You are here
Home > ವಾಹಿನಿ ಸುದ್ದಿ > ದರ್ಶನ್ ಜೊತೆಗಿನ ಒಡನಾಟಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಪವಿತ್ರ ಗೌಡ..!

ದರ್ಶನ್ ಜೊತೆಗಿನ ಒಡನಾಟಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಪವಿತ್ರ ಗೌಡ..!

ಪವಿತ್ರ ಗೌಡ ಎಂದ ಕೂಡಲೇ ಮೊದಲು ನೆನಪಿಗೆ ಬರೋದು ದರ್ಶನ್. ಯಾಕೆಂದರೆ ಪವಿತ್ರ ಹೆಚ್ಚಾಗಿ ಗುರುತಿಕೊಳ್ಳಲು ಕಾರಣ ದರ್ಶನ್ ಜೊತೆಗಿರುವ ಫೋಟೋಗಳು. ಹೌದು, ದರ್ಶನ್ ಜೊತೆಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ದೊಡ್ಡ ಮಟ್ಟದಲ್ಲಿ ಈಕೆ ಸುದ್ದಿಯಾದರು.

ದರ್ಶನ್ ಫೋಟೋ ಹಾಕಿದ ನಂತರ ಅಭಿಮಾನಿಗಳು ಕೇಳಿದ‌ ಪ್ರಶ್ನೆ, ದರ್ಶನ್ ನಿಮಗೆ ಏನಾಗ್ಬೇಕು? ಅವರು ನಿಮಗೆ ಸ್ನೇಹಿತರಾ? ಎನ್ನುವ ಪ್ರಶ್ನೆಗಳೇ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದು ಬಂದವು. ಇದಕ್ಕೆ ಉತ್ತರವಾಗಿ ದರ್ಶನ್ ಅವರನ್ನೇ ಕೇಳಿ ಎಂದಿದ್ದರೂ ಪವಿತ್ರ.

ದರ್ಶನ್ ಕಿರೀಟಕ್ಕೆ ಮತ್ತೊಂದು ಬಿರುದು ಸೇರ್ಪಡೆ.. ಅಭಿಮಾನಿಗಳಿಗೆ ಖುಷಿಯೋ ಖುಷಿ…!!

ಇದು ದರ್ಶನ್ ಅಭಿಮಾನಿಗಳು ಸೇರಿದಂತೆ ಎಲ್ಲರಲ್ಲೂ ಗೊಂದಲು ಮೂಡಲು ಕಾರಣವಾಯಿತು. ನಂತರ ಅಭಿಮಾನಿಗಳು ಮೊದಲು ದರ್ಶನ್ ಜೊತೆಗಿರುವ ಫೋಟೋ ತೆಗೆದು ಹಾಕಿ ಎಂದು ಒತ್ತಡಗಳು ಹೆಚ್ಚಾಗಿಯಿತು. ಆದರೆ ನಟಿ ಪವಿತ್ರ ಗೌಡ ಯಾರ ಮಾತಿಗೂ ಕಿವಿ ಕೊಡಲೆ ಇಲ್ಲ..

ಇಷ್ಟೆಲ್ಲಾ ಆದ್ಮೇಲೆ ಮತ್ತೊಂದು ಫೋಟೋ ಲೀಕ್ ಆಯಿತು. ಅದೇ ಕುರುಕ್ಷೇತ್ರ ಸೆಟ್ ಗೆ ಭೇಟಿ ನೀಡಿದ ಫೋಟೋ. ಈ ಫೋಟೋ ಬಹಳ ವೈರಲ್ ಕೂಡ ಆಯಿತು. ಇದರಿಂದ ಅಭಿಮಾನಿಗಳು‌ ಮತ್ತಷ್ಟು ಗೊಂದಲಕ್ಕೆ ಸಿಲುಕಿದರು. ಇದಕ್ಕೆ ಪವಿತ್ರ ನಾವಿಬ್ಬರು ಫ್ರೆಂಡ್ಸ್ ಅಷ್ಟೇ ಬೇರೆ ಏನು ಇಲ್ಲ ಎಂದು ಹೇಳಿ ಜಾರಿಕೊಂಡರು.

ಸುದೀಪ್-ದರ್ಶನ್ ಅವರ ಬಗ್ಗೆ ಯಶ್ ಹೇಳಿದ್ದನ್ನ ಕೇಳಿದ್ರೆ ಫ್ಯಾನ್ಸ್ ಖುಷಿಯಾಗೋದು ಗ್ಯಾರಂಟಿ…

ಆದರೆ ಯಾವುದಕ್ಕೂ ದರ್ಶನ್ ಮಾತ್ರ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಎಲ್ಲೆಡೆ ದರ್ಶನ್ ಬಾಳಿನಲ್ಲಿ ಹೊಸ ಹುಡುಗಿಯ ಪ್ರವೇಶ ಆಗಿರಬೇಕು ಅನ್ನೋ ಮಾತುಗಳು ಶುರುವಾಯಿತು. ಆದರೆ ಅಭಿಮಾನಿಗಳು ಮಾತ್ರ ದಿನದಿಂದ ದಿನಕ್ಕೆ ಪವಿತ್ರ ಅವರನ್ನು ಸಾವಿರಾರು ಪ್ರಶ್ನೆಗಳು ಕೇಳಲು ಪ್ರಾರಂಭಿಸಿದರು.

