You are here
Home > ವಾಹಿನಿ ಸುದ್ದಿ > ಬಿಜೆಪಿಗೆ ಸೇರಲಿದ್ದಾರಾ ಉಪೇಂದ್ರ..!!?

ಬಿಜೆಪಿಗೆ ಸೇರಲಿದ್ದಾರಾ ಉಪೇಂದ್ರ..!!?

ಹಲವಾರು ಕನಸುಗಳು ಹೊತ್ತು ರಾಜಕೀಯಕ್ಕೆ ಬಂದ ನಟ ಉಪೇಂದ್ರ, ಇದೀಗ ಕೆಪಿಜೆಪಿ ಪಕ್ಷದಿಂದ ಹೊರ ಬರುವ ಸಾಧ್ಯತೆ ಇದೆ. ಹೌದು, ಟಿಕೆಟ್ ವಿಚಾರದಲ್ಲಿ ಕೆಪಿಜೆಪಿ ಸಹ ಸಂಸ್ಥಾಪಕ ಮಹೇಶ್ ಗೌಡ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.

ತಾನೆ‌ ಕಟ್ಟಿದ‌ ಪ್ರಜಾಕೀಯ ಪಕ್ಷದಿಂದ ಹೊರಬರಲಿರುವ ಉಪೇಂದ್ರ..!!?

ರಾಜಕೀಯ ಹೊಸ ಅಲೆ ಸೃಷ್ಟಿಸಲು, ರಾಜಕೀಯಕ್ಕೆ ಪ್ರವೇಶಿಸಿದ ಉಪೇಂದ್ರ ಹಾಗೂ ಇವರ ಬೆಂಬಲಿಗರು ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯನ್ನು ಎದುರಿಸುವ ಸಾಧ್ಯತೆ ಇದೆ.

ಉಪೇಂದ್ರ ಅವರು ಮತ್ತೊಂದು ಹೊಸ ಪಕ್ಷವನ್ನು ಸ್ಥಾಪಿಸಿ, ಚುನಾವಣೆ ಎದುರಿಸುವುದು ಕಷ್ಟವಲ್ಲ. ಆದರೆ, ಚುನಾವಣಾ ಆಯೋಗದ ಅನುಮತಿ ಸಿಗುವುದು ಕಷ್ಟ. ಮಾನ್ಯತೆ ಇಲ್ಲದ ಕಾರಣ, ಇವರನ್ನು ಪಕ್ಷೇತರ ಅಭ್ಯರ್ಥಿಯಂದೇ ಪರಿಗಣಿಸಲಾಗುತ್ತದೆ.

3 ಪೆಗ್ ಹಾಡಿನ ವಿವಾದಕ್ಕೆ‌ ತೆರೆ ಎಳೆದ‌ ಚಂದನ್‌ ಶೆಟ್ಟಿ..! ವಿಜೇತ್ ಆರೋಪಕ್ಕೆ ಚಂದನ್ ಕೊಟ್ಟ ಉತ್ತರವಿದು..!!

ಇನ್ನೊಂದೆಡೆ ಉಪೇಂದ್ರ ಬಿಜೆಪಿ ಪಕ್ಷಗೆ ಸೇರಲಿದ್ದಾರೆ ಅನ್ನೋ ವದಂತಿಗಳು ಕೇಳಿಬರ್ತಿದೆ. ಹೌದು, ಪ್ರಜ್ಞಾವಂತ ಪಕ್ಷದಲ್ಲಿ ಭಿನ್ನಮತ ಸ್ಟೋಟಗೊಂಡ ಹಿನ್ನೆಲೆಯಲ್ಲಿ ಉಪೇಂದ್ರ ಭಿನ್ನಮತದಿಂದ ಬಿಜೆಪಿ ಸೇರುತ್ತಾರೆ ಅನ್ನೋ‌ ಮಾತುಗಳು ಕೇಳಿ ಬರುತ್ತಿದೆ. ಆದರೆ ಅಭ್ಯರ್ಥಿಗಳ ಜೊತೆ ನಾಳೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಹಾಗೂ ಅಂತಿಮ‌ ನಿರ್ಧಾರ ತಿಳಿಯಲಿದೆ.

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Leave a Reply

Top