ಬುಮ್ರಾಗೆ ಔಟ್ ಆಗಿದ್ರು ಬ್ಯಾಟಿಂಗ್ ಮುಂದುವರಿಸಿದ ಕೊಹ್ಲಿ..!!! ಏನಿದು ಘಟನೆ..??

ಬುಮ್ರಾಗೆ ಔಟ್ ಆಗಿದ್ರು ಬ್ಯಾಟಿಂಗ್ ಮುಂದುವರಿಸಿದ ಕೊಹ್ಲಿ..!!! ಏನಿದು ಘಟನೆ..??

ನಿನ್ನೆ ನಡೆದ ಮಾಡು ಇಲ್ಲವೆ ಮಡಿ ಹೋರಾಟದಲ್ಲಿ ಆರ್ ಸಿಬಿ ಟೀಮ್ ಅಂತೂ ಗೆಲುವಿನ ನಗೆ ಬೀರಿತ್ತು.. ಸತತ ಸೋಲಿನಿಂದ ಕಂಗೆಟ್ಟಿದ್ದ ಬೆಂಗಳೂರು ತಂಡಕ್ಕೆ ಗೆಲುವಿನ ಸಿಹಿ ಸಿಕಿತ್ತು.. ಈ ಆಟ ಎಲ್ಲ ಮ್ಯಾಚ್ ಗಳಲ್ಲಿ ಇದ್ದಹಾಗೆ ಕೇವಲ ವಿರಾಟ್ ಷೋ ಆಗಿರಲಿಲ್ಲಅಥವಾ ಇನ್ಯಾವುದೇ ಒಬ್ಬ ಆಟಗಾರಿಗೆ ಸೀಮಿತವಾಗಿರಲಿಲ್ಲಇದು ಒಂದು ತಂಡ ಇಡಿಯಾಗಿ ಆಡಿ ಗೆದ್ದ ಮ್ಯಾಚ್ ಆಗಿತ್ತು

ಚಿನ್ನಸ್ವಾಮಿ ಸ್ಟೇಡಿಯಂಗೆ ಮ್ಯಾಚ್ ನೋಡಲು ಹೋಗುವ ಮುನ್ನ ಎಚ್ಚರ..!!

ಈ ಆಟವನ್ನೇ ಇಷ್ಟು ದಿನ ವಿರಾಟ್ ಹಾಗೆ ಬೆಂಗಳೂರು ಅಭಿಮಾನಿಗಳು ನಿರೀಕ್ಷೆ ಮಾಡಿದದ್ದು.. ಅಂತೂ ಮುಂಬೈ ಇಂಡಿಯನ್ಸ್ ತಂಡವನ್ನ 14 ರನ್ ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗುವ ಹಂಬಲವನ್ನ ಹಾಗೆ ಜೀವಂತವಾಗಿಟ್ಟಿದೆ.. ಈ ಗೆಲುವಿನ ಮ್ಯಾಚ್ ನಲ್ಲೂ ಕೊಹ್ಲಿಯ ಆ ಒಂದು ನಡೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ..

ದ್ರಾವಿಡ್ ಗೆ ಯಾಕ್ರೀ ದ್ರೋಣಾಚಾರ್ಯ ಪ್ರಶಸ್ತಿ..!! ಹಿಂಗಂತ ಹೇಳುತ್ತಿರೋದು ಯಾರು ಗೊತ್ತಾ..?

ನಡೆದದ್ದೇನು..?

ಡಿಕಾಕೋ ವಿಕೆಟ್ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗೆ ಬಂದ್ರು ಕೊಹ್ಲಿ.. ಅದು 14 ಓವರ್ಮುಂಬೈ ಇಂಡಿಯನ್ಸ್ ಬೌಲರ್ ಬೂಮ್ರಾ ಬೌಲಿಂಗ್ ಮಾಡಿದ್ರು.. ಕೊಹ್ಲಿ ಬ್ಯಾಟ್ ನಲ್ಲಿ ಮುಟ್ಟಿದ ಬೌಲ್ ಸೀದಾ ಕೀಪರ್ ಆಗಿದ್ದ ಇಶಾನ್ ಕಿಶಾನ್ ಕೈ ಸೇರಿತ್ತು.. ಈ ಬಗ್ಗೆ ಸ್ವತಃ ಬೂಮ್ರಾ ಹಾಗೆ ಕೀಪರ್ ಕಿಶನ್ ಸರಳವಾಗಿ ಡೌಟ್ ನಲ್ಲೇ ಅಪೀಲ್ ಮಾಡಿದ್ರು.. ಅಂಪೈರ್ ತಲೆಯಾಡಿಸಿ ನಾಟ್ ಔಟ್ ಅಂದು ಬಿಟ್ರು.. ಆದ್ರೆ ವಾಸ್ತವದಲ್ಲಿ ಅದು ಬ್ಯಾಟ್ ಗೆ ತಾಗಿ ಕೀಪರ್ ಕೈ ಸೇರಿತ್ತುಇದು ಅಲ್ಟ್ರಾ ಎಡ್ಜ್‌ ನಲ್ಲೂ ಕ್ಲಿಯರ್ ಆಗಿ ತಿಳಿಯುತ್ತಿತ್ತು..

