You are here
Home > ವಾಹಿನಿ ಸುದ್ದಿ > ಪತ್ನಿ ಸಾವಿನ ಬಗ್ಗೆ ಕೊನೆಗೂ ಬಾಯಿಬಿಟ್ಟ ಪತಿ ಬೋನಿ ಕಪೂರ್..! ಸಾವಿನ ಬಗ್ಗೆ ಹೇಳಿದ್ದೇನು..?

ಪತ್ನಿ ಸಾವಿನ ಬಗ್ಗೆ ಕೊನೆಗೂ ಬಾಯಿಬಿಟ್ಟ ಪತಿ ಬೋನಿ ಕಪೂರ್..! ಸಾವಿನ ಬಗ್ಗೆ ಹೇಳಿದ್ದೇನು..?

ನಟಿ ಶ್ರೀದೇವಿ ಸಾವಿನ ಬಳಿಕ ಆಕೆಯ ಪತಿ ಬೋನಿ ಕಪೂರ್​ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು, ಬೋನಿ‌ ಕಪೂರ್ ಪತ್ನಿ ಶ್ರೀದೇವಿ ಸಾವಿನ ಬಗ್ಗೆ ‌ಎಲ್ಲಿಯೂ ಮಾತನಾಡಿಲ್ಲ.‌ ಆದರೆ‌ ಮೊದಲ ಬಾರಿಗೆ ಮೌನ ಮುರಿದ್ದಾರೆ..

ಬೋನಿ ಕಪೂರ್ ಶ್ರೀದೇವಿ ಅವರನ್ನು ನೆನೆದು ಭಾವುಕರಾಗಿ ಟ್ವಿಟರ್​ ಮೂಲಕ ಪತ್ರ ಬರೆದು ಸಾವಿನ ನೋವನ್ನು ಹೊರಹಾಕಿದ್ದಾರೆ. ಬೋನಿ ಕಪೂರ್ ಬರೆದ ಪತ್ರದಲ್ಲಿ ಏನಿದೆ..? ಇಲ್ಲಿದೆ ನೋಡಿ…

ಕುಟುಂಬದ ಮುಂದೆಯೇ ಪ್ರಾಣ ಬಿಟ್ಟ ನಟಿ ಶ್ರೀದೇವಿ.. ಸಾವಿಗೆ ಕಾರಣವಾಯ್ತು ಈ ಖಾಯಿಲೆ

ನಾನು ನನ್ನ ಗೆಳತಿಯನ್ನು ಕಳೆದುಕೊಂಡಿದ್ದೇನೆ. ಅದಕ್ಕಿಂತಲೂ ಹೆಚ್ಚಾಗಿ ಎರಡು ಹೆಣ್ಣು ಮಕ್ಕಳ ತಾಯಿಯನ್ನು ಕಳೆದುಕೊಂಡಿದ್ದೇನೆ. ಶ್ರೀದೇವಿ ಇಲ್ಲ ಅನ್ನೋ ನೋವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ.

ಹೊರ ಜಗತ್ತಿಗೆ ಶ್ರೀದೇವಿ ಅಂದರೆ ಚಾಂದನಿ, ಅದ್ಭುತ ನಟಿ. ಆದರೆ ನನಗೆ ನನ್ನ ಪ್ರೀತಿ, ಸ್ನೇಹಿತೆ, ನನ್ನ ಮಕ್ಕಳ ತಾಯಿ, ಅಷ್ಟೇ ಅಲ್ಲ ನಮ್ಮ ಕುಟುಂಬದ ಆಧಾರ ಸ್ತಂಭ.

ಕನ್ನಡ ಚಿತ್ರರಂಗದಲ್ಲಿ ಶ್ರೀದೇವಿ ಮುಖ್ಯ ಪಾತ್ರದಲ್ಲಿ ಯಾಕೆ‌ ಕಾಣಿಸಿಕೊಳ್ಳಲಿಲ್ಲ ಗೊತ್ತಾ..

ಪತ್ನಿಯಾಗಿ ನನ್ನನ್ನು, ತಾಯಿಯಾಗಿ ಜಾಹ್ನವಿ ಹಾಗೂ ಖುಷಿಯನ್ನು ಶ್ರೀದೇವಿ ಬಿಟ್ಟು ಹೋಗಿದ್ದಾಳೆ. ಈ ಸಮಯದಲ್ಲಿ ನನ್ನ ಮನವಿ ಒಂದೇ. ನಮ್ಮ ವೈಯಕ್ತಿಕ ಬದುಕನ್ನು ಗೌರವಿಸಿ. ಶ್ರೀದೇವಿ ಬಗ್ಗೆ ಮಾತನಾಡಬೇಕು ಎನಿಸಿದರೆ ಆಕೆ ಎಲ್ಲರ ಮನಗೆದ್ದ ವಿಚಾರದ ಬಗ್ಗೆ ಮಾತನಾಡಿ. ಅವಳನ್ನು ಪ್ರೀತಿಸಿ, ಗೌರವಿಸಿ.

ಶ್ರೀದೇವಿ ಸಾವಿನ ಸಮಯದಲ್ಲಿ ಮಾನಸಿಕ ಬೆಂಬಲ, ಸಹಕಾರ ನೀಡಿದ ಸ್ನೇಹಿತರು, ಕುಟುಂಬಸ್ಥರು, ಅಭಿಮಾನಿಗಳಿಗೆ ಸದಾ ಕೃತಜ್ಞನಾಗಿರುತ್ತೇನೆ. ಅರ್ಜುನ್​ ಮತ್ತು ಅಂಶುಲಾ ನನ್ನ ಹಾಗೂ ಜಾಹ್ನವಿ, ಖುಷಿಗೆ ಬೆನ್ನೆಲುಬಾಗಿ ನಿಂತರು. ಎಲ್ಲರೂ ಒಟ್ಟಾಗಿ ದುಃಖದ ಸಂದರ್ಭವನ್ನು ಎದುರಿಸಲೇ ಬೇಕಾಗಿದೆ.

ಸದ್ಯ ನನ್ನ‌ ಬದುಕಿನ ಕಾಳಜಿ, ಶ್ರೀದೇವಿ ಇಲ್ಲದೆ ನನ್ನ ಮಕ್ಕಳು ಹಾಗೂ ಕುಟುಂಬವನ್ನ ಮುನ್ನಡೆಸುವುದು. ಆಕೆ ನನ್ನ ಉಸಿರು.. ಬದುಕಿನ ಶಕ್ತಿ.. ನನ್ನ ಪ್ರತಿಕ್ಷಣದ ನಗುವಿನ ಕಾರಣ.

“ನನ್ನ ಪ್ರೀತಿಯೇ.. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ.. ನಮ್ಮ ಜೀವನ ಈ ಹಿಂದಿನಂತೆ ಇರಲ್ಲ..”

ನಟಿ ಶ್ರೀದೇವಿ ಅಂತಿಮಯಾತ್ರೆ ವೇಳೆ‌ ಬಣ್ಣದ ಸೀರೆಯನ್ನು ಕುಟುಂಬ‌ ಸದಸ್ಯರು ತೊಡಿಸಿದ್ಯಾಕೆ?

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

Leave a Reply

Top