ಗುಟ್ಟಾಗಿ ನಡೆಯಲಿದೆ ಬಿಗ್ ಬಾಸ್ ಫಿನಾಲೆ ಶೂಟಿಂಗ್.. ಕಾರಣ ಏನು ಗೊತ್ತಾ..?

ಬಿಗ್ ಬಾಸ್ ಶೋ‌ ಕಿರುತೆರೆಯ ದೊಡ್ಡ ಶೋಗಳಲ್ಲಿ ಒಂದು.. ಕಳೆದ ನಾಲ್ಕು ಸೀಸನ್ ಗಳು ಯಶಸ್ವಿಯಾಗಿ ನಡೆದಿದೆ. ಈ ಬಾರಿಯೂ ಎಂದಿನಂತೆ ಬಿಗ್ ಬಾಸ್ ಕೊನೆ ಹಂತಕ್ಕೆ ತಲುಪಿದೆ. ಕೊನೆ ಹಂತದ ಕೊನೆಯ ತಯಾರಿ ಭರ್ಜರಿಯಾಗಿ ರೆಡಿಯಾಗ್ತಿದೆ.ಇಂದು ಹೊರ ಹೋಗಲಿದ್ದಾರೆ ಈ ನಾಲ್ವರಲ್ಲಿ ಒಬ್ಬರು.. ಹೊರ ಹೋದವರು ಇವರೇ ನೋಡಿ

ಆದರೆ ಈ ಬಾರಿ ಬಿಗ್ ಬಾಸ್ ಅಭಿಮಾನಿಗಳಿಗೆ ಕೊಂಚ ನಿರಾಶೆಯಾಗಲಿದೆ. ಯಾಕೆಂದರೆ ಬಿಗ್ ಬಾಸ್ ಕಾರ್ಯಕ್ರಮದ ವಿಶೇಷವೆಂದ್ರೆ ವಿನ್ನರ್ ಯಾರು ಎಂಬುದು..! ಪ್ರತಿ ಬಾರಿಯೂ ಜನರ ಅಭಿಪ್ರಾಯ ಒಂದಾದರೆ, ಬಿಗ್ ಬಾಸ್ ನ ನಿರ್ಣಯವೇ ಬೇರೆ ಆಗಿರುತ್ತೆ.

ಹೀಗಾಗಿ ಈ ಬಾರಿ ಬಿಗ್ ಬಾಸ್ ಸೀಸನ್-5 ಫಿನಾಲೆ ಶೂಟಿಂಗ್ ಸಾಕಷ್ಟು ಕಟ್ಟುನಿಟ್ಟಾಗಿ ನಡೆಯಲಿದೆ. ‌
ಕಾರಣ ಪ್ರತಿ ಬಾರಿಯೂ ಫಿನಾಲೆ ಟಿವಿಯಲ್ಲಿ ಪ್ರಸಾರವಾಗುವ ಮುನ್ನವೇ ವಿನ್ನರ್ ಯಾರೆಂದು ಶೂಟಿಂಗ್ ದಿನವೇ ಸೋಶಿಯಲ್ ಮೀಡಿಯಾದ‌ ಮೂಲಕ ಎಲ್ಲರಿಗೂ ತಿಳಿದಿರುತ್ತೆ.ಈ ಸ್ಪರ್ಧಿಗಳಿಂದ ಆಯಿತು ಬಿಗ್ ಬಾಸ್ ಗೆ ಅವಮಾನ.. ಬೇಸರ ವ್ಯಕ್ತಪಡಿಸಿದ ಕಿಚ್ಚ‌‌ ಸುದೀಪ್..!!

ಹೀಗಾಗಿ ಬಿಗ್ ಬಾಸ್ ವೀಕ್ಷಕರು ಟಿವಿಯಲ್ಲಿ ಪ್ರಸಾರವಾಗುವ ಫಿನಾಲೆ ಎಪಿಸೋಡ್ ವರೆಗೆ ಕಾಯುವ ಅವಶ್ಯಕತೆಯೇ ಇರುವುದಿಲ್ಲ. ಇದರಿಂದ ಬಿಗ್ ಬಾಸ್ ಶೋಗೆ ಭಾರಿ ಹೊಡೆತವಾಗುತ್ತಿದೆ. ಕಳೆದ ಸೀಸನ್ ಗಳಲ್ಲಿ ಆದ ತಪ್ಪುಗಳು ಈ ಬಾರಿ ಮುಂದುವರೆಸದಂತೆ ಬಿಗ್ ಬಾಸ್ ತಂಡ ನಿರ್ಧರಿಸಿದೆ.

ಫಿನಾಲೆ ಅಂದ್ಮೇಲೆ ಅಲ್ಲಿ ಸಾಕಷ್ಟು ನೀತಿ ನಿಯಮಗಳಿವೆ. ಬಿಗ್ ಬಾಸ್ ಚಿತ್ರೀಕರಣ ಸಂದರ್ಭದಲ್ಲಿ ಪ್ರೇಕ್ಷಕರು ಶೂಟಿಂಗ್ ನೋಡುವ ಅವಕಾಶವಿತ್ತು. ಆದರೆ ಈ ಬಾರಿ ಫಿನಾಲೆ ಚಿತ್ರೀಕರಣ ಸಮಯದಲ್ಲಿ ವೇದಿಕೆಯ ಮುಂಭಾಗದಲ್ಲಿ ಪ್ರೇಕ್ಷಕರಿಗೆ ಪ್ರವೇಶವಿರುವುದಿಲ್ಲ, ಜೊತೆಗೆ ಮೊಬೈಲ್ ಫೋನ್ ನಿರ್ಬಂಧಿಸಲು ನಿರ್ಧರಿಸಿದ್ದಾರೆ.

ಇದ್ದರಿಂದ ವಿನ್ನರ್ ಯಾರು ಎಂಬುದು ಕೊನೆಯವರೆಗೂ ಗೌಪ್ಯವಾಗಿ ಉಳಿಯಲು ಬಿಗ್ ಬಾಸ್ ತಂಡದ ಮುಖ್ಯ ಉದ್ದೇಶ. ಹೀಗಾಗಿ ಬಿಗ್ ಬಾಸ್ ಶೂಟಿಂಗ್ ಗುಟ್ಟಾಗಿ ನಡೆಸುವ ಉದ್ದೇಶವಾಗಿದೆ. ಆದರೆ ಈ ರೀತಿ ನಿರ್ಧಾರದಿಂದ ಬಿಗ್ ಬಾಸ್ ಅಭಿಮಾನಿಗಳಿಗೆ ಭಾರಿ ಬೇಸರವಾಗುವುದಂತೂ ನಿಜ…Pic Courtesy: Colors Super

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Top