You are here
Home > ವಾಹಿನಿ ಸುದ್ದಿ > ಡಾ.ರಾಜ್ ಕುಮಾರ್ ಕಪ್ ಗೆ ಸಾಕ್ಷಿಯಾದ್ರು ಪುನೀತ್ ರಾಜ್ ಕುಮಾರ್-ಜಗ್ಗೇಶ.. ಪಂದ್ಯಾವಳಿಯ ಬಗ್ಗೆ ಶ್ಲಾಘಿಸಿದ ದಿಗ್ಗಜ ನಟರು

ಡಾ.ರಾಜ್ ಕುಮಾರ್ ಕಪ್ ಗೆ ಸಾಕ್ಷಿಯಾದ್ರು ಪುನೀತ್ ರಾಜ್ ಕುಮಾರ್-ಜಗ್ಗೇಶ.. ಪಂದ್ಯಾವಳಿಯ ಬಗ್ಗೆ ಶ್ಲಾಘಿಸಿದ ದಿಗ್ಗಜ ನಟರು

ಮಲ್ಲೇಶ್ವರಂ ಸ್ಪೋರ್ಟ್ಸ್  ಫೌಂಡೇಶನ್ ಸಹಕಾರದೊಂದಿಗೆ ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ಆಯೋಜಿಸಿರುವ 60ನೇ ರಾಷ್ಟ್ರೀಯ ಸೀನಿಯರ್ಸ್(ಪುರುಷರು ಮತ್ತು ಮಹಿಳೆಯರ) ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿ ಆಯೋಜಿಸಿದೆ..

ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.. ರಾಜ್ ಕಪ್ ಹೆಸರಿನಲ್ಲಿ ನಡೆಯುತ್ತಿರುವ ಈ‌ ಟೂರ್ನಿಯಲ್ಲಿ ರಾಷ್ಟ್ರದ ಶ್ರೇಷ್ಠ ಬಾಕ್ಸಿಂಗ್ ಪಟುಗಳು ಪಾಲ್ಗೊಂಡಿದ್ದಾರೆ… ಮಲ್ಲೇಶ್ವರದ  ಕೋದಂಡರಾಮ ಕಬಡ್ಡಿ ಮೈದಾನದಲ್ಲಿ ನಡೆಯುತ್ತಿದ್ದು ಇಂದು 161 ಪಂದ್ಯಗಳು ನಡೆದಿವೆ… ಅಂಕಪಟ್ಟಿಯಲ್ಲಿ ಹರಿಯಾಣ ಮೊದಲ ಸ್ಥಾನದಲ್ಲಿದ್ರೆ, ಉಳಿದಂತೆ ಪಂಜಾಬ್ ಹಾಗು ಓಡಿಶಾ ನಂತರದ ಸ್ಥಾನದಲ್ಲಿವೆ…

ಡಾ|| ರಾಜ್ ಹೆಸರಲ್ಲಿ ಬಾಕ್ಸಿಂಗ್ ಚಾಂಪಿಯನ್ ಶಿಪ್.. ಮಲ್ಲೇಶ್ವರಂನಲ್ಲಿ ಸಿದ್ದವಾಯ್ತು ಅಖಾಡ..

