You are here
Home > ವಾಹಿನಿ ಸುದ್ದಿ > ಯಾರಿಗುಂಟು ಯಾರಿಗಿಲ್ಲ!?.. ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿದ್ರು ಚಂದನ್ ಗೆ ಬಿಗ್ ಆಫರ್..! ಏನದು..?

ಯಾರಿಗುಂಟು ಯಾರಿಗಿಲ್ಲ!?.. ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿದ್ರು ಚಂದನ್ ಗೆ ಬಿಗ್ ಆಫರ್..! ಏನದು..?

ಚಂದನ್ ಶೆಟ್ಟಿ ಇದೀಗ ಓಡೋ‌ ಕುದುರೆ. ಇಲ್ಲಿ ಓಡೋ ಕುದುರೆಗೆ ಬೆಲೆ‌ ಹೆಚ್ಚು.. ಸದ್ಯಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಚಂದನ್ ಫ್ರೀ ಇಲ್ಲದಂತಾಗಿದೆ. ರಿಯಾಲಿಟಿ ಶೋ ಜಡ್ಜ್, ಸಂಗೀತ ನಿರ್ದೇಶನ, ಸಿನಿಮಾ ಹೀರೋ, ರ್ಯಾಪ್‌ ಸಾಂಗ್ ಮೇಲೆ ಸಾಂಗ್.

ಬಿಗ್ ಬಾಸ್‌ ಮನೆಯಿಂದ ಬಂದ ಮೇಲೆ ಚಂದನ್ ಶೆಟ್ಟಿ ಫ್ರೀನೇ ಇಲ್ಲ ಎನ್ನುತ್ತಿದ್ದಾರೆ. ಹೀಗಿರಬೇಕಾದ್ರೆ ಚಂದನ್ ಮುಂದೆ‌ ಲಕ್ಷ್ಮೀ ಬಂದು ಕುಳಿತಿದ್ದಾಳೆ. ಹೌದು, ಚಂದನ್ ಗೆ ದೊಡ್ಡ ಆಫರ್ ಬಂದಿದೆ.‌ ಅದು ಅಂತಿಂಥ ಆಫರ್ ಅಲ್ಲ ದರ್ಶನ್ ಚಿತ್ರಕ್ಕೆ ಆಫರ್. ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 52ನೇ ಚಿತ್ರಕ್ಕೆ ಚಂದನ್ ಸಂಗೀತ ನಿರ್ದೇಶನ ಮಾಡಲಿದ್ದಾರಂತೆ. ಈ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳ್ತಿದ್ದಾರೆ.

ಅದೃಷ್ಟ ಅಂದ್ರೆ ಇದಪ್ಪ..‌2 ರಿಯಾಲಿಟಿ ಶೋಗಳಲ್ಲಿ ಚಂದನ್. ಒಂದು‌‌ ಮಾಸ್ಟರ್ ಡ್ಯಾನ್ಸರ್ ಮತ್ತೊಂದು ಯಾವುದು ಗೊತ್ತಾ..?

ಇನ್ನು ಈ ಸುದ್ದಿ ದರ್ಶನ್ ಅಭಿಮಾನಿಗಳು ಹಾಗೂ ಚಂದನ್ ಶೆಟ್ಟಿ ಅಭಿಮಾನಿಗಳಿಗೆ ಸಂತಸ ತಂದಿದೆ. ದರ್ಶನ್ ಗೆ ಅಭಿಮಾನಿಗಳ ದಂಡೆ ಇದೆ. ದರ್ಶನ್, 50ನೇ ಚಿತ್ರ ಕುರುಕ್ಷೇತ್ರ ನೋಡಲು‌ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.‌ ಇದಾದ‌ ನಂತರ 51 ಹಾಗೂ 52 ಚಿತ್ರಗಳು ಕೂಡ ಈಗಿನಿಂದಲೇ ಎಲ್ಲ ತಯಾರಿ ನಡೆದಿದೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ‌ ಚಂದನ್ ಶೆಟ್ಟಿ ಮಾಡ್ತಿರೋ ಆಲ್ಬಂ ಸಾಂಗ್ ಯಾವುದು ಗೊತ್ತಾ.. ಇಲ್ಲಿದೆ ನೋಡಿ..

ಚಂದನ್ ಹಾಗೂ‌ ದರ್ಶನ್ ಕಾಂಬಿನೇಶನ್ ನೋಡಲು ಜನ ಕಾತುರದಿಂದ ಕಾಯುತ್ತಿರುವುದು ನಿಜ.. ಚಂದನ್ ಮಾಸ್ ಪ್ರೇಕ್ಷಕರನ್ನ ಹೇಗೆ ಸೆಳೆಯಲಿದ್ದಾರೆ ಅಂತ ಕಾದು ನೋಡಬೇಕು. ಈ ಸುದ್ದಿ ಗಾಳಿ ಸುದ್ದಿಯಾಗದೆ ನಿಜವಾದರೆ ಅಭಿಮಾನಿಗಳಿಗೆ ಖುಷಿಯೋ ಖುಷಿ…

Image Courtesy : Colors Super

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

Leave a Reply

Top