ಜೆಕೆ ಪ್ರಪೋಸ್ ಮಾಡಿದ್ರೆ ಶೃತಿ ಉತ್ತರ ಏನಾಗಿರುತ್ತೆ ಗೊತ್ತಾ..? ಶೃತಿ ಮನಸ್ಸಿನ ಮಾತು ಇಲ್ಲಿದೆ ನೋಡಿ..

ಈ ಬಾರಿ ಬಿಗ್ ಬಾಸ್ ಸೀಸನ್ ‌5 ಮೋಸ್ಟ್ ಬ್ಯೂಟಿಫುಲ್ ಕಪಲ್ಸ್ ಅಂದ್ರೆ ಜೆಕೆ‌ ಹಾಗೂ‌ ಶೃತಿ ಎನ್ನಬಹುದು. ಇವರಿಬ್ಬರ ಜೋಡಿ ನೋಡಿ, ಮುದ್ದಾದ ಜೋಡಿ ಎಂದು ಬಹಳ‌ ಮಂದಿ‌ ಹೇಳಿದ್ದು ಉಂಟು. ಜೆಕೆ ಹಾಗೂ ಶೃತಿ ಬಿಗ್ ಬಾಸ್ ಮನೆಯಲ್ಲಿ ಉಳಿದ‌ ಸ್ಪರ್ಧಿಗಳಿಗಿಂತ ಹೆಚ್ಚು ಅತ್ಮೀಯರು.‌

ಜೊತೆಗೆ ಇಬ್ಬರ ಸ್ನೇಹದ ಕುರಿತು ಅನೇಕರು‌ ಮಾತನಾಡಿದ್ದು ಇದೆ. ಜೆಕೆ ಮದುವೆಯಾಗಿಲ್ಲ ಎಂದು ತಿಳಿದ್ಮೇಲೆ‌ ಬಿಗ್ ಬಾಸ್ ಸ್ಪರ್ಧಿಗಳು ಜೆಕೆ ಅವರಿಗೆ ಮದುವೆಯಾಗುವಂತೆ ಮನವಿ ಮಾಡಿದರು. ಆದರೆ ಅವರ ಮನಸ್ಸಿನಲ್ಲಿ ಏನಿದು ಎಂದು ಯಾರಿಗೂ ತಿಳಿಯಲಿಲ್ಲ. ಬಟ್ ಶೃತಿ ಮನಸ್ಸಿನಲ್ಲಿ ಏನಿದೆ ಎಂದು ಈಗ ಗೊತ್ತಾಗಿದೆ.

ಈ ನಟಿಯನ್ನ ಮದುವೆ ಆಗೋಕೆ ರೆಡಿಯಂತೆ ಚಂದನ್.. ಆದ್ರೆ ಒಂದು ಕಂಡಿಷನ್ ಏನದು..?

ಶೃತಿ ಹಾಗೂ ಜೆಕೆ ಉತ್ತಮ ಸ್ನೇಹಿತರು. ಈ ಸ್ನೇಹ ಕೆಲವರಿಗೆ ಬೇರೆ ರೀತಿ ಅನ್ನಿಸಿದೆ. ಇದನ್ನು ಶೃತಿ ಅವರನ್ನೇ ನೇರವಾಗಿ ಕೇಳಿದಾಗ ಶೃತಿ ಪ್ರಕಾಶ್ ಹೇಳಿದ್ದು ಹೀಗೆ. ಜೆಕೆ ಒಳ್ಳೆಯ ವ್ಯಕ್ತಿ, ಒಳ್ಳೆ ಮನಸ್ಸಿದೆ, ನಾನು ಅವರನ್ನ ಗೌರವಿಸುತ್ತೇನೆ. ಜೆಕೆ ಎಂದು ನನ್ನನ್ನು ಆ ಭಾವನೆಯಿಂದ ನೋಡಿಲ್ಲ, ಆ ಭಾವನೆ ಇಲ್ಲ ಎಂದ್ಮೇಲೆ ಅದರ ಬಗ್ಗೆ ಯೋಚನೆ ಮಾಡುವುದು ಸರಿಯಲ್ಲ..

ಹೀಗಾಗಿ ಜೆಕೆ ಹಾಗೆ ಮಾಡಲ್ಲ ಎಂದು ನನಗೆ ಚೆನ್ನಾಗಿ ಗೊತ್ತು ಎಂದಿದ್ದಾರೆ. ಈ ಮೂಲಕ ಜೆಕೆ ಹಾಗೂ ಶೃತಿ ಮಧ್ಯೆ ಇರೋದು ಸ್ನೇಹ ಅಷ್ಟೇ ಎಂದು ಶೃತಿ ಸ್ಪಷ್ಟಪಡಿಸಿದ್ದಾರೆ.

ಮನೆ ಬಂದ ತೇಜಸ್ವಿನಿ ಸೂಪರ್ ಸ್ಟಾರ್ ಜೆಕೆ ಕೊಟ್ರು ಸಖತ್ ಶಾಕ್… ಏನದು..?

Pic courtesy: colors

Comments

comments

Similar Articles

Top