You are here
Home > ವಾಹಿನಿ ಸುದ್ದಿ > ಪ್ಲಾನಿಂಗ್ ಇಲ್ಲದೆ ಪ್ರೇಮ್‌ ‘ವಿಲನ್’ ಸಿನಿಮಾ ಶುರು ಮಾಡಿದರಾ..? ಇದಕ್ಕೆ ಕಾರಣ ಯಾರು..?

ಪ್ಲಾನಿಂಗ್ ಇಲ್ಲದೆ ಪ್ರೇಮ್‌ ‘ವಿಲನ್’ ಸಿನಿಮಾ ಶುರು ಮಾಡಿದರಾ..? ಇದಕ್ಕೆ ಕಾರಣ ಯಾರು..?

ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರ ‘ದಿ ವಿಲನ್’. ಸಾಕಷ್ಟು ನಿರೀಕ್ಷೆಗಳೊಂದಿಗೆ ಸೆಟ್ಟೇರಿದ ಚಿತ್ರವಿದು. ಹೌದು, ಶಿವಣ್ಣ ಹಾಗೂ ಕಿಚ್ಚನ ಅಭಿಮಾನಿಗಳು ಕಳೆದ ಎರಡು ವರ್ಷಗಳಿಂದ ಕಾಯುತ್ತಿದ್ದಾರೆ. ಆದರೆ ಚಿತ್ರ ಇನ್ನು ವಿಳಂಬವಾಗುತ್ತಿದೆ.

ಯಜಮಾನ ಚಿತ್ರದಲ್ಲಿ ಧನಂಜಯ್ ವಿಲನ್ ಆಗಿ ಮಾಡುವುದಿಲ್ಲವಂತೆ.. ಧನಂಜಯ್ ಹೀಗೆ ಹೇಳಲು ಕಾರಣವೇನು?

ಶಿವರಾಜ್‍ಕುಮಾರ್ ಮತ್ತು ಸುದೀಪ್ ಕಾಂಬಿನೇಷನ್ ಮೊದಲ‌ ಸಿನಿಮಾ. ಅಭಿಮಾನಿಗಳು ಚಿತ್ರದ ಟ್ರೈಲರ್ ಕೂಡ ರಿಲೀಸ್ ಮಾಡಿಲ್ಲವೆಂದು ಬೇಸರಗೊಂಡಿದ್ದಾರೆ. ಆದರೆ ಇದಕ್ಕೆಲ್ಲಾ‌ ಕಾರಣ ಯಾರು..? ಹಾಗಿದ್ರೆ‌ ನಿರ್ದೇಶಕ ಪ್ರೇಮ್ ಪ್ಲಾನಿಂಗ್ ಇಲ್ಲದೆ ಸಿನಿಮಾ ಶುರು ಮಾಡಿದ್ರಾ..? ಹೀಗೊಂದು ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

ನಿರ್ದೇಶಕ ಪ್ರೇಮ್ ಚಿತ್ರವನ್ನು ಬೇಗ ಮುಗಿಸುತ್ತಿಲ್ಲ. ಪ್ರೇಮ್‌ ಹೇಳಿದಂತೆ ಆಗಿದ್ದರೆ ಚಿತ್ರ ಇಷ್ಟು ಹೊತ್ತಿಗೆ ತೆರೆಗೆ ಬರಲು ರೆಡಿಯಾಗಿರಬೇಕಿತ್ತು. ಆದರೆ, ಶೂಟಿಂಗ್ ಮುಗಿದಿಲ್ಲ. ಇನ್ನೂ 12 ದಿನದ ಶೂಟಿಂಗ್ ಬಾಕಿ ಇದೆಯಂತೆ.

ಮೈಸೂರಿಗೆ ಬಂದಿಳಿದ ಸಿಂಗಂನ ಎದುರಾಳಿ..! ಈ ಖಡಕ್ ವಿಲನ್ ದಾಸನಿಗೆ ಶರಣಾಗುತ್ತಾರಾ.!!

ವಿಲನ್ ಚಿತ್ರ ಯಾಕೆ ತಡವಾಯಿತು ಎಂದು ನನಗೂ ತಿಳಿದಿಲ್ಲ. ಇದನ್ನು ನಿರ್ದೇಶಕ ಪ್ರೇಮ್‌ ಅವರನ್ನೇ ಕೇಳಬೇಕು. ಒಂದು ವೇಳೆ‌ ನಾನೇನಾದರೂ ನಿರ್ದೇಶಕನಾಗಿದ್ದರೆ, ನಿರ್ಮಾಪಕರಿಗೆ ನಷ್ಟವಾಗದಂತೆ ಪ್ಲಾನ್ ಮಾಡಿ ಸಿನಿಮಾ ಮಾಡುತ್ತಿದ್ದೆ ಎಂದು ಶಿವಣ್ಣ ಟಗರು ಚಿತ್ರದ ಸಕ್ಸಸ್ ಮೀಟ್ ನಲ್ಲಿ ಹೇಳಿದರು.

ಮುಂದಿನ ದಿನಗಳಲ್ಲಿ ನಾನೇನಾದರೂ ನಿರ್ದೇಶನ ಮಾಡಿದ್ರೆ 7 ತಿಂಗಳೊಳಗೆ ಸಿನಿಮಾ‌ ಮಾಡಿ ಮುಗಿಸುತ್ತೇನೆ. ಸಿನಿಮಾ ಗೆಲ್ಲುವುದು ಬಿಡುವುದು ಎರಡನೇ ಮಾತು ಆದರೆ ಫಾಸ್ಟ್ ಆಗಿ ಸಿನಿಮಾ‌ ಮುಗಿಸುವೆ. ಎರಡು ವರ್ಷದವರೆಗೆ ಕಾಯಿಸುವುದಿಲ್ಲ, ಕಾಯುವುದರಿಂದ ಸಿನಿಮಾ ಗೆಲ್ಲುತ್ತೆ ಎಂದು ನನಗೆ ಅದರಲ್ಲಿ ನಂಬಿಕೆಯೂ ಇಲ್ಲ ಎಂದರು.

ಟಗರು 2 ಚಿತ್ರದಲ್ಲಿ ದರ್ಶನ್..!!? ಯಾವ ಪಾತ್ರ ಮಾಡ್ತಾರೆ ಗೊತ್ತಾ..!!

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

Leave a Reply

Top