ಸುಳ್ಳು ಸರ್ಟಿಫಿಕೇಟ್ ನೀಡಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ಈ ಹೆಸರಾಂತ ಆಟಗಾರ..? ಯಾರದು..?

ಈ ಬಗ್ಗೆ ಚಕಾರ ಎತ್ತದ ಮುಂಬೈ ಇಂಡಿಯನ್ಸ್ ತನಗಿದ್ದ ರಿವ್ಯೂವ್ ಅನ್ನ ಬಳಸಿಕೊಳ್ಳಲಿ ಬಹುದಿತ್ತು.. ಆದರೆ ಅದ್ಯಾಕೋ ರೋಹಿತ್ ಶರ್ಮಾ ಮನಸ್ಸು ಮಾಡಲಿಲ್ಲ.. ಮತ್ತೊಂದು ಕಡೆ ಬ್ಯಾಟ್ ಗೆ ತಾಗಿದ್ದು ವಿರಾಟ್ ಗೆ ತಿಳಿಯಲಿಲ್ವ ಗೊತ್ತಿಲ್ಲ.. ಅಕಸ್ಮಾತ್ ತಿಳಿದಿದ್ರು ಅಂಪೈರ್ ಔಟ್ ನೀಡಲಿಲ್ಲ ಅಂತ ಹಾಗೆ ಸುಮ್ಮನಾಗಿ ಬಿಟ್ರ ಅನ್ನೋ ಅನುಮಾನ ಶುರುವಾಗಿದೆ

ಈ ಆಟಗಾರರನ್ನ ನೋಡಿದ್ರೆ ಅಯ್ಯೋ ಅನ್ನಿಸುತ್ತೆ ಅಂತ ಮರುಗಿದ ABD..!! ಯಾರ ಬಗ್ಗೆ ಗೊತ್ತಾ..?

ಮತ್ತೊಂದು ಕಡೆ ದೊಡ್ಡ ಗ್ರೌಂಡ್, ಒತ್ತಡದ ಮ್ಯಾಚ್, ಅಭಿಮಾನಿಗಳ ಕೂಗಾಟ ಹೀಗಾಗೆ ಅಂಪೈರ್ ನಿಂದ ಹಿಡಿದು ಬೌಲರ್, ಬ್ಯಾಟ್ಸಮನ್ ಹಾಗೆ ಕೀಪರ್ ಗಮನಕ್ಕೂ ಬಾರದ ಹಾಗೆ ಈ ಘಟನೆ ನಡೆದಿರ ಬಹುದು ಎಂಬ ಮಾತುಗಳು ಕೇಳಿ ಬರ್ತಿವೆ.. ಅಕಸ್ಮಾತ್ ಇದು ವಿರಾಟ್ ಗೆ  ಔಟ್ ಎಂದು ತಿಳಿದಿದ್ರು ಸ್ಕ್ರೀಸ್ ನಲ್ಲೇ ಉಳಿದುಕೊಂಡಿದ್ರೆ ಕ್ರೀಡಾ ಸ್ಫೂರ್ತಿ ಗೆ ಮಾಡಿದ ಅವಮಾನವೇ ಸರಿ.

CSK ಆಟಗಾರ ಬ್ರಾವೊನ ರೂಮರ್ ಗರ್ಲ್ ಫ್ರೆಂಡ್ ಎಷ್ಟೊಂದು ಹಾಟ್ ಗೊತ್ತಾ..? ಬೇಕಿದ್ರೆ ನೀವೆ ನೋಡಿ..!

ಇನ್ನೂ ಕೊಹ್ಲಿಯ ಈ ವಿಚಾರಕ್ಕೆ ಉದ್ದೇಶಿಸಿ ಮಾತನಾಡೋದಾದ್ರೆ ಅದೆಷ್ಟೋ ಬಾರಿ ಅಂಪೈರ್ ಔಟ್ ಕೊಡುವ ಮೊದಲೇ ತಾವೇ ಪೆವಿಲಿಯನ್ ನಡೆದು ಕ್ರೀಡಾ ಸ್ಫೂರ್ತಿಯನ್ನ ಮೆರೆದ ಉದಾಹರಣೆ ಸಿಗುತ್ತವೆ..

King Kohli rightfully at the top again. #PlayBold

A post shared by Royal Challengers Bangalore (@royalchallengersbangalore) on

(1/9)

A post shared by Royal Challengers Bangalore (@royalchallengersbangalore) on

ಐಪಿಎಲ್  ಬಗೆಗಿನ‌ ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನ ಲೈಕ್ ಮಾಡಿ ಷೇರ್ ಮಾಡಿ..

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

 

Comments

comments

Similar Articles

Top