You are here
Home > ವಾಹಿನಿ ಸುದ್ದಿ > ಯಜಮಾನ ಚಿತ್ರದಲ್ಲಿ ಧನಂಜಯ್ ವಿಲನ್ ಆಗಿ ಮಾಡುವುದಿಲ್ಲವಂತೆ.. ಧನಂಜಯ್ ಹೀಗೆ ಹೇಳಲು ಕಾರಣವೇನು?

ಯಜಮಾನ ಚಿತ್ರದಲ್ಲಿ ಧನಂಜಯ್ ವಿಲನ್ ಆಗಿ ಮಾಡುವುದಿಲ್ಲವಂತೆ.. ಧನಂಜಯ್ ಹೀಗೆ ಹೇಳಲು ಕಾರಣವೇನು?

ಅದು ಯಾವ ಘಳಿಗೆಯಲ್ಲಿ ಟಗರು ಚಿತ್ರ ಬಿಡುಗಡೆಯಾಯಿತು ಧನಂಜಯ್ ಅವರ ಅದೃಷ್ಟ ಖುಲಾಯಿಸಿದೆ. ಹೌದು, ಧನಂಜಯ್ ಅವರ ನಟನೆ ಹಾಗೂ ಡಾಲಿ ಪಾತ್ರ ಎಲ್ಲರ ಮನಸ್ಸಿನಲ್ಲಿ ಕೂತುಬಿಟ್ಟಿದೆ. ಇನ್ನು ಟಗರು ಆದ್ಮೇಲೆ ವಾಟ್ ನೆಕ್ಸ್ಟ್ ಎನ್ನುವಾಗ ದರ್ಶನ್ ‘ಯಜಮಾನ’ ಚಿತ್ರದಲ್ಲಿ ಇವರೆ ವಿಲನ್ ಎನ್ನಲಾಯಿತು‌.

ಆದರೆ ಧನಂಜಯ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲವಂತೆ.. ಹಾಗಿದ್ರೆ ಈ ಸುದ್ದಿ ಸುಳ್ಳಾ?
ಬಹಳ ದಿನಗಳ ಹಿಂದೆ ಯಜಮಾನ ಚಿತ್ರದಲ್ಲಿ ಧನಂಜಯ್‌ ನಟಿಸುತ್ತಿದ್ದಾರೆ ಎಂದು ಸುದ್ದಿಯಾಯಿತೋ, ಆಗಿಂದ ಅವರು ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು.

ದರ್ಶನ್ ಜೊತೆಗಿನ ಒಡನಾಟಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಪವಿತ್ರ ಗೌಡ..!

ಆದರೆ ಈ ಬಗ್ಗೆ ಧನಂಜಯ್ ಹೇಳಿದ್ದೆ ಬೇರೆ. ಹಾಗಿದ್ರೆ ವಿಲನ್ ಪಾತ್ರ ಯಾರು ಮಾಡ್ತಾರೆ? ಎಲ್ಲದಕ್ಕೂ ಇಲ್ಲಿದೆ ಉತ್ತರ.. ‘ಯಜಮಾನ’ ಚಿತ್ರದಲ್ಲಿ ‘ವಿಲನ್‌ ಅನ್ನೋಕ್ಕಿಂತ ವಿರೋಧಿಯ ಪಾತ್ರ’. ಹಳ್ಳಿಯಲ್ಲಿ ದರ್ಶನ್‌ ಅವರ ವಿರೋಧಿಯ ಪಾತ್ರವನ್ನು ನಾನು ಮಾಡುತ್ತಿದ್ದೇನೆ. ವಿಲನ್‌ ಎನ್ನುವುದಕ್ಕಿಂತ ಸ್ವಲ್ಪ ನೆಗೆಟಿವ್‌ ಶೇಡ್‌ ಇರುವ ಪಾತ್ರ ಅದು ಎನ್ನುತ್ತಾರೆ ಧನಂಜಯ್.

ಯಾಕೆ ವಿರೋಧ ಮಾಡುತ್ತೀನಿ ಎನ್ನುವುದನ್ನು ಚಿತ್ರದಲ್ಲೇ ನೋಡಬೇಕು. ನಾಳೆಯಿಂದ ‘ಯಜಮಾನ’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಮೈಸೂರಿಗೆ ಹೊರಟಿದ್ದಾರೆ. ದರ್ಶನ್‌ ಎದುರು ನಟಿಸುವುದಕ್ಕೆ ಎಕ್ಸೈಟ್ ಆಗಿದ್ದಾರಂತೆ.

ದಿನಕರ್ ತೂಗುದೀಪ್ ತನ್ನ ಅಣ್ಣ ದರ್ಶನ್ ಅವರನ್ನ ಬಿಗಿದಪ್ಪಿ ಅತ್ತಿದ್ದು ಯಾಕೆ ಗೊತ್ತಾ..?

ಇನ್ನು ‘ಟಗರು’ ಚಿತ್ರದ ಬಗ್ಗೆ ನಟ ಧನಂಜಯ್ ಅವರಿಗೆ ಸತತವಾಗಿ ಪ್ರತಿಕ್ರಿಯೆಗಳು ಬರುತ್ತಿವೆಯಂತೆ. ಟಗರು ಒಂದು ಅದ್ಭುತ ಅಧ್ಯಾಯ. ಟಗರು ತಂಡಕ್ಕೆ ನಾನು ಯಾವತ್ತೂ ಆಭಾರಿ ಎನ್ನುತ್ತಾರೆ ಧನಂಜಯ್‌.

ಟಗರು ಡೈರೆಕ್ಟರ್ ಸೂರಿ ಅವರಿಗೆ ಲೇ ಗಾ* ಅಂತ ಬೈದಾ ಹುಚ್ಚಾ ವೆಂಕಟ್..! ವಿಡಿಯೋ ಇಲ್ಲಿದೆ ನೋಡಿ

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

 

Comments

comments

Similar Articles

Leave a Reply

Top