ಶಿವಣ್ಣ ‘ಯಾರಿ ನಂ. 1’ ಕಾರ್ಯಕ್ರಮಕ್ಕೆ ಬರಲಿದ್ದಾರೆ ಕಿಚ್ಚ ಸುದೀಪ್..‌ ಹಾಗಿದ್ರೆ ಕಿಚ್ಚನ ಜೊತೆ ಯಾರು ಬರ್ತಿದ್ದಾರೆ ಗೊತ್ತಾ..?

‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮಕ್ಕೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಸಿಕ್ಕಾಪಟ್ಟೆ ತಮಾಷೆಯಿಂದ ಕೂಡಿರುವ ಈ ಟಾಕ್ ಶೋ ಗೆ,‌ ಪ್ರತಿ ವಾರ ಇಬ್ಬರು ಅತಿಥಿಗಳು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಪ್ರತಿ ವಾರ ಯಾರು ಶಿವಣ್ಣ ಮುಂದೆ ಕುಳಿತುಕೊಳ್ಳುತ್ತಾರೆ ಎಂಬ ನಿರೀಕ್ಷೆ ಹೆಚ್ಚಿದೆ.

ಗೆಳೆತನದ ಪರಿಕಲ್ಪನೆ ಮೇಲೆ ಬಿಂಬಿತವಾಗಿರುವ ಈ ಕಾರ್ಯಕ್ರಮ ಸಿನಿ ರಂಗದ ಅಪರೂಪದ ಗೆಳಯರು ತಮ್ಮ ಸ್ನೇಹದ ಬಗ್ಗೆ ಶಿವಣ್ಣ ಜೊತೆ ಮನಬಿಚ್ಚಿ ಮಾತನಾಡಲಿದ್ದಾರೆ.

ಟಾಕ್ ಶೋ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳಿದ್ದಾರೆ ಶಿವಣ್ಣ. ಮೊದಲ ಅತಿಥಿ ಯಾರು ಗೊತ್ತಾ.‌?

ಈಗಾಗಲೇ ಉಪೇಂದ್ರ-ಗುರುಕಿರಣ್, ದಿಗಂತ್- ಲೂಸ್ ಮಾದ ಯೋಗಿ, ವಶಿಷ್ಠ- ಧನಂಜಯ್ ಹಾಗೂ ಚಿಕ್ಕಣ್ಣ- ಶರಣ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಕಾರ್ಯಕ್ರಮದಲ್ಲಿ ಯಾರ ಬರಲಿದ್ದಾರೆ ಅನ್ನೋ ಕುತೂಹಲ ಹೆಚ್ಚಿದೆ. ಇದೀಗ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

ಮಜಾ ಟಾಕೀಸ್ ನಲ್ಲಿ ಬಿಗ್ ಬಾಸ್ ತಂಡ..!! ಆದರೆ ಚಂದನ್ ಶೋ ನಿಂದ ದೂರ ಉಳಿಯಲು ಕಾರಣವೇನು..?

‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅತಿಥಿಯಾಗಿ ಭಾಗವಹಿಸಿದ್ದು, ಏಪ್ರಿಲ್ 8 ರಂದು ಸುವರ್ಣ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. ಆದರೆ ಕಿಚ್ಚನ ಜೊತೆ ಯಾರ ಬರಲಿದ್ದಾರೆ ಅನ್ನೋದು ಮಾತ್ರ ಗೋಪ್ಯವಾಗಿ ಇಡಲಾಗಿದೆ.

ಒಟ್ಟಿನಲ್ಲಿ ಅಭಿಮಾನಿಗಳ ಆಸೆಯಂತೆ ಕಿಚ್ಚನನ್ನು ಶಿವಣ್ಣ ಶೋನಲ್ಲಿ ನೋಡಬಹುದು. ಕಿಚ್ಚನ ಜೊತೆ ಬರುವ ಗೆಳಯ ಯಾರೆಂದು ನೋಡಲು ಏಪ್ರಿಲ್ 8ರವರೆಗೂ ಕಾಯಲೇಬೇಕು…

ನಿಮಗೆ‌‌ ಗೊತ್ತಿಲ್ಲದ ಹಾಗೆ ಕಿಚ್ಚ ಸುದೀಪ್ ನಿಮ್ಮನ್ನು ಭೇಟಿ ಮಾಡಲಿದ್ದಾರೆ.. ಅದು ಹೇಗೆ ಗೊತ್ತಾ..?

Image Courtesy : Star Suvarna

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

Top