You are here
Home > ವಾಹಿನಿ ಸುದ್ದಿ > ಡಾ|| ರಾಜ್ ಹೆಸರಲ್ಲಿ ಬಾಕ್ಸಿಂಗ್ ಚಾಂಪಿಯನ್ ಶಿಪ್.. ಮಲ್ಲೇಶ್ವರಂನಲ್ಲಿ ಸಿದ್ದವಾಯ್ತು ಅಖಾಡ..

ಡಾ|| ರಾಜ್ ಹೆಸರಲ್ಲಿ ಬಾಕ್ಸಿಂಗ್ ಚಾಂಪಿಯನ್ ಶಿಪ್.. ಮಲ್ಲೇಶ್ವರಂನಲ್ಲಿ ಸಿದ್ದವಾಯ್ತು ಅಖಾಡ..

ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಶನ್ ಸಹಕಾರದೊಂದಿಗೆ ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ಆಯೋಜಿಸಿರುವ 60ನೇ ರಾಷ್ಟ್ರೀಯ ಸೀನಿಯರ್ಸ್(ಪುರುಷರು ಮತ್ತು ಮಹಿಳೆಯರ) ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ಕಪ್ ಅನಾವರಣ ಹಾಗೂ ಜರ್ಸಿ ಲಾಂಚ್ ಕಾರ್ಯಕ್ರಮ ಇಂದು ಮಲ್ಲೇಶ್ವರಂ ಕ್ಲಬ್‌ನಲ್ಲಿ ನಡೆಯಿತ್ತು. ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ಹಿರಿಯ ಬಾಕ್ಸಿಂಗ್ ಪಟು ವೇಣು, ಮಲ್ಲೇಶ್ವರಂ ಶಾಸಕರಾದ ಡಾ.ಸಿ.ಎನ್.ಅಶ್ವತ್ ನಾರಾಯಣ್, ಕರ್ನಾಟಕ ಬಾಕ್ಸಿಂಗ್ ಅಸೋಷಿಯೇಷನ್ ಅಧ್ಯಕ್ಷರಾದ ರಾಜು, ಕಾರ್ಯದರ್ಶಿಗಳಾದ ಜೈಕುಮಾರ್ ಹಾಜರಿದ್ರು.

ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ದೀಪಿಕ ರಾಜು ಹಾಗೂ ಆದಿತ್ಯ 60ನೇ ರಾಷ್ಟ್ರೀಯ ಸೀನಿಯರ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ಜರ್ಸಿ ಅನಾವರಣಗೊಳಿಸಿದ್ರು. ಮಲ್ಲೇಶ್ವರಂ ಶಾಸಕ ಅಶ್ವತ್ ನಾರಾಯಣ್ ಪಂದ್ಯಾವಳಿಯ ಕಪ್ ಅನಾವರಣಗೊಳಿಸುವ ಮೂಲಕ ದಿನಾಂಕ 24 ರಿಂದ 28ರ ವರೆಗೆ 5 ದಿನಗಳ ಕಾಲ ನಡೆಯಲಿರುವ 60ನೇ ರಾಷ್ಟ್ರೀಯ ಸೀನಿಯರ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಚಾಲನೆ ನೀಡಿದ್ರು.

ದೊಡ್ಡ ತನಕ್ಕೆ ಸಾಕ್ಷಿಯಾಯ್ತು ನಮ್ಮ ಕಿಚ್ಚನ ಕ್ರಿಕೆಟ್ ಟೀಮ್.. ಇದನ್ನ ನೋಡಿದ್ರೆ ನಿಮಗೆ ಹೆಮ್ಮೆ ಅನ್ನಿಸುತ್ತೆ.