ಇನ್ನೂ ಇಂದಿನ ಮ್ಯಾಚ್ ನ ವಿಶೇಷತೆ ಎಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪಂದ್ಯ ವೀಕ್ಷಣೆಗೆ ಆಗಮಿಸಿದ್ರು… ಇದೇ ‌ಸಂದರ್ಭದಲ್ಲಿ ಮಾತನಾಡಿದ ಅಪ್ಪು, ಬಾಕ್ಸಿಂಗ್ ಎಂದ ಕೂಡಲೇ ಮೊದಲು ನೆನಪಿಗೆ ಬರುವುದು ಅಪ್ಪಾಜಿ ಸಿನಿಮಾ ‘ತಾಯಿಗೆ ತಕ್ಕ ಮಗ’.. ತಂದೆಯವರು ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದರು. ಅಪ್ಪಾಜಿ ಹೆಸರಿನಲ್ಲಿ ಬಾಕ್ಸಿಂಗ್ ಸ್ಪರ್ಧೆ ಏರ್ಪಡಿಸಿರುವುದು ನಿಜಕ್ಕೂ ಸಂತಸದ ವಿಷಯ. ನಮ್ಮಲ್ಲಿ ಬೇರೆ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿದಂತೆ ಬಾಕ್ಸಿಂಗೂ ಕೂಡ ನೀಡಬೇಕು. ಕರ್ನಾಟಕದಲ್ಲಿ 20ವರ್ಷಗಳ ನಂತರ ಬಾಕ್ಸಿಂಗ್ ಸ್ಪರ್ಧೆ ಆಯೋಜಿಸಿರುವುದು ನಿಜಕ್ಕೂ ಹೆಮ್ಮಯ ವಿಚಾರ.. ಇಂತಹ ಕ್ರೀಡೆಗಳಿಗೆ ನನ್ನ ಕಡೆಯಿಂದ ಸದಾ ಪ್ರೋತ್ಸಾಹ ಹಾಗೂ ಬೆಂಬಲವಿದ್ದೆ ಇರುತ್ತದೆ…

ರಾಜರಥ ಟ್ರೇಲರ್ ಬಂತು.. ಪುನೀತ್ ರಾಜ್ ಕುಮಾರ್ ಪಾತ್ರವೇನು ನೀವೆ ನೋಡಿ..

ಇನ್ನೂ ಜಗ್ಗೇಶ್ ಅವರು ಮಾತನಾಡಿ, ಮಕ್ಕಳು ಮೊಬೈಲ್ ಗಳನ್ನ ಬಿಟ್ಟು ಈ ಕ್ರೀಡೆಗಳಲ್ಲಿ ತೊಡಗಿಕೊಳ್ಳಬೇಕು ಅಂದ್ರು.. ಮಲ್ಲೇಶ್ವರದಲ್ಲಿ‌ ಇಂತಹ ಪಂದ್ಯಾವಳಿ ಆಯೋಸಿರುವುದಕ್ಕೆ ಶಾಸಕರಾದ ಡಾ. ಅಶ್ವಥ್ ನಾರಾಯಣ್ ಅವರಿಗೆ ಕೃತಜ್ಞತೆ ಸಲ್ಲಿದ್ರು…

ಇನ್ನೂ‌ ಡಾ.C.Nಅಶ್ವತ್ ನಾರಾಯಣ್ ಮಾತನಾಡಿ ಡಾ.ರಾಜ್ ಕುಮಾರ್ ಹೆಸರಿನಲ್ಲಿ ಅವರ ನೆನಪಿನಲ್ಲಿ ಈ ಪಂದ್ಯಾವಳಿಯನ್ನ ನಡೆಸಿದ್ದೇವೆ.. ಇದಕ್ಕೆ ಅಣ್ಣಾವ್ರ ಪುತ್ರ  ಬೆಂಬಲ ನೀಡಿ ಬೆನ್ನು ತಟ್ಟಿರುವುದು ಖುಷಿ ನೀಡಿದೆ ಅಂದ್ರು.. ಇನ್ನೂ ಜಗ್ಗೇಶ್ ಅವರು ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ರು… ಈ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು, ರಾಷ್ಟ್ರವ್ಯಾಪಿ ಬಂದಿರುವ ಉತ್ತಮ ಬಾಕ್ಸರ್ ಗಳಿಗೆ ನಮ್ಮ ಮಲ್ಲೇಶ್ವರದಲ್ಲಿ ವೇದಿಕೆ ಕಲ್ಪಿಸಿರೋದು ನಿಜಕ್ಕೂ ಸಂತಸದ ವಿಷಯ ಅಂದ್ರು…

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Leave a Reply

Top