ಬಿಗ್ ಬಾಸ್ ವಿನ್ನರ್ ವಿಚಾರದಲ್ಲಿ ಬೇಸರಗೊಂಡ ಕಿಚ್ಚ.. ಇಷ್ಟಕ್ಕೂ ಕಿಚ್ಚ ಮಾಡಿದ್ದು ಸರಿನಾ..?

ಬಿಗ್ ಬಾಸ್ ಸೀಸನ್ 5 ಯಶಸ್ವಿಯಾಗಿ ಪೂರ್ಣಗೊಂಡಿದೆ. ಚಂದನ್ ವಿನ್ನರ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಬಿಗ್ ಬಾಸ್ ಸೀಸನ್ 5ಗೆ ತೆರೆ ಎಳೆಯಲಾಗಿದೆ. ಆದರೆ ಕಾರ್ಯಕ್ರಮ ಮುಗಿದ್ರೂ ವಿನ್ನರ್ ಹಾಗೂ ರನ್ನರ್ ವಿಚಾರವಾಗಿ ಅಪಸ್ವರ ಕೇಳಿಬರುತ್ತಿದೆ. ಆದರೆ ಇದಕ್ಕೂ ಸುದೀಪ್ ಅವರಿಗೂ ಏನು ಸಂಬಂಧ.. ಸುದೀಪ್ ಬೇಸರಗೊಂಡಿದ್ದು ಯಾಕೆ..?

17 ಸ್ಪರ್ಧಿಗಳಲ್ಲಿ ಈ ಬಾರಿ ಜೆಕೆ, ಚಂದನ್ ಶೆಟ್ಟಿ, ಶೃತಿ, ನಿವೇದಿತಾ ಗೌಡ ಹಾಗೂ ದಿವಾಕರ್ ಈ ಐವರು ಫಿನಾಲೆ ಪ್ರವೇಶಿಸಿದರು. ಶನಿವಾರದ ಸಂಚಿಕೆಯಲ್ಲಿ ಶೃತಿ ಹಾಗೂ ನಿವೇದಿತಾ ಗೌಡ ಎಲಿಮಿನೆಟ್ ಆದಾಗ ಎಲ್ಲರಿಗೂ ಖಚಿತವಾಗಿದ್ದು ಜೆಕೆ ಅಥವಾ ಚಂದನ್ ಶೆಟ್ಟಿ ಇಬ್ಬರಲ್ಲಿ ಒಬ್ಬರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗೋದು ಪಕ್ಕಾ ಎಂದು.

ಇವರೇ ನೋಡಿ ಸ್ವಾಮಿ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ…

ಆದರೆ ಈ ಎಲ್ಲ ಊಹೆಗಳು ಉಲ್ಟಾ ಹೊಡೆದಿದ್ದು ಭಾನುವಾರದ ಸಂಚಿಕೆಯಲ್ಲಿ. ಹೌದು, ಈ ಟ್ವಿಸ್ಟ್ ಯಾರು ನಿರೀಕ್ಷಿಸಿರಲಿಲ್ಲ. ಚಂದನ್ ವಿನ್ನರ್ ಹಾಗೂ ಜೆಕೆ ರನ್ನರ್ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಆದರೆ ಕೊನೆ ಘಳಿಗೆಯಲ್ಲಿ ದಿವಾಕರ್ ರನ್ನರ್ ಆಪ್ ಅದರು.‌

ಈ ಕೊನೆ ಕ್ಷಣದ ಬದಲಾವಣೆ ಆಗಿದ್ದು ಯಾಕೆ. ಹೀಗಾಗಲೂ ಕಾರಣವೇನು ಗೊತ್ತಾ..? ಮೊದಲಿನಿಂದಲೂ ಜೆಕೆ ಹಾಗೂ ಕಿಚ್ಚ ಸುದೀಪ್ ಆತ್ಮೀಯರು. ಮೊದಲ ಸೀಸನ್ ನಿಂದಲೂ ಜೆಕೆಗೆ ಬಿಗ್ ಬಾಸ್ ಗೆ ಬರಲು ಆಹ್ವಾನಿಸಿದರು ಜೆಕೆ ಬಂದಿರಲಿಲ್ಲ, ಆದರೆ ಈ ಬಾರಿ ಜೆಕೆ ಬಿಗ್ ಬಾಸ್ ಗೆ ಬರಲು ಒಪ್ಪಿಗೆ ಸೂಚಿಸಿದರು.

