You are here
Home > ವಾಹಿನಿ ಸುದ್ದಿ > ಕೊನೆಗೂ ಹೊರ ಬಂತು ಮದುವೆ ಸುದ್ದಿ.. ಜೆಕೆ‌ ಹಾಗೂ ಶೃತಿ ಮದುವೆ ಆಗ್ತಾರಂತೆ.. ನಿಜವಾ ನೀವೆ ನೋಡಿ..?

ಕೊನೆಗೂ ಹೊರ ಬಂತು ಮದುವೆ ಸುದ್ದಿ.. ಜೆಕೆ‌ ಹಾಗೂ ಶೃತಿ ಮದುವೆ ಆಗ್ತಾರಂತೆ.. ನಿಜವಾ ನೀವೆ ನೋಡಿ..?

ಪ್ರತಿಯೊಂದು ಬಿಗ್ ಬಾಸ್ ಸೀಸನ್ ನಲ್ಲಿ ಒಂದೊಂದು ಜೋಡಿ ಹುಟ್ಟಿಕೊಳ್ತಾರೆ. ಆ ಸೀಸನ್ ನಲ್ಲಿ ಅವರೇ ಹೈಲೈಟ್ ಎನ್ನಬಹುದು. ಅದೇ ರೀತಿ ಈ ಬಾರಿ ಬಿಗ್ ಬಾಸ್ ಸೀಸನ್ 5ರಲ್ಲೂ ಹೈಲೈಟ್ ಆದ ಜೋಡಿ ಶೃತಿ ಹಾಗೂ ಸೂಪರ್ ಸ್ಟಾರ್ ಜೆಕೆ..

ಮೂಲತಃ ಸಿಂಗರ್ ಆಗಿರುವ ಶೃತಿ ಮುಂಬೈನಲ್ಲಿದ್ದಾರೆ. ಜೆಕೆ ಕೂಡ ಹಿಂದಿ ಧಾರಾವಾಹಿಗೆ ಆಗಾಗ ಮುಂಬೈನಲ್ಲಿ ಇರ್ತಾರೆ. ಹೀಗಾಗಿ ಇವರಿಬ್ಬರ ಮಧ್ಯೆ ಆತ್ಮೀಯತೆ ಬೆಳೆಯಿತು ಎನ್ನಬಹುದು. ಜೆಕೆ ಹಾಗೂ ಶೃತಿ ಉತ್ತಮ ಸ್ನೇಹಿತರು ಎನ್ನಬಹುದು. ಆದರೆ ಈ ಸ್ನೇಹಿತರ ನಡುವಿನ ಸಂಬಂಧ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆಯಂತೆ.

ಜೆಕೆ ಬಿಗ್ ಬಾಸ್ ಗೆದ್ದಿದ್ರೆ ಸುದೀಪ್ ಕಾರಣ ಎನ್ನುತ್ತಿದ್ದವರಿಗೆ ಜೆಕೆ ಕೊಟ್ಟ ಉತ್ತರವೇನು ಗೊತ್ತಾ..? ಊಹಿಸಲು ಸಾಧ್ಯವಿಲ್ಲ..!

ಮೊನ್ನೆ ಮೊನ್ನೆಯಷ್ಟೆ ಚಂದನ್ ಶೆಟ್ಟಿ ಹಾಗೂ ಅಗ್ನಿಸಾಕ್ಷಿ ವೈಷ್ಣವಿ ಮದುವೆಯಾಗ್ತಾರೆ‌ ಅನ್ನೋ ಸುದ್ದಿ ಕೇಳಿದ್ದೀವಿ. ಇದೀಗ ಮತ್ತೆ ಮದುವೆ ಸುದ್ದಿಯೊಂದು ಹೊರ ಬಂದಿದೆ. ಅದೇ ಜೆಕೆ ಹಾಗೂ ಶೃತಿ ಮದುವೆ. ಹೌದು, ಇವರಿಬ್ಬರ ಮದುವೆ ಕುರಿತು ಮಾತುಕತೆ ನಡೆದಿದ್ದು, ಮನೆಯವರು ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.

ಇದೇ ಮಾರ್ಚ್ 23ರಂದು ಮನೆಯವರ ಆಸೆಯಂತೆ‌ ನಿಶ್ಚಿತಾರ್ಥ ಕೂಡ ನಡೆಯಲಿದೆಯಂತೆ. ಹೀಗಂತ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಇದು ನಿಜ ಸುದ್ದಿಯೇ ಎಂದು ಜೆಕೆ ಅಥವಾ ಶೃತಿ ಖಚಿತಪಡಿಸಿಲ್ಲ. ಸದ್ಯಕ್ಕೆ ಇದು ಗಾಳಿ ಸುದ್ದಿ ಎನ್ನಬಹುದು. ‌ಇವರಿಬ್ಬರ ಸ್ನೇಹಕ್ಕೆ ಮದುವೆ ಅನ್ನೋ ಬಣ್ಣ ಹಚ್ಚಿ ಎಲ್ಲ ಕಡೆ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ.

ಅಗ್ನಿಸಾಕ್ಷಿ ಸನ್ನಿಧಿ ಜೊತೆ ಮದುವೆ ಕುರಿತು ಕೊನೆಗೂ ಬಾಯ್ಬಿಟ್ಟ ಚಂದನ್.. ಇಲ್ಲಿದೆ ನೋಡಿ ಸತ್ಯ..
Image Courtesy : Colors Super

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

Leave a Reply

Top