ಈ ಸಂರ್ದಭದಲ್ಲಿ ದರ್ಶನ್, ಪತ್ನಿ ವಿಜಯಲಕ್ಷ್ಮಿ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡಿದರು. ಎಲ್ಲವೂ ಸರಿ ಇದೆ ಎನ್ನುವ ಟೈಮ್ ನಲ್ಲಿ ಪವಿತ್ರ ಹಾಕುತ್ತಿರುವ ಫೋಟೋಗಳು ಮತ್ತೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ಹೌದು, ಪವಿತ್ರ ಗೌಡ ಅವರ ಮತ್ತೊಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲು ಶುರುವಾಯಿತು. ಅದೇ ದರ್ಶನ್ ತಾಯಿ ಹಾಗೂ ಅಕ್ಕ ಜೊತೆ ತೆಗೆಸಿಕೊಂಡ ಫೋಟೋ. ದರ್ಶನ್ ಹುಟ್ಟುಹಬ್ಬದಂದು ಪವಿತ್ರ ಅವರ ಫ್ಯಾಮಿಲಿ ಜೊತೆಗಿರುವ ಫೋಟೋ ಟ್ವಿಟರ್ ಹಾಗೂ ಫೇಸ್‌ಬುಕ್‌ ನಲ್ಲಿ ಹಾಕಿದರು.

ದರ್ಶನ್ ಫ್ಯಾಮಿಲಿ ಜೊತೆ ಕಾಣಿಸಿಕೊಂಡ ಪವಿತ್ರ ಗೌಡ. ದರ್ಶನ್ ಫ್ಯಾಮಿಲಿ ಭೇಟಿಯಾಗಲು ಕಾರಣವೇನು..?

ಇದರಿಂದ ಮತ್ತಷ್ಟು ಬೆಂಕಿ ಹಚ್ಚಿಕೊಂಡಿತ್ತು. ಅಭಿಮಾನಿಗಳು ಪವಿತ್ರ ಅವರಿಗೆ ಫುಲ್ ಕ್ಲಾಸ್ ತೆಗೆದುಕೊಂಡರು. ದರ್ಶನ್ ಅವರು ನಿಮಗೆ ಏನಾಗ್ಬೇಕು, ದರ್ಶನ್ ಅವರು ನಿಮ್ಮನ್ನು ಮದುವೆಯಾಗುತ್ತಿದ್ದಾರಾ ಎಂದೆಲ್ಲಾ ಕಾಮೆಂಟ್ ಗಳು ಪ್ರಾರಂಭವಾಯಿತು.

ಇದೆಲ್ಲಾ ನಡೆದು ತುಂಬಾ ದಿನಗಳೇ ಕಳೆದಿದೆ ಆದರೆ, ಪವಿತ್ರಾ ಗೌಡ ಇದ್ದಕ್ಕಿದ್ದಂತೆ ಫೇಸ್‌ಬುಕ್‌ ಹಾಗೂ ಟ್ವಿಟರ್ ನಲ್ಲಿ ದರ್ಶನ್ ಜೊತೆಗಿರುವ ಎಲ್ಲಾ ಫೋಟೋ ಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಯಾಕೆ ಫೋಟೋಗಳನ್ನು ತೆಗೆದು ಹಾಕಿದ್ದಾರೆ ಅನ್ನೋದು ಮಾತ್ರ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಇದಕ್ಕೆ ಕಾರಣವಾದರೂ ಏನು.?

ಪ್ರಶ್ನೆ ಪ್ರಶ್ನೆಯಾಗಿ ಉಳಿದಿದೆ. ಒಟ್ಟಿನಲ್ಲಿ ಬಹಳ ವರ್ಷಗಳ ನಂತರ ಒಂದಾದ ದಂಪತಿಗಳ ನಡುವೆ ಯಾರೂ ಬರಬಾರದು ಅಂತ ಇದಕ್ಕೆ ಹೇಳುವುದು ಅನಿಸುತ್ತೆ. ಈ ನಡುವೆ ಪವಿತ್ರ ಗೌಡ ಅವರ ಪತಿರಾಯ ಸಂಜಯ್ ಪವಿತ್ರಗಾಗಿ ಕಾದು ಕುಳಿತಿದ್ದಾರಂತೆ..

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Leave a Reply

Top