You are here
Home > ವಾಹಿನಿ ಸುದ್ದಿ > ಟಗರು ಡಾಲಿಗೆ ಗುರುಪ್ರಸಾದ್ ಟಾಂಗ್.. ಸಾಯೋ ಪಾತ್ರ ಅಂತ ಹೇಳಿದ್ದು ಯಾಕೆ..?

ಟಗರು ಡಾಲಿಗೆ ಗುರುಪ್ರಸಾದ್ ಟಾಂಗ್.. ಸಾಯೋ ಪಾತ್ರ ಅಂತ ಹೇಳಿದ್ದು ಯಾಕೆ..?

‘ನಮ್ಗೂ ಒಬ್ಬ — ಗುರು ಇದ್ದ ಗುರು. ಇಷ್ಟುದ್ದ ಗಡ್ಡ ಬಿಟ್ಟುಬಿಟ್ರೆ ಬುದ್ಧಿವಂತರಾಗಲ್ಲ. ಗಡ್ಡ ಬಿಟ್ಟೋರೆಲ್ಲಾ ಬುದ್ಧಿವಂತರಾದರೆ, ಕರಡಿ ಜಗತ್ತಿನ ಅತೀ ದೊಡ್ಡ ಬುದ್ಧಿವಂತ ಪ್ರಾಣಿ  …’

ಇದು ‘ಟಗರು‌’ ಚಿತ್ರದ ಡೈಲಾಗ್.. ಡಾಲಿ ಪಾತ್ರದಲ್ಲಿ ಕಾಣಿಸಿಕೊಂಡ ಧನಂಜಯ್ ಈ ಡೈಲಾಗ್ ಹೊಡೆಯುತ್ತಾರೆ. ಸಿನಿಮಾದಲ್ಲಿ ಈ ಡೈಲಾಗ್ ಕೇಳುತ್ತಿದ್ದಂತೆಯೇ, ನಿರ್ದೇಶಕ ಗುರು ಅವರನ್ನು ಗಮನದಲ್ಲಿಟ್ಟುಕೊಂಡು ಹೇಳಲಾಗಿದೆ ಅನ್ನೋ‌ ಮಾತುಗಳು ಕೇಳಿಬರುತ್ತಿದ್ದವು.

ಟಗರು ಟ್ರೋಲ್ಸ್ ಬಗ್ಗೆ ಕಾನ್ಸ್ ಟೇಬಲ್ ಸರೋಜ ಏನು ಹೇಳಿದ್ರು ಗೊತ್ತಾ..?

ನಿಜಕ್ಕೂ ಧನಂಜಯ್ ಗುರುಪ್ರಸಾದ್ ಅವರಿಗೆ ಟಾಂಗ್ ಕೊಟ್ರ..? ಅಸಲಿ ಕಥೆಯೇನು..? ಇಲ್ಲಿದೆ‌‌ ನೋಡಿ..

ನಟ ಧನಂಜಯ್‌ ಲಾಂಚ್‌ ಆಗಿದ್ದು, ಗುರುಪ್ರಸಾದ್‌ ಅವರ ‘ಡೈರೆಕ್ಟರ್‌ ಸ್ಪೆಷಲ್‌’ ಚಿತ್ರದಿಂದ. ಆ ನಂತರ ಗುರುಪ್ರಸಾದ್‌ ಅವರ ‘ಎರಡನೇ ಸಲ’ ಚಿತ್ರದಲ್ಲಿ ಧನಂಜಯ್ ನಟಿಸಿದರು. ಈ ಚಿತ್ರದ ವೇಳೆ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿ, ಧನಂಜಯ್‌ ಅವರನ್ನು ಗುರುದ್ರೋಹಿ ಎಂದು ಗುರುಪ್ರಸಾದ್ ಕರೆದಿದರು.

ಟಗರು 2 ಚಿತ್ರದಲ್ಲಿ ದರ್ಶನ್..!!? ಯಾವ ಪಾತ್ರ ಮಾಡ್ತಾರೆ ಗೊತ್ತಾ..!!

ಈ ಬಗ್ಗೆ ನಿರ್ದೇಶಕ ಗುರುಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. ಇಲ್ಲಿದೆ‌‌ ನೋಡಿ..‌

ಈ ಕುರಿತು ಮಾತನಾಡಿದ ಗುರುಪ್ರಸಾದ್‌, ಅನೇಕರು ಧನಂಜಯ್‌ ಟಗರು ಸಿನಿಮಾದ ಡೈಲಾಗ್‌ನಲ್ಲಿ ನನಗೆ ಟಾಂಗ್‌ ಕೊಟ್ಟಿದ್ದಾನೆ ಎಂದು ಹೇಳಿದ್ದನ್ನು ಕೇಳಿದೆ. ಆದರೆ ನಾನು ಸಿನಿಮಾ ನೋಡಿಲ್ಲ. ನನಗೆ ಆ ಬಗ್ಗೆ ಬೇಸರವಿಲ್ಲ. ಏಕೆಂದರೆ, ಮಾತನಾಡಿರೋದು ವಿಲನ್‌ ಪಾತ್ರ ಮತ್ತು ಸಾಯುವಂತಹ ಪಾತ್ರ. ಹಾಗಾಗಿ, ನನಗೆ ಆ ಬಗ್ಗೆ ನೋವಿಲ್ಲ. ಒಳ್ಳೆಯದಾಗಲಿ, ಚೆನ್ನಾಗಿ ಬೆಳೀಲಿ ಎಂದು ಹೇಳಿದ್ದಾರೆ.

ಏನಿದು ಹೊಸ ಕಿಡಿ… ಯಶ್ ಗೆ ಡೈಲಾಗ್ ನಲ್ಲೇ ಟಾಂಗ್ ಕೊಟ್ಟ ಟಗರು ಶಿವ!? ಏನದು ಡೈಲಾಗ್..?

ನಟ ಧನಂಜಯ್‌ ಈ ಕುರಿತು ಮಾತನಾಡಿ, ತಾವು ಯಾರನ್ನೂ ಗುರಿಯಾಗಿಸಿಕೊಂಡು ಹೇಳಿಲ್ಲ. ಒಂದು ಪಾತ್ರ ಇನ್ನೊಂದು ಪಾತ್ರದ ಕುರಿತಾಗಿ ಹೇಳುವ ಸಂಭಾಷಣೆ ಅದು ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದರು.

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

Leave a Reply

Top