You are here
Home > ವಾಹಿನಿ ಸುದ್ದಿ > ಶ್ರೀದೇವಿ ಸತ್ತಾಗ ಸಾಂಗ್ಸ್ ಹಾಕ್ತಿರಾ ಓಕೆ, ಸನ್ನಿ ಸತ್ತಾಗ ಏನ್ಮಾಡ್ತೀರಾ? ಹೀಗೆ ಮಾಧ್ಯಮದವರಿಗೆ ಪ್ರಶ್ನೆ ಕೇಳಿದ್ಯಾರು ಗೊತ್ತಾ?

ಶ್ರೀದೇವಿ ಸತ್ತಾಗ ಸಾಂಗ್ಸ್ ಹಾಕ್ತಿರಾ ಓಕೆ, ಸನ್ನಿ ಸತ್ತಾಗ ಏನ್ಮಾಡ್ತೀರಾ? ಹೀಗೆ ಮಾಧ್ಯಮದವರಿಗೆ ಪ್ರಶ್ನೆ ಕೇಳಿದ್ಯಾರು ಗೊತ್ತಾ?

ಬಾಲಿವುಡ್ ನಟಿ ಶ್ರೀದೇವಿ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಟಿವಿಯಲ್ಲಿ ಶ್ರೀದೇವಿ ಕುರಿತು ಹಲವಾರು ಕಾರ್ಯಕ್ರಮಗಳು ಮಾಡಲಾಯಿತು. ಆಕೆ ನಟಿಸಿದ ಸಿನಿಮಾ ಹಾಡುಗಳು ಹಾಗೂ ದೃಶ್ಯ ಎಲ್ಲವನ್ನೂ ಪ್ರಸಾರ‌ ಮಾಡಲಾಯಿತು.

ಮೃತಪಟ್ಟಿದ್ದು ಶ್ರೀದೇವಿ, ಆದರೆ ಚರ್ಚೆಯಾಗಿದ್ದು ಸನ್ನಿ ಲಿಯೋನ್! ಹೌದು, ಸನ್ನಿ ಲಿಯೋನ್ ಮೃತಪಟ್ಟರೆ ಏನು ಪ್ರಸಾರ ಮಾಡುತ್ತಾರೆ? ಎಂದು ನಟಿಯೊಬ್ಬರು ಪ್ರಶ್ನಿಸಿದ್ದಾರೆ. ಆ ನಟಿ ಯಾರು ಗೊತ್ತಾ..?

ಈ ನಟನಿಗಾಗಿ ತನ್ನ ಗಂಡ ಬೋನಿ ಕಪೂರ್ ಗೆ ರಾಖಿ ಕಟ್ಟಿದ್ದ ಶ್ರೀದೇವಿ..!

ಈ ನಟಿ ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ಅದು ಬೇರೆ ಯಾರು ಅಲ್ಲ‌ ಕಸ್ತೂರಿ.. ಸದಾ ಒಂದಲ್ಲಾ‌ ಒಂದು ವಿವಾದಗಳಿಂದ ಸುದ್ದಿಯಾದ ನಟಿ ಈ ಕಸ್ತೂರಿ. ಇದೀಗ ಮತ್ತೆ ವಿವಾದಾತ್ಮಕ ಹೇಳಿಕೆ ಮೂಲಕ ಎಲ್ಲೆಡೆ ಸುದ್ದಿಯಾಗಿದ್ದಾರೆ.

ತಮ್ಮ ಟ್ವಿಟರ್​ನಲ್ಲಿ ಬಾಲಿವುಡ್​ ನಟಿ ಸನ್ನಿ ಲಿಯೋನ್ ಅವರ ಬಗ್ಗೆ ಟ್ವೀಟ್ ಮಾಡುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪತ್ನಿ ಸಾವಿನ ಬಗ್ಗೆ ಕೊನೆಗೂ ಬಾಯಿಬಿಟ್ಟ ಪತಿ ಬೋನಿ ಕಪೂರ್..! ಸಾವಿನ ಬಗ್ಗೆ ಹೇಳಿದ್ದೇನು..?

ಶ್ರೀದೇವಿ ಮೃತಪಟ್ಟರೆಂದು ಎಲ್ಲಾ ಸುದ್ದಿ ವಾಹಿನಿಗಳು ಅವರ ಹಾಡನ್ನು, ವೀಡಿಯೋವನ್ನೇ ಪ್ರಸಾರಮಾಡುತ್ತಿವೆ. ಒಂದು ವೇಳೆ ಸನ್ನಿ ಲಿಯೋನ್ ಮೃತಪಟ್ಟರೆ ಏನು ಮಾಡುತ್ತಾರೆ? ಎಂದು ಕಸ್ತೂರಿ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೇಕೆಗಳು ಕೇಳಿಬರುತ್ತಿದೆ.‌

ನಟಿ ಶ್ರೀದೇವಿ ಅಂತಿಮಯಾತ್ರೆ ವೇಳೆ‌ ಬಣ್ಣದ ಸೀರೆಯನ್ನು ಕುಟುಂಬ‌ ಸದಸ್ಯರು ತೊಡಿಸಿದ್ಯಾಕೆ?

ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ಕಸ್ತೂರಿಯವರು, ಫೇಸ್​ಬುಕ್​ನಲ್ಲಿ ಬಂದ ಜೋಕ್ ​ಒಂದನ್ನು ಹಂಚಿಕೊಂಡಿರುವೆ ಅಷ್ಟೆ’ ಎಂದು ಹೇಳಿದ್ದಾರೆ.‌

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Leave a Reply

Top