You are here
Home > ವಾಹಿನಿ ಸುದ್ದಿ > ಪುನೀತ್ ರಾಜ್‍ಕುಮಾರ್ ವಿರುದ್ಧ ಕನ್ನಡ ಹೋರಾಟಗಾರರ ಮುನಿಸು

ಪುನೀತ್ ರಾಜ್‍ಕುಮಾರ್ ವಿರುದ್ಧ ಕನ್ನಡ ಹೋರಾಟಗಾರರ ಮುನಿಸು

ದೊಡ್ಡಮನೆ ಮಗ ಪುನೀತ್ ರಾಜ್ ಕುಮಾರ್ ಈಗ ಕನ್ನಡಿಗರ ಪವರ್ ಸ್ಟಾರ್.. ಕೌಟುಂಬಿಕ ಸಿನಿಮಾಗಳ ಮೂಲಕ ಹೆಚ್ಚು ಗುರುತಿಸಿಕೊಂಡಿರುವ ನಟ ಅಪ್ಪು.. ಹೀಗಾಗೆ ಪುನೀತ್ ಅವರ ಸಿನಿಮಾಗಳನ್ನ ರಾಜ್ ಕುಮಾರ್ ಚಿತ್ರಗಳಿಗೆ ಹೋಲಿಸಲಾಗುತ್ತೆ.. ಕಾರಣ ಅಪ್ಪು ಸಿನಿಮಾಗಳ ಕಥೆ ಆ ರೀತಿ ಇರುತ್ತೆ.. ಇದಕ್ಕೆ ರಾಜಕುಮಾರ ಸಿನಿಮಾವೇ ಸಾಕ್ಷಿ.

ಬಟ್ ಈಗ ಪುನೀತ್ ರಾಜ್ ಕುಮಾರ್ ಪವನ್ ಒಡೆಯರ್ ಜೊತೆಗಿನ ಚಿತ್ರಕ್ಕಾಗಿ ತನ್ನ ಕೂದಲಿಗೆ ಕತ್ತರಿ ಹಾಕಿರೋದು ನಿಮಗೆ ಗೊತ್ತಿರುವ ವಿಚಾರ.. ಇದೇ ಮೊದಲ ಬಾರಿಗೆ ಈ ರೀತಿಯ ಹೇರ್ ಸ್ಟೈಲ್ ನಲ್ಲಿ ಈ ನಟ ಕಾಣಿಕೊಳ್ಳುತ್ತಿದ್ದು, ಈ ಚಿತ್ರದ ಬಗ್ಗೆ ನಿರೀಕ್ಷೆಯನ್ನ ಹೆಚ್ಚಿಸಿದೆ.. ಜೊತೆಗೆ ಅಪ್ಪು ಅಭಿಮಾನಿಗಳಿಗೆ ಈ ಹೇರ್ ಸ್ಟೈಲ್ ಕ್ರೇಜ್ ತಂದೊಂಡಿದ್ದೆ..

ಸದ್ಯಕ್ಕೆ ಈ ಬಗ್ಗೆ ಕಸ್ತೂರಿ ಕರ್ನಾಟಕ‌ ಜನಪರ ವೇದಿಕೆ‌ಯ ರಾಜ್ಯಾಧ್ಯಕ್ಷರಾದ ರಮೇಶ್ ಗೌಡ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪುನೀತ್ ಅವರ ಹೇರ್ ಸ್ಟೈಲ್ ಗೆ ಬೇಸರವನ್ನ ವ್ಯಕ್ತ ಪಡೆಸಿದ್ದಾರೆನಾವು ನಿಮ್ಮಲ್ಲಿ  ಡಾ.ರಾಜ್ ಕುಮಾರ್ ಅವರನ್ನ ಕಾಣುತ್ತೇವೆ.. ಆದರೆ ನಿಮಗೆ ಈ ರೀತಿ ಹೇರ್ ಸ್ಟೈಲ್ ಬೇಕಾ ಅಂತ ಪ್ರಶ್ನೆ‌ ಮಾಡಿದ್ದಾರೆ..

ಸ್ಟಾರ್ ವಾರ್ ಬಿಟ್ಟು ನೈಜ ನಾಯಕನಾಗುವ ಎಲ್ಲ ಅರ್ಹತೆ ನಿಮಗಿದೆ.. ಸಿನಿಮಾ ನಟನೆಯಲ್ಲಿ ಓಕೆ, ನಿಮ್ಮ ನಿಜ ಜೀವನದಲ್ಲಿ ಇದೆಲ್ಲಾ ಬೇಕೆ ಅಂತ ಪ್ರಶ್ನೆ ಮಾಡಿದ್ದಾರೆ.. ಸದ್ಯಕ್ಕೆ‌ ಕಿಚ್ಚ ಸುದೀಪ್ ಇಂತಹದ್ದೆ ಕೇಶ ವಿನ್ಯಾಸದಿಂದ ಅಭಿಮಾನಿಗಳು ಈಗಾಗಲೇ ಅರ್ಧ ಕೇಶಕ್ಕೆ ಕತ್ತರಿ ಹಾಕಿದ್ದು, ಇದೀಗ ನಿಮ್ಮ ಸರದಿ ಎಂದಿದ್ದಾರೆ..

ಸದ್ಯಕ್ಕೆ‌ ಪುನೀತ್ ರಾಜ್ ಕುಮಾರ್ ಅಂಜನಿಪುತ್ರ ಸಿನಿಮಾವಾದ ಬಳಿಕ ಒಪ್ಪಿಕೊಂಡಿರುವ ಚಿತ್ರ ಪವನ್ ಒಡೆಯರ್ ನಿರ್ದೇಶನದ್ದು.. ಈ ಹಿಂದೆ ಈ ಜೋಡಿ ರಣವಿಕ್ರಮ‌ ಚಿತ್ರದಲ್ಲಿ ಒಂದಾಗಿತ್ತು..

Comments

comments

Similar Articles

Leave a Reply

Top