You are here
Home > ವಾಹಿನಿ ಸುದ್ದಿ > ಟಗರು 2 ಚಿತ್ರದಲ್ಲಿ ದರ್ಶನ್..!!? ಯಾವ ಪಾತ್ರ ಮಾಡ್ತಾರೆ ಗೊತ್ತಾ..!!

ಟಗರು 2 ಚಿತ್ರದಲ್ಲಿ ದರ್ಶನ್..!!? ಯಾವ ಪಾತ್ರ ಮಾಡ್ತಾರೆ ಗೊತ್ತಾ..!!

ಚಿತ್ರರಂಗದ ಇಬ್ಬರು ಧೃವತಾರೆ ಒಂದೇ ಚಿತ್ರದಲ್ಲಿ..? ಹಾಗಿದ್ರೆ ಟಗರು 2 ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಿಗೆ ನಟಿಸುತ್ತಾರಾ..? ಎಲ್ಲದಕ್ಕೂ ಉತ್ತರ ಇಲ್ಲಿದೆ. ಟಗರು ಚಿತ್ರ ಮೊನ್ನೆಯಷ್ಟೆ ಗಾಂಧಿನಗರದಲ್ಲಿ ರಿಲೀಸ್ ಆಗಿ ಭರ್ಜರಿ ಪದರ್ಶನ ಕಾಣುತ್ತಿದೆ.

ದುನಿಯಾ ಸೂರಿ ನಿದರ್ಶನದ ಚಿತ್ರದಲ್ಲಿ ಧನಂಜಯ್ ಹಾಗೂ ವಸಿಷ್ಠ ಖಳನಾಯಕರಾಗಿ ಮಿಂಚಿದರು‌. ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ ಸೀಕ್ವೆಲ್ ‘ಟಗರು 2’ ಚಿತ್ರಕ್ಕಾಗಿ ಎಲ್ಲ ರೀತಿ ತಯಾರಿಗಳು ನಡೆಯುತ್ತಿದೆ.  ಹಾಗಿದ್ರೆ ದರ್ಶನ್ ‘ಟಗರು 2’ ಚಿತ್ರದಲ್ಲಿ ನಟಿಸುವುದು ನಿಜನಾ?

ಟಗರು – 2 ಗೆ ಸಿದ್ಧವಾಗಿರುವ ಸೂಪರ್ ಹಾಡು ಇಲ್ಲಿದೆ ನೋಡಿ..

‘ಟಗರು’ ಚಿತ್ರದಲ್ಲಿ ಧನಂಜಯ್ ವಿಲನ್ ಆಗಿ ಅಖಾಡಕ್ಕೆ ಇಳಿಸಿದರು. ಆದರೆ ‘ಟಗರು ಪಾರ್ಟ್ 2’ ಚಿತ್ರದಲ್ಲಿ ಶಿವಣ್ಣ ಎದುರಾಳಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನಿಲ್ಲಿಸುವ ಪ್ಲಾನ್ ಮಾಡ್ತಿದ್ದಾರಂತೆ ನಿರ್ದೇಶಕ ಸೂರಿ. ಹೌದು, ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಇದೇ ಹಾಟ್ ನ್ಯೂಸ್.

ಟಗರು ಶಿವ ಹಾಗೂ ಸುಲ್ತಾನ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ..? ಸದ್ಯಕ್ಕೆ ಈಗ ತಾನೆ‌ ಚಿತ್ರ ಬಿಡುಗಡೆಯಾಗಿದೆ, ಇನ್ನು ಈ ಚಿತ್ರದ ಕಥೆ ಬರೆದು ಮುಗಿಸಿದ ಮೇಲೆ‌ ಪಾತ್ರಗಳ ಬಗ್ಗೆ ಆಯ್ಕೆ‌ ಮಾಡಲಾಗುವುದು. ದರ್ಶನ್ ಜೊತೆ ಚಿತ್ರ ಮಾಡುವ ಪ್ಲಾನ್ ಇದೆ, ಬಟ್ ‘ಟಗರು 2’ ಚಿತ್ರನಾ ಅಥವಾ ಬೇರೆ ಚಿತ್ರನಾ ಅನ್ನೋದನ್ನು ಇನ್ನು ನಿರ್ಧರಿಸಿಲ್ಲ ಅಂತಿದ್ದಾರೆ ನಿದೇರ್ಶಕ ಸೂರಿ.‌

ಟಗರು ಸಿನಿಮಾ‌ ನೋಡ್ತೀದ್ದ ಅಭಿಮಾನಿಯೊಬ್ಬ ಥೇಟರ್ ನಲ್ಲಿ ಮಾಡಿದ್ದನ್ನ ನೋಡಿದ್ರೆ ನೀವೂ ಬೆಚ್ಚಿ ಬೀಳ್ತೀರಿ

ಲಾಂಗ್ ಹಿಡಿದ ಇಬ್ಬರು ಸ್ಟಾರ್ ನಟರು ಒಟ್ಟಿಗೆ ಒಂದೇ ಚಿತ್ರದಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವುದು ಸತ್ಯ. ಇಬ್ಬರು ಒಂದೇ ಚಿತ್ರದಲ್ಲಿ ನೋಡಬೇಕು ಅಂದ್ರೆ ನಿರ್ದೇಶಕ ಸೂರಿ ನಿರ್ಧರಿಸಬೇಕು. ಅಲ್ಲಿಯವರೆಗೆ ಅಭಿಮಾನಿಗಳು ಕಾಯಬೇಕು.

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

Leave a Reply

Top