ಏನಿದು ಹೊಸ ಕಿಡಿ… ಯಶ್ ಗೆ ಡೈಲಾಗ್ ನಲ್ಲೇ ಟಾಂಗ್ ಕೊಟ್ಟ ಟಗರು ಶಿವ!? ಏನದು ಡೈಲಾಗ್..?

ಟಗರು…!! ಮೈ ತುಂಬ ಪೊಗರು.. ಹೌದು, ಎಲ್ಲಿ ನೋಡಿದರೂ, ಯಾರ ಬಾಯಿಯಲ್ಲಿ ಕೇಳಿದ್ರು ಟಗರಿನ ಪೊಗರು ಮಾತು.. ಬಿಡುಗಡೆಯಾಗಿ ಸ್ವಲ್ಪ ಹೊತ್ತಿಗೆ ಟಗರು ಹವಾ ಎಲ್ಲೆಡೆ ಹರಡಿತು. ಭೈರತಿ ರಣಗಲ್ ಹವಾ ಬೆನ್ನಲ್ಲೇ ಟಗರು ಫಿವರ್ ಮುಂದುವರೆಯಿತು.

ಹಾಗಾಗಿ ಕಾದು ನೋಡುತ್ತಿದ್ದ ಅಭಿಮಾನಿಗಳು ಟಗರಿನ ಪೊಗರು ನೋಡಿ ಖುಷಿಯಾಗಿದ್ದಾರೆ. ಇನ್ನು ಟಗರು ನೋಡಿದ ಕೆಲವರು ಒಂದೊಂದು ಬಣ್ಣ ಹಚ್ಚುತ್ತಿದ್ದಾರೆ. ಸೂರಿ ನಿರ್ದೇಶನದ ಸಿನಿಮಾದಲ್ಲಿ ರಾ ಡೈಲಾಗ್ ಗಳು ಇರುವುದು ಸರ್ವೇ ಸಾಮಾನ್ಯ. ಇಂತಹುದೇ ಡೈಲಾಗ್ ಬೇರೆಯೊಂದು ಸ್ವರೂಪ ಪಡೆದುಕೊಂಡಿದೆ.

ಟಗರು ಸಿನಿಮಾ‌ ನೋಡ್ತೀದ್ದ ಅಭಿಮಾನಿಯೊಬ್ಬ ಥೇಟರ್ ನಲ್ಲಿ ಮಾಡಿದ್ದನ್ನ ನೋಡಿದ್ರೆ ನೀವೂ ಬೆಚ್ಚಿ ಬೀಳ್ತೀರಿ

ಹೌದು, ಗಡ್ಡದ ಡೈಲಾಗ್ ಸ್ಟಾರ್ ನಟನಿಗೆ ಟಾಂಗ್ ಕೊಡಲಾಗಿದೆ ಎನ್ನಲಾಗುತ್ತಿದೆ. ಆದರೆ ಇದು ಎಷ್ಟು ನಿಜ ಎನ್ನುವ ಮೊದಲೇ ಫೇಸ್‌ಬುಕ್‌ ನಲ್ಲಿ ಕಿಡಿ ಹಚ್ಚಿಕೊಂಡಿದೆ‌. ‘ನಕ್ಕನ್ ಹವಾ ಬೆಳೆಸೋ ಅಂದ್ರೇ, ಗಡ್ಡ ಬೆಳಸ್ತಾ ಅವ್ನೇ’ ಈ ಡೈಲಾಗ್ ಯಶ್ ಅವರಿಗೆ ಹೇಳಲಾಗಿದೆ ಎಂದು ಫೇಸ್‌ಬುಕ್‌ ನಲ್ಲಿ ಹಬ್ಬಿಸಲಾಗ್ತಿದೆ.

ಶಿವಣ್ಣನ ಟಗರು ಸಿನಿಮಾದ ಖದರನ್ನು ಬಿಚ್ಚಿಟ್ಟ ಕಿರಿಕ್ ಕೀರ್ತಿ…

ಯಶ್ ಕೆಜಿಎಫ್ ಚಿತ್ರಕ್ಕಾಗಿ ಎರಡು ವರ್ಷದಿಂದ ಗಡ್ಡ ಬಿಟ್ಟಿದ್ದಾರೆ. ಯಶ್ ಗಡ್ಡ ಬಿಟ್ಟಿರುವ ಕಾರಣ ಯಶ್ ಅವರಿಗೆ ಈ ಡೈಲಾಗ್ ಹೇಳಲಾಗಿದೆ ಎಂದು ಯಶ್ ಅಭಿಮಾನಿಗಳು ಅರ್ಥೈಸಿಕೊಂಡಿದ್ದಾರೆ. ಆದರೆ ಚಿತ್ರವನ್ನು ಚಿತ್ರವಾಗಿ ನೋಡಿದರೆ ಉತ್ತಮ ಇಲ್ಲಿ ಯಾರು ವ್ಯಕ್ತಿವಾಗಿ ತೆಗೆದುಕೊಳ್ಳಬಾರದು ಎನ್ನುವುದು ಚಿತ್ರತಂಡದ ಮಾತಾಗಿದೆ.

ಟಾಕ್ ಶೋ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳಿದ್ದಾರೆ ಶಿವಣ್ಣ. ಮೊದಲ ಅತಿಥಿ ಯಾರು ಗೊತ್ತಾ.‌?

ಇನ್ನೂ ಯಶ್ ಹಾಗೆ ಶಿವಣ್ಣನ ಸ್ನೇಹದ ಬಗ್ಗೆ ನಿಮಗೆಲ್ಲ ಬಿಡಿಸಿ ಹೇಳಬೇಕಿಲ್ಲ. ಯಶ್ ಶಿವಣ್ಣನೊಂದಿಗೆ ತೀರ ಹತ್ತಿರದ ಸ್ನೇಹವನ್ನ ಹೊಂದಿದ್ದಾರೆ. ಹೀಗಿರೋವಾಗ ಯಶ್ ಗೆ ತನ್ನ ಸಿನಿಮಾದಲ್ಲಿ ಇಂತಹ ಡೈಲಾಗ್ ಹೇಳಲು, ಹೇಳಿಸಲು ಸಾಧ್ಯವಿಲ್ಲ. ಇನ್ನೂ ನಿರ್ದೇಶಕರಾದ ಸೂರಿ ಇಂತಹ ಕೆಳ ಮಟ್ಟದ ನಿರೂಪಣೆಗೆ ಆಸ್ಪದ ನೀಡಿದವರಲ್ಲ ಅನ್ನೋದನ್ನ ನಾವಿಲ್ಲಿ ಗಮನಿಸಬೇಕು…

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

One thought on “ಏನಿದು ಹೊಸ ಕಿಡಿ… ಯಶ್ ಗೆ ಡೈಲಾಗ್ ನಲ್ಲೇ ಟಾಂಗ್ ಕೊಟ್ಟ ಟಗರು ಶಿವ!? ಏನದು ಡೈಲಾಗ್..?

  1. whoah this blog is wonderful i love reading your posts. Keep up the great paintings! You recognize, a lot of persons are looking around for this information, you can help them greatly.

Leave a Reply

Top