You are here
Home > ಲೈಫ್‍ಸ್ಟೈಲ್ > ಅಜೀರ್ಣವೇ? ಈ ಅತೀ ಸರಳ ಮನೆಮದ್ದು ಮಾಡಿ ಜಟ್ ಪಟ್ ಅಂತ ತೊಂದರೆ ಶಮನ ಮಾಡಿ..

ಅಜೀರ್ಣವೇ? ಈ ಅತೀ ಸರಳ ಮನೆಮದ್ದು ಮಾಡಿ ಜಟ್ ಪಟ್ ಅಂತ ತೊಂದರೆ ಶಮನ ಮಾಡಿ..

ಸ್ವಲ್ಪ ಜಾಸ್ತಿ ತಿಂದರೂ ಅಜೀರ್ಣ. ತಿನ್ನಲಿಲ್ಲ ಅಂದ್ರೆ ಗ್ಯಾಸ್ಟ್ರಿಕ್ ಆಗಿ ಅಜೀರ್ಣ.. ಅಜೀರ್ಣಕ್ಕೆ ಇಲ್ಲಿ ಹೇಳಿರುವ ಸರಳ ಮನೆಮದ್ದು ಮಾಡಿ ಅತೀ ಶೀಘ್ರ ಪರಿಣಾಮ ನೋಡಿ..

ವಸ್ತು : ಸೌತೆಕಾಯಿ
ಉಪಯೋಗ : ಜೀರ್ಣಶಕ್ತಿ ಹೆಚ್ಚಳ ಮತ್ತು ಉತ್ತಮ ನಿದ್ರೆ.
ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುವುದು. ಇದಕ್ಕೆ ಊಟ ಆದಮೇಲೆ ಸೌತೆಕಾಯಿ ಸಲಾಡ್ ಉತ್ತಮ ರೆಸಿಪಿ.

ಸೌತೆಕಾಯಿ ತಿರುಳಿನಿಂದ ಅಂಗಾಲು ಉಜ್ಜಿಕೊಂಡರೆ ಕಣ್ಣುಗಳ ಉರಿ ಶಾಂತವಾಗಿ ಚೆನ್ನಾಗಿ ನಿದ್ದೆ ಬರುತ್ತದೆ. ಮುಖದ ಚರ್ಮದ ಮೇಲೆ ಸೌತೆಕಾಯಿ ಚೂರುಗಳನ್ನು ತಿಕ್ಕಿದರೆ ಮುಖ ಕಾಂತಿಯುಕ್ತವಾಗುವುದು.

ಕೇವಲ 7 ದಿನಗಳಲ್ಲಿ ಸೌತೆಕಾಯಿಯು ಸ್ಥೂಲಕಾಯದ ಮೇಲೆ ಬೀರುವ ಪರಿಣಾಮಗಳು..

ವಸ್ತು : ವೀಳ್ಯದೆಲೆ
ಉಪಯೋಗ : ಜೀರ್ಣಶಕ್ತಿ ಹೆಚ್ಚಳ, ರಕ್ತಶುದ್ಧಿ.
ಪ್ರತಿದಿನ ಊಟದ ನಂತರ ಈ ವೀಳ್ಯದೆಲೆ ಜೊತೆ ಸುಣ್ಣ, ಅಡಿಕೆ, ಬಜೆ ಸೇರಿಸಿ ಸೇವಿಸುವುದರಿಂದ ಅಜೀರ್ಣಕ್ಕೆ ಬೇಗ ಪರಿಣಾಮಕಾರಿ ಉಪಾಯ.

ಇದರ ಸೇವನೆಯಿಂದ ರಕ್ತಶುದ್ಧಿಯಾಗುವುದರ ಜತೆಗೆ ಸುಣ್ಣದಿಂದ ಸ್ನಾಯುಗಳು ಬಲಗೊಳ್ಳುತ್ತವೆ.

ಎಲ್ಲರ ಮನೆ ದೋಸೇನೂ….

ವಸ್ತು : ಏಲಕ್ಕಿ
ಶಮನ : ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿರುವವರು ಏಲಕ್ಕಿ ಸೇವಿಸಿದರೆ ಶಮನಗೊಳ್ಳುವುದು. ಏಲಕ್ಕಿಯಿಂದ ಆಹಾರ ಜೀರ್ಣವಾಗಿ ಬಾಯಿಗೆ ರುಚಿಯುಂಟಾಗುತ್ತದೆ.

