You are here
Home > ವಾಹಿನಿ ಸುದ್ದಿ > ಟಗರು ಟ್ರೋಲ್ಸ್ ಬಗ್ಗೆ ಕಾನ್ಸ್ ಟೇಬಲ್ ಸರೋಜ ಏನು ಹೇಳಿದ್ರು ಗೊತ್ತಾ..?

ಟಗರು ಟ್ರೋಲ್ಸ್ ಬಗ್ಗೆ ಕಾನ್ಸ್ ಟೇಬಲ್ ಸರೋಜ ಏನು ಹೇಳಿದ್ರು ಗೊತ್ತಾ..?

ಟಗರು ಚಿತ್ರ ರಿಲೀಸ್ ಆಗಿದೆ ತಡ ಎಲ್ಲಿ‌ ನೋಡಿದರು ಟಗರು ಚಿತ್ರದ್ದೆ ಹವಾ. ಟಗರು ಚಿತ್ರದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡ ಡಾಲಿ ಎಲ್ಲರ ಅಚ್ಚುಮೆಚ್ಚಿನ ಪಾತ್ರವಾಗಿದೆ. ಡಾಲಿ ಪಾತ್ರ ಯಶ್ವಸಿ ಆದ್ಮೇಲೆ ಡಾಲಿ ಡವ್ ಸರೋಜ ಕೂಡ ರಾತ್ರೋರಾತ್ರಿ ಫೇಮಸ್ ಆಗಿಬಿಟ್ಟಿದ್ದಾರೆ.

ಹೌದು, ಟಗರು ಚಿತ್ರದಲ್ಲಿ ಕಾನ್ಸ್ ಟೇಬಲ್ ಆಗಿ ಕಾಣಿಸಿಕೊಂಡ ಸರೋಜ ಅಲಿಯಾಸ್ ತ್ರಿವೇಣಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸೆನ್ಸೆಷನ್ ಕ್ರಿಯೆಟ್ ಮಾಡಿದ್ದಾರೆ. ಇನ್ನೂ ಈಕೆ ಮೇಲೆ ಸಾಕಷ್ಟು ಟ್ರೋಲ್‌ ಕೂಡ ಮಾಡಲಾಯಿತು. ಹೀಗೆ ಟ್ರೋಲ್ ಆದ್ಮೇಲೆ ಸರೋಜ ಏನು ಹೇಳಿದ್ರು ಗೊತ್ತಾ..??

ಟಗರು 2 ಚಿತ್ರದಲ್ಲಿ ದರ್ಶನ್..!!? ಯಾವ ಪಾತ್ರ ಮಾಡ್ತಾರೆ ಗೊತ್ತಾ..!!

ಮೊದಲ ದಿನ ಊರ್ವಶಿ ಥಿಯೇಟರ್ ನಲ್ಲಿ ಶಿವಣ್ಣ ಜೊತೆ ಚಿತ್ರ ವೀಕ್ಷಿಸಲು ಹೋಗಿದ್ದೆ, ಅಲ್ಲಿ ಯಾರೂ ನನ್ನನ್ನು ಗುರುತಿಸಲಿಲ್ಲ, ಆನಂತರ ಎಲ್ಲಿ‌ ನೋಡಿದರೂ ನೀವು ಸರೋಜ ಅಲ್ವಾ ಎಂದು ಗುರುತಿಸಿ ಮಾತನಾಡಿಸುತ್ತಾರೆ. ನನ್ನ ಸಿನಿ ಬದುಕಿನಲ್ಲಿ ಮೊದಲ‌ ಬಾರಿಗೆ ಈ ರೀತಿ ಅನುಭವವಾಗುತ್ತಿದೆ.

ತನ್ನನ್ನು ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟ ಸಂಯುಕ್ತ..! ಟ್ರೋಲ್ ಮಾಡಿದವರಿಗೆ ಹೇಳಿದ್ದು ಏನು?

ನಾನು ಮಾಡಿದ್ದು ಚಿಕ್ಕ ಪಾತ್ರವಾದರೂ ಜನರು ಇಷ್ಟರ ಮಟ್ಟಿಗೆ ಪ್ರೀತಿ ತೋರಿಸಿದ್ದಾರೆ. ‌ನಾನು ನಿರೀಕ್ಷೆ ಮಾಡಿರಲಿಲ್ಲ, ಎಲ್ಲಿ ನೋಡಿದರೂ ಸರೋಜ ಪಾತ್ರದ ಬಗ್ಗೆ ಪ್ರಶಂಸೆ ಕೇಳಿ ಬರ್ತಿದೆ. ಜನರ ಪ್ರೀತಿ ವಿಶ್ವಾಸದಿಂದ ಈ ಹೆಸರು ಸಿಕ್ಕಿದೆ, ಈ ಹೆಸರನ್ನು ಮುಂದೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ.

ಇದೆಲ್ಲಾ ನೋಡಿದ್ಮೇಲೆ ಟಗರು ಚಿತ್ರದಲ್ಲಿ ಇನ್ನು ದೊಡ್ಡ ಪಾತ್ರ ಮಾಡಬೇಕಿತ್ತು ಅನಿಸುತ್ತಿದೆ. ಇಷ್ಟು ಸಣ್ಣ ಪಾತ್ರವನ್ನು ದೊಡ್ಡ ಮಟ್ಟಿಗೆ ಯಶಸ್ವಿಗೊಳಿಸಿದ ಎಲ್ಲ‌ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ್ದಾರೆ.

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

One thought on “ಟಗರು ಟ್ರೋಲ್ಸ್ ಬಗ್ಗೆ ಕಾನ್ಸ್ ಟೇಬಲ್ ಸರೋಜ ಏನು ಹೇಳಿದ್ರು ಗೊತ್ತಾ..?

  1. Pretty element of content. I simply stumbled upon your website and in accession capital to assert that I acquire actually loved account your blog posts. Any way I’ll be subscribing to your augment or even I success you access persistently quickly.

Leave a Reply

Top