಾಗೆ ವೇದಗುರು ಆಕ್ಷನ್ ಕಟ್ ಹೇಳುತ್ತಿದ್ದಾರೆಅಜಯ್ ರಾವ್ ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಜೊತೆಯಾಗಿದ್ದಾರೆ

ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನ ಲೈಕ್ ಮಾಡಿ ಷೇರ್ ಮಾಡಿ..

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

 

Comments

comments

Similar Articles

Top