ಬಿಗ್ ಬಾಸ್ ವಿನ್ನರ್ ವಿಚಾರದಲ್ಲಿ ಬೇಸರಗೊಂಡ ಕಿಚ್ಚ.. ಇಷ್ಟಕ್ಕೂ ಕಿಚ್ಚ ಮಾಡಿದ್ದು ಸರಿನಾ..?

ಬಂದ್ಮೇಲೆ ಕಿಚ್ಚ ಸುದೀಪ್ influence ನಿಂದ ಬಂದಿರುವುದು ಹಾಗೂ ಜೆಕೆನೇ ವಿನ್ ಆಗೋದು ಅನ್ನೋ ಮಾತುಗಳು ಕೇಳಿ ಬರುತ್ತಿತ್ತು. ಚಂದನ್ ಹಾಗೂ ಜೆಕೆ ಫಿನಾಲೆಗೆ ಬಂದ್ಮೇಲೆ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಯಿತು. ಟ್ರೋಲ್ ಪೇಜ್ ಗಳು ಕೂಡ ಸುಖಾಸುಮ್ಮನೆ ಇದನ್ನೆ ದೊಡ್ಡದಾಗಿ ಬಿಂಬಿಸಿದರು.

ಈ ಬಾರಿ ಸುದೀಪ್ influence ನಿಂದ ಜೆಕೆ ಗೆಲ್ಲುತ್ತಾರೆ, ಕಿಚ್ಚನ ಹುಡುಗ ಹೀಗಾಗಿ ಚಂದನ್ ಗೆಲುವುದಿಲ್ಲ. ಇದರಿಂದ ಬೇಸರಗೊಂಡ ಕಿಚ್ಚ ಬಿಗ್ ಬಾಸ್ ತಂಡದೊಂದಿಗೆ ಮಾತನಾಡಿ ಕೊನೆ ಘಳಿಗೆಯಲ್ಲಿ ಜೆಕೆ ಅವರನ್ನು ಹೊರ ಬರುವಂತೆ ತೀರ್ಮಾನ ಕೈಗೊಳ್ಳಲಾಯಿತು ಅನ್ನೋ ಮಾಹಿತಿಗಳು ಕೇಳಿ ಬರುತ್ತಿದೆ.

ಬಿಗ್ ಬಾಸ್ ಸ್ಪರ್ಧಿಗಳ ಸಂಭಾವನೆ ಇದು.!! ಅತಿ ಹೆಚ್ಚು ಸಂಭಾವನೆ ಪಡೆದು ಮೊದಲ ಸ್ಥಾನದಲ್ಲಿ ಯಾರಿದ್ದಾರೆ ಗೊತ್ತಾ..?

ದಿವಾಕರ್ ಸ್ಥಾನ ಜೆಕೆಗೆ ಮೀಸಲಾಗಿತ್ತು. ಆದರೆ ಈ ಮಾತುಗಳು ಮತ್ತೆ ಮುಂದುವರೆಯಬಾರದು ಅನ್ನೋ ಕಾರಣಕ್ಕೆ ಕಿಚ್ಚ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಕೆಲವರ ಅಭಿಪ್ರಾಯಗಳಿಂದ ಈ ನಿರ್ಧಾರ ತೆಗೆದುಕೊಂಡಿರುವುದು ಜೆಕೆ ಅಭಿಮಾನಿಗಳಿಗೆ ಬೇಸರ ತಂದಿದೆ.

ಜೆಕೆ ಅವರನ್ನ ಹೊರ ಕರೆಯಬೇಕಾದ್ರೆ ಕಿಚ್ಚ ನನ್ನ ಹಾರ್ಟ್ ಬೀಟ್ ಒಂದು ಕ್ಷಣ ನಿಂತಾಗಿದೆ ಎನ್ನುತ್ತಾ ಬೇಸರದಿಂದಲೇ ಜೆಕೆ ಅವರನ್ನ ಹೊರ ಕರೆದರು. ಇದರಿಂದ ಇನ್ನು ಉಳಿದ ಬಿಗ್ ಬಾಸ್ ಸ್ಪರ್ಧಿಗಳು ಬೇಸರ ವ್ಯಕ್ತಪಡಿಸಿದರು.

Pic courtesy: Colors Super

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Top