You are here
Home > ವಾಹಿನಿ ಸುದ್ದಿ > ಬಿಗ್ ಬಾಸ್ ಹೋಗಿ ತಪ್ಪು ಮಾಡಿದೆ ಅಂತ ಜೆಕೆ ಹೇಳಿದ್ಯಾಕೆ..? ಜೆಕೆ ಹೀಗೆ ಹೇಳಲು ಕಾರಣ ಇಲ್ಲಿದೆ ನೋಡಿ.

ಬಿಗ್ ಬಾಸ್ ಹೋಗಿ ತಪ್ಪು ಮಾಡಿದೆ ಅಂತ ಜೆಕೆ ಹೇಳಿದ್ಯಾಕೆ..? ಜೆಕೆ ಹೀಗೆ ಹೇಳಲು ಕಾರಣ ಇಲ್ಲಿದೆ ನೋಡಿ.

ಬಿಗ್ ಬಾಸ್ ಮನೆಯಲ್ಲಿ ಟಾಪ್ 5ಕ್ಕೆ ಕಾಲಿಟ್ಟ ಸ್ಪರ್ಧಿಗಳಲ್ಲಿ ಜೆಕೆ ಕೂಡ ಒಬ್ಬರು. ಕೆಲವರ ಪ್ರಕಾರ ಜೆಕೆ ರನ್ನರ್ ಅಪ್ ಆಗಬೇಕಿತ್ತು ಅನ್ನೋ ಅಭಿಪ್ರಾಯಗಳು ಕೇಳಿ ಬಂದವು. ಇನ್ನು ಕೆಲವರು ಜೆಕೆ ಗೆಲ್ಲಬೇಕಿತ್ತು ಅಂತ ವಾದಿಸಿದ್ರು.. ಇನ್ನೂ ಕೆಲವರು 3ನೇ ಸ್ಥಾನವೇ ಸರಿ ಅಂದ್ರು.. ಯಾಕೆಂದರೆ ಜೆಕೆ ಮನೆಯಲ್ಲಿ ಯಾವುದೇ ರೀತಿ ಮನರಂಜನೆ ನೀಡಲಿಲ್ಲ ಹೀಗಾಗಿ ಅವರಿಗೆ ಈ ಸ್ಥಾನ ಉತ್ತಮ ಅನ್ನೋ ಮಾತುಗಳು ಕೇಳಿ ಬಂದವು.

ಆದರೆ ಜೆಕೆ ಹೆಚ್ಚಾಗಿ ಶೃತಿ ಅವರೊಂದಿಗೆ ಕಾಲ ಕಳೆಯುತ್ತಿದ್ದರು, ನಯಾ ಪೈಸೆ ಮನೋರಂಜನೆ ನೀಡಿಲ್ಲ‌ ಅನ್ನೋ ‌ಮಾತು ಕೇಳಿ ಜೆಕೆ ಬೇಸರಗೊಂಡಿದ್ದಾರೆ. ಯಾಕೆಂದರೆ ಜೆಕೆ ಹೇಳುವ ಪ್ರಕಾರ, ಬಿಡುವಿನ ವೇಳೆ ಶೃತಿ, ಅನು ಹಾಗೂ ಕೃಷಿ ಜೊತೆ ಕಾಲ ಕಳೆಯುತ್ತಿದೆ.‌ ಕೆಲಸ ಇರುವಾಗ ಕೆಲಸ ಮಾಡಿದ್ದೇನೆ ಹಾಗು ಟಾಸ್ಕ್ ಸಮಯದಲ್ಲಿ ಅವುಗಳನ್ನ ಉತ್ತಮವಾಗಿ ನಿರ್ವಹಿಸಿದ್ದೆ..

ಬಿಗ್ ಬಾಸ್ ಸ್ಕ್ರಿಪ್ಟೆಡ್ ಅಂತೂ ಅಲ್ಲ, ಆದರೆ ಎಡಿಟೆಡ್. ಚಾನೆಲ್ ಅವರು ಅವನ್ನೆಲ್ಲ ಎಡಿಟ್ ಮಾಡಿ ಕೇವಲ ಶೃತಿ ಜೊತೆ ಇರುವುದು ಹಾಗೂ ಬೆಡ್ ರೂಂನಲ್ಲಿ ಮಲಗಿರುವುದನ್ನ ಹೆಚ್ಚಾಗಿ ತೋರಿಸಿದ್ದಾರೆ. ಇದು ನನಗೆ ಬಹಳ ಬೇಸರ ತಂದಿದೆ. ಯಾಕೆಂದರೆ ನಾನು ಹಾಗಿರಲಿಲ್ಲ.. ನನ್ನನ್ನು ಬೇರೆ ರೀತಿ ಬಿಂಬಿಸಿದ್ದಾರೆ.. ಹೀಗಾಗೆ ಬಿಗ್ ಬಾಸ್ ಶೋಗೆ ಹೋಗಿ ತಪ್ಪು ಮಾಡಿದೆ ಎನ್ನಿಸುತ್ತಿದೆ ಎಂದರು..

Pic courtesy: colors Super
https://m.facebook.com/story.php?story_fbid=148854572490033&id=130086177700206

Comments

comments

Similar Articles

Leave a Reply

Top