You are here
Home > ವಾಹಿನಿ ಸುದ್ದಿ > ಕಾಮಿಡಿ ಶೋನಿಂದ ಬಿಗ್ ಬಾಸ್ ಸಂಜನಾಗೆ ಗೇಟ್ ಪಾಸ್.. ಕಿಕ್ ಔಟ್ ಮಾಡಲು ಕಾರಣವೇನು ಗೊತ್ತಾ..?

ಕಾಮಿಡಿ ಶೋನಿಂದ ಬಿಗ್ ಬಾಸ್ ಸಂಜನಾಗೆ ಗೇಟ್ ಪಾಸ್.. ಕಿಕ್ ಔಟ್ ಮಾಡಲು ಕಾರಣವೇನು ಗೊತ್ತಾ..?

ಸಂಜನಾ ಬಿಗ್ ಬಾಸ್ ಮುಗಿದ್ಮೇಲೆ ‘ಸಂಜು ಮತ್ತು ನಾನು’ ಸೀರಿಯಲ್ ನಲ್ಲಿ ಕಾಣಿಸಿಕೊಂಡರು, ಇದಾದನಂತರ ಖಾಸಗಿ ಚಾನೆಲ್ ನ‌ ‘ಭರ್ಜರಿ ಕಾಮಿಡಿ’ ಶೋ‌ನಲ್ಲಿ ಪಾಲ್ಗೊಂಡರು. ಆದರೆ‌ ಕಾಮಿಡಿ ಶೋ ಪ್ರಾರಂಭವಾಗಿ ಕೆಲವೇ ವಾರಗಳಲ್ಲಿ ಸಂಜನಾ ಕಣ್ಮರೆಯಾಗಿದ್ದಾರೆ.

ಇದೀಗ ಸಂಜನಾ ಅವರನ್ನ ಭರ್ಜರಿ ಕಾಮಿಡಿ ಶೋನಿಂದ ಗೇಟ್‌ ಪಾಸ್ ನೀಡಲಾಗಿದೆ. ಆದರೆ ಇದ್ದಕ್ಕಿದ್ದಂತೆ ಶೋನಿಂದ ಸಂಜನಾ ಅವರನ್ನು ಹೊರ ಹಾಕಲು ಕಾರಣ..? ಇಲ್ಲಿದೆ…!! ಸಂಜನಾ ರಿಹರ್ಸಲ್ ಸೇರಿದಂತೆ ಯಾವುದಕ್ಕೂ ಹೇಳಿದ ಸಮಯಕ್ಕೆ ಹಾಜರಾಗುತ್ತಿರಲಿಲ್ಲವಂತೆ.

ಪ್ರಥಮ್ ನಂತರ ಸಂಜನಾಗೆ ಕೂಡಿ ಬಂತು ಕಂಕಣ ಭಾಗ್ಯ..

ಸಂಜನಾ ಅವರನ್ನು ಕಾರಣ ಕೇಳಿದಾಗ‌‌ ನಾನು ಹೈದ್ರಾಬಾದಿನಲ್ಲಿ ತೆಲುಗು ಸೀರಿಯಲ್ ಮಾಡ್ತಿದೀನಿ. ಡೇಟ್ಸ್ ಪ್ರಾಬ್ಲಂ ಆಗುತ್ತೆ ಎನ್ನುತ್ತಿದ್ದಾರೆ‌. ಹೀಗಾಗಿ ಕಾರ್ಯಕ್ರಮದ‌ ಆಯೋಜಕರು‌ ಶೋ‌ನಿಂದ ಹೊರ ಕಳುಹಿಸಿದ್ದಾರೆ ಅನ್ನೋ ಸುದ್ದಿ ಕೇಳಿ‌ ಬಂದಿದೆ.‌

ಒಟ್ಟಿನಲ್ಲಿ ಎಂದಿನಂತೆ ಸಂಜನಾ‌ ಈ ಕಾರ್ಯಕ್ರಮವನ್ನು ಅರ್ಧಕ್ಕೆ ಕೈ ಬಿಟ್ಟಿದ್ದಾರೆ‌ ಅನ್ನೋ‌ ಮಾತು ಪ್ರೇಕ್ಷಕರಿಂದ ವ್ಯಕ್ತವಾಗಿದೆ.

ಭುವನ್-ಸಂಜನಾ ಎಂಗೆಜ್ಮೆಂಟ್ ಕಾರ್ಡ್ ರೆಡಿ.. ಗಾಸಿಪ್ ನಿಜವಾಗೋಯ್ತಾ..?

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

Leave a Reply

Top