ಖುಷಿ ಚಿತ್ರ ನಟಿಯ ಜೀವನದಲ್ಲಿಲ್ಲ ಖುಷಿ.. ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ನಟಿ

ಸಿನಿಮಾ ರೀತಿಯಲ್ಲಿ ಮದುವೆಯಾದ ಸಿನಿಮಾ ನಟಿಯ ಜೀವನ ಇದೀಗ ಬೀದಿಗೆ ಬಂದಿದೆ. ಖುಷಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಾಯಕ ನಟಿಯಾಗಿ ನಟಿಸಿರುವ ಚೈತ್ರ ಅವರ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಉದ್ಯಮಿ ಅವರನ್ನು ಮದುವೆಯಾಗಿದ್ದ ಚೈತ್ರ ಪೋತರಾಜ್ ಸಾಂಸಾರಿಕ ಜೀವನ ವಿಚ್ಛೇದನ ಹಂತಕ್ಕೆ ತಲುಪಿದೆ.

ಬ್ಯುಸಿನೆಸ್ ಮ್ಯಾನ್ ಬಾಲಾಜಿ ಪೋತರಾಜ್ ಅವರನ್ನು 2006ರಲ್ಲಿ ಚೈತ್ರ ಪ್ರೀತಿಸಿ ಮದುವೆಯಾಗಿದರು. ಚೈತ್ರ ಸಿನಿಮಾ ನಟಿಯಾದ ಕಾರಣ ಮೊದಲಿನಿಂದಲೂ ಪತ್ನಿಯ ಮೇಲೆ ಪತಿ ಬಾಲಾಜಿ ಅವರಿಗೆ ಅನುಮಾನವಿತ್ತು. ಈ ಕಾರಣ ಚೈತ್ರ ಅವರನ್ನು ಹಿಂಬಾಲಿಸಲು ಗನ್ ಮ್ಯಾನ್ ನೇಮಿಸಿದ್ದರಂತೆ.

ಅದ್ದೂರಿಯಾಗೆ ನಡಿತು ಸಮಂತಾ-ನಾಗಚೈತನ್ಯ ಮ್ಯಾರೇಜ್

ಇವರಿಗೆ ಇಬ್ಬರು ಮಕ್ಕಳಿದ್ದು, ಎರಡನೇ ಮಗು ಜನಿಸಿದ ನಂತರ ನನ್ನ ಜೊತೆ ಲೈಂಗಿಕ ಸಂಪರ್ಕ ಹೊಂದಿಲ್ಲ. ಅಲ್ಲದೆ ಅಮ್ಯೂಲ ಅನ್ನೋ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ನಾನು ಸಂಪಾದಿಸಿದ ಹಣವನ್ನು ಆಕೆಗೆ ನೀಡುತ್ತಿರುವುದಾಗಿ ನಟಿ ಚೈತ್ರ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದಾರೆ.

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Top