ಒಣಕೆಮ್ಮು ಕಾಣಿಸಿಕೊಂಡಾಗ ಏಲಕ್ಕಿ ಪುಡಿಗೆ ಸ್ವಲ್ಪ ಶುಂಠಿ ಪುಡಿಯನ್ನು ಸೇರಿಸಿ ಸೇವಿಸಿದರೆ ಪರಿಣಾಮ ಬೀರುವುದು. ಮೇಲಿಂದ ಮೇಲೆ ಭೇದಿಯಾಗುತ್ತಿದ್ದರೆ ಸ್ವಲ್ಪ ಏಲಕ್ಕಿಯನ್ನು ಬೆಣ್ಣೆಯೊಡನೆ ಅರೆದು ತಿನ್ನುವುದರಿಂದ ಭೇದಿ ಕಡಿಮೆಯಾಗುತ್ತದೆ.

ಅಡುಗೆ ಮನೆ ವಾಸ್ತು ಹೀಗಿದ್ರೆ ಮನೆಯಲ್ಲಿ ನೆಮ್ಮದಿ ಮನೆಮಾಡುತ್ತೆ..

ವಸ್ತು : ಮೆಣಸು
ಶಮನ : ಅಜೀರ್ಣ, ಮೊಡವೆ, ಜಂತುಹುಳು.
ಮೆಣಸನ್ನು ಚೆನ್ನಾಗಿ ಪುಡಿ ಮಾಡಿ ಶುಂಠಿಯ ರಸದೊಡನೆ ಸೇವಿಸುವುದರಿಂದ ಅಜೀರ್ಣವು ನಿವಾರಣೆಯಾಗುತ್ತದೆ.

ಕೆಲವು ಮೆಣಸಿನ ಕಾಳುಗಳನ್ನು ನೀರಿನಲ್ಲಿ ತೇಯ್ದು ಮೊಡವೆಗಳಿರುವ ಜಾಗಕ್ಕೆ ಹಚ್ಚಿದರೆ ವಾಸಿಯಾಗುತ್ತವೆ. ಹೊಟ್ಟೆಯಲ್ಲಿ ಜಂತುಹುಳುಗಳ ಉಪಟಳ ಜಾಸ್ತಿಯಾದಾಗ ಬೆಳಗ್ಗೆ ಮತ್ತು ರಾತ್ರಿ ಮೆಣಸಿನ ಕಷಾಯವನ್ನು ಕುಡಿಯುವುದು ಪರಿಣಾಮಕಾರಿ.

ಸಿಂಪಲ್ ಆಗಿರೋ ಒಂದು ಚೈನೀಸ್ ಡಿಶ್ ಕ್ಯಾಬೇಜ್ ಅಥವಾ ಎಲೆಕೋಸು ಮಂಚೂರಿಯನ್…

ವಸ್ತು : ಸೀತಾಫಲ
ಉಪಯೋಗ : ಜೀರ್ಣಶಕ್ತಿ ಹೆಚ್ಚಳ, ರಕ್ತವೃದ್ಧಿ.
ಪ್ರತಿದಿನ ಊಟದ ನಂತರ ಈ ಹಣ್ಣನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುವುದು. ಇದು ತಂಪುಕಾರಕವಾಗಿದ್ದು ಸೇವನೆಯಿಂದ ರಕ್ತವೃದ್ಧಿಯಾಗುವುದರ ಜತೆಗೆ ಸ್ನಾಯುಗಳು ಬಲಗೊಳ್ಳುತ್ತವೆ. ವಾಂತಿ ಹಾಗೂ ಹೊಟ್ಟೆ ಉರಿ ಶಮನವಾಗುತ್ತದೆ. ಕುರುಗಳನ್ನು ಪಕ್ವಗೊಳಿಸಲು ಹಣ್ಣಿನ ತಿರುಳನ್ನು ಉಪ್ಪಿನ ಜತೆ ಬೆರೆಸಿ ಲೇಪಿಸಬೇಕು.

ಮಕ್ಕಳಾಗ್ತಿಲ್ಲ ಅನ್ನೋ ಚಿಂತೆನಾ? ಹಾಗಾದ್ರೆ ಇದನ್ನು ಕುಡಿರಿ..

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

Leave a Reply

Top