You are here
Home > ವಾಹಿನಿ ಸುದ್ದಿ > ದಿ ವಿಲನ್ ಸಿನಿಮಾ ಮಾಡ್ತಿರೋದು ಫ್ಯಾನ್ಸ್​ಗಲ್ಲ! ನಿರ್ದೇಶಕ ಪ್ರೇಮ್ ಹೀಗೆ ಹೇಳಲು‌ ಕಾರಣವೇನು..?

ದಿ ವಿಲನ್ ಸಿನಿಮಾ ಮಾಡ್ತಿರೋದು ಫ್ಯಾನ್ಸ್​ಗಲ್ಲ! ನಿರ್ದೇಶಕ ಪ್ರೇಮ್ ಹೀಗೆ ಹೇಳಲು‌ ಕಾರಣವೇನು..?

ದಿ ವಿಲನ್ ಚಿತ್ರ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಮೊದಲ ಬಾರಿಗೆ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ತಿರುವ ಸಿನಿಮಾ. ಇಬ್ಬರು ದೊಡ್ಡ ನಟರು ನಟಿಸುತ್ತಿರುವ ಸಿನಿಮಾ‌ ಅಂದ್ಮೇಲೆ ಪ್ರೇಕ್ಷಕರಿಗೆ ಸಹಜವಾಗಿಯೇ ಕುತೂಹಲವಿದೆ. ಈ ದಿಗ್ಗಜರನ್ನ ಯಾವಾಗ ತೆರೆಮೇಲೆ ನೋಡುತ್ತೇವೆ, ಯಾವಾಗ ಸಿನಿಮಾ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ದಿ ವಿಲನ್ ಚಿತ್ರ ಸೆಟ್ಟೇರಿ ಎರಡು ವರ್ಷ ಕಳೆದಿದೆ. ಆದರೆ ಚಿತ್ರ ಇನ್ನು ವಿಳಂಬವಾಗುತ್ತಿದೆ. ನಿರ್ದೇಶಕ ಪ್ರೇಮ್ ಪ್ಲಾನಿಂಗ್ ಇಲ್ಲದೆ ಸಿನಿಮಾ ಶುರು ಮಾಡಿದ್ರು ಅನ್ನೋ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಇದಕ್ಕೆಲ್ಲ ನಿರ್ದೇಶಕ ಪ್ರೇಮ್ ಉತ್ತರ ಕೊಟ್ಟಿದ್ದಾರೆ.

ಪ್ಲಾನಿಂಗ್ ಇಲ್ಲದೆ ಪ್ರೇಮ್‌ ‘ವಿಲನ್’ ಸಿನಿಮಾ ಶುರು ಮಾಡಿದರಾ..? ಇದಕ್ಕೆ ಕಾರಣ ಯಾರು..?

ನಿರ್ದೇಶಕ ಪ್ರೇಮ್ ಹೇಳಿದ್ದು ಏನು..? ಇಲ್ಲಿದೆ ನೋಡಿ. ದಿ ವಿಲನ್ ಚಿತ್ರ ಮಾಡುತ್ತಿರುವುದು ಕೇವಲ ಫ್ಯಾನ್ಸ್​ಗೋಸ್ಕರ ಮಾಡ್ತಿಲ್ಲ. ಈ ಸಿನಿಮಾ ಮಾಡುತ್ತಿರುವುದು ಕರ್ನಾಟಕದ ಜನತೆಗೆ, ಕರ್ನಾಟಕದ ಪ್ರತಿಯೊಬ್ಬ ಪ್ರೇಕ್ಷಕನಿಗಾಗಿ. ಇದು ಫ್ಯಾನ್ಸ್​ಗಾಗಿ ಸಿನಿಮಾ ಅಲ್ಲ. ಈ ಸಿನಿಮಾ ನೋಡಿದ ಮೇಲೆ ಜನ ಸಿನಿಮಾಗಾಗಿ ಫ್ಯಾನ್ ಆಗಬೇಕು.

ದಿ ವಿಲನ್ ಮಾಮೂಲಿ ಸಿನಿಮಾ ಥರ ಅಲ್ಲ. ಸ್ಯಾಂಡಲ್​ವುಡ್​ನಲ್ಲಷ್ಟೇ ಅಲ್ಲ, ದಕ್ಷಿಣ ಭಾರತದ ಚಿತ್ರರಂಗದಲ್ಲೇ ಕ್ರೇಜ್ ಹುಟ್ಟುಹಾಕಿದೆ. 50 ಕೋಟಿ ರೂಪಾಯಿ ಬಜೆಟ್​ನ ಸಿನಿಮಾವನ್ನ ನಿರ್ಮಿಸುವ ಯಾವುದೇ ನಿರ್ಮಾಪಕರಾಗಲಿ ತಮ್ಮ ಸಿನಿಮಾ ಲೇಟ್ ಆಗಲಿ ಅಂತ ಅಂದುಕೊಳ್ಳುವುದಿಲ್ಲ.

ಯಜಮಾನ ಚಿತ್ರದಲ್ಲಿ ಧನಂಜಯ್ ವಿಲನ್ ಆಗಿ ಮಾಡುವುದಿಲ್ಲವಂತೆ.. ಧನಂಜಯ್ ಹೀಗೆ ಹೇಳಲು ಕಾರಣವೇನು?

ದೊಡ್ಡ ಸ್ಟಾರ್ ಕಾಸ್ಟ್​ ಇರುವುದರಿಂದ, ಅವರ ಟೈಮ್ ನೋಡ್ಕೊಂಡು ಕೆಲಸ ಮಾಡಬೇಕು. ಅದ್ಭುತವನ್ನ ನೋಡೋಕು, ಅತ್ಯದ್ಭುತವನ್ನ ನೋಡೋಕು ವ್ಯತ್ಯಾಸವಿರುತ್ತೆ. ದಿ ವಿಲನ್ ಸಿನಿಮಾ ತಯಾರಾಗ್ತಿರೋದು ಅದೇ ರೀತಿಯಲ್ಲಿ ಅಂತ ಪ್ರೇಮ್ ಸ್ಪಷ್ಟನೆ ನೀಡಿದರು.

ತಾಯಿ‌ ನೆನಪಿಗಾಗಿ ಶಿವಣ್ಣ ಏನನ್ನು ಮಾಡಲು ಹೊರಟ್ಟಿದ್ದಾರೆ ಗೊತ್ತಾ..? ಈ ಸ್ಟೋರಿ ನೋಡಿ..!!

ಶಿವಣ್ಣ ಹಾಗೂ ಸುದೀಪ್ ಹೀಗೆ ಹೇಳಲು ಕಾರಣ:

ದಿ ವಿಲನ್ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿರುವ ಕಾರಣ, ಅಭಿಮಾನಿಗಳು ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತೆ ಅಂತ ಶಿವರಾಜ್ ಕುಮಾರ್ ಹಾಗೂ ಸುದೀಪ್ ಪ್ರಶ್ನಿಸಿದ್ದಾರೆ. ಈ ನಟರೂ ಸಹಜವಾಗಿಯೇ ನಿರ್ದೇಶಕ ಪ್ರೇಮ್​ರನ್ನೇ ಕೇಳಿ ಅಂತ ಹೇಳಿದ್ದಾರೆ.​ ಆದರೆ ಈ ಮಾತನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Leave a Reply

Top