20 ವರ್ಷಗಳ ನಂತರ ಕರ್ನಾಟಕದಲ್ಲಿ, ಅದರಲ್ಲೂ ಮಲ್ಲೇಶ್ವರಂನಲ್ಲಿ ಈ ಬಾಕ್ಸಿಂಗ್ ಪಂದ್ಯಾವಳಿ ನಡೆಯುತ್ತಿರುವುದು ನಮ್ಮೆಲ್ಲರ ಭಾಗ್ಯ ಅನ್ನೋದಾಗಿ ಶಾಸಕ ಅಶ್ವತ್‌ನಾರಾಯಣ ಸಂತಸ ಹಂಚಿಕೊಂಡ್ರು. ಮಲ್ಲೇಶ್ವರಂ ಜನತೆಗೂ ಇದು ಖುಷಿ ವಿಚಾರವಾಗಿದ್ದು ಪಂದ್ಯಾವಳಿಗಳನ್ನು ವೀಕ್ಷಿಸಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವಂತೆ ಮನವಿ ಮಾಡಿದ್ರು. ನಮ್ಮ ನಾಡಿನ ಹೆಮ್ಮೆಯ ಮಗ ನೆಚ್ಚಿನ ವರನಟ “ಡಾ.ರಾಜ್ ಕುಮಾರ್” ಅವರ ಹೆಸರಲ್ಲಿ ಈ ಬಾಕ್ಸಿಂಗ್ ಪಂದ್ಯಾವಳಿ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲರೂ ಕೈ ಜೋಡಿಸಿ ಶುಭ ಹಾರೈಸುವಂತೆ ಮನವಿ ಮಾಡಿದ್ರು. ಕ್ರೀಡಾಪಟುಗಳಿಗೆ ಬೇಕಾಗಿರೋ ಎಲ್ಲ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿದ್ದು, ಯಾವುದೇ ಕುಂದುಕೊರತೆಗಳು ಇಲ್ಲದಂತಹ ಒಂದು ಉತ್ತಮವಾದ ಬಾಕ್ಸಿಂಗ್ ಪಂದ್ಯಾವಳಿಯನ್ನು ನಡೆಸುವ ಉದ್ದೇಶವನ್ನು ಅಶ್ವತ್ ನಾರಾಯಣ್ ವ್ಯಕ್ತಪಡಿಸಿದ್ರು.

ನಾಳೆ ದಿನಾಂಕ 24-01-2018ರ ಸಂಜೆ 6.00ಗಂಟೆಗೆ 60ನೇ ರಾಷ್ಟ್ರೀಯ ಸೀನಿಯರ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ಉದ್ಘಾಟನ ಸಮಾರಂಭ ನಡೆಯಲಿದ್ದು, ಸ್ಯಾಂಡಲ್‌ವುಡ್‌ನ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ನವರಸ ನಾಯಕ ಜಗ್ಗೇಶ್(ವಿಧಾನ ಪರಿಷತ್ ಸದಸ್ಯ), ನಿವೃತ್ತ ಎಸಿಪಿ ಬಿ.ಕೆ.ಶಿವರಾಮ್, ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಸಂಪತ್ ರಾಜ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಾ.ಸಿ.ಎನ್.ಅಶ್ವತ್ ನಾರಾಯಣ್ ವಹಿಸಿಕೊಳ್ಳಲಿದ್ದಾರೆ.

ಭಾರತ ಮಾನವನ್ನ ಕ್ರಿಕೆಟ್ ಫಿಲ್ಡ್ ನಲ್ಲಿ ಹರಾಜು ಹಾಕಿದ ಶ್ರೀಲಂಕಾ ತಂಡ..

ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ 20ವರ್ಷಗಳ ನಂತರ ರಾಷ್ಟ್ರೀಯ ಸೀನಿಯರ್ಸ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಆಯೋಜಿಸಿದ್ದು, ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಹೆಸರಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿಯಲ್ಲಿ ಚಾಂಪಿಯನ್ ಶಿಪ್ ಗೆಲ್ಲುವವರಿಗೆ ಡಾ.ರಾಜ್ ಕಪ್ ನೀಡಿ ಗೌರವಿಸಲಾಗುತ್ತೆ. ಇಂಡಿಯನ್ ಬಾಕ್ಸಿಂಗ್ ಅಸೋಸಿಯೇಷನ್ ಸಂಯೋಜನೆ ಹೊಂದಿರುವ ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ಹಮ್ಮಿಕೊಳ್ಳುತ್ತಿರುವ ಈ ಚಾಂಪಿಯನ್ ಶಿಪ್‌ಗೆ ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಶನ್ ಸಹ ಕೈಜೋಡಿಸಿದೆ. ಶಾಸಕರಾದ ಡಾ. ಅಶ್ವತ್ಥನಾರಾಯಣ್ ಅವರು ಇದಕ್ಕೆ ಪೂರ್ಣಪ್ರಮಾಣದ ಸಹಕಾರ ನೀಡುತ್ತಿದ್ದಾರೆ.

ಪಂದ್ಯಾವಳಿಯ ಮತ್ತೊಂದು ವಿಶೇಷ ಅಂದ್ರೆ ಈ ಪಂದ್ಯಾವಳಿಗಾಗಿ ಅಂತರಾಷ್ಟ್ರೀಯ ಬಾಕ್ಸಿಂಗ್ ರಿಂಗ್ ತಯಾರಿಸಲಾಗಿದ್ದು, 14 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಈ ಬಾಕ್ಸಿಂಗ್ ರಿಂಗ್ ತಯಾರಿಸಿರುವುದು ವಿಶೇಷ. ಇಂದು ಹೊಸದಾಗಿ ನಿರ್ಮಾಣವಾಗಿರೋ ಬಾಕ್ಸಿಂಗ್ ರಿಂಗ್ ಕರ್ನಾಟಕದ ಉದಯೋನ್ಮುಕ ಕ್ರೀಡಾ ಪ್ರತಿಭೆಗಳಿಗೆ ಸಹಕಾರಿಯಾಗಲಿದೆ.

ರೋಹಿತ್ ಶರ್ಮ ಔಟ್ ಆದ ಸಂದರ್ಭದಲ್ಲಿ ರವಿ ಶಾಸ್ತ್ರಿಗೆ ಮಾಡಿದ ಸನ್ನೆಯೇನು..? ಈ ವಿಷ್ಯಕ್ಕೆ ನೀವು ಶಹಬ್ಬಾಸ್ ಹೇಳಲೇ ಬೇಕು ..!!

ಜನವರಿ 24 ರಿಂದ 28ರವರೆಗೆ ಮಲ್ಲೇಶ್ವರ ಆಟದ ಮೈದಾನದಲ್ಲಿ ಬಾಕ್ಸಿಂಗ್ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿಗೆ 20 ರಾಜ್ಯಗಳಿಂದ ಆಟಗಾರರು ಆಗಮಿಸಿದ್ದು, ಜೊತೆಗೆ ಭಾರತೀಯಸೇನೆಯ ತಂಡವು 31ನೇ ತಂಡವಾಗಿ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ. 45 ಕೆಜಿವರೆಗಿನ ಲೈಟ್‌ಫ್ಲೈ ವಿಭಾಗದಿಂದ ಹಿಡಿದು 61ಕೆಜಿಗೂ ಮೇಲ್ಪಟ್ಟವರ ಸೂಪರ್ ಹೆವಿ ವಿಭಾಗವೂ ಸೇರಿ 10 ವಿವಿಧ ವಿಭಾಗಗಳ ಆಟಗಾರರು ಈ ಬಾಕ್ಸಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ರಾಜ್ಯದಿಂದ 10 ಪುರುಷ ಬಾಕ್ಸರ್‍ಗಳ ತಂಡ ಹಾಗೂ ನಾಲ್ವರು ಮಹಿಳೆಯರುಳ್ಳ ತಂಡ ಭಾಗವಹಿಸುತ್ತಿದ್ದು, ಒಟ್ಟಾರೆ 450ಬಾಕ್ಸರ್‍ಗಳು ಚಾಂಪಿಯನ್ ಶಿಪ್‌ನಲ್ಲಿ ಆಡಲಿದ್ದಾರೆ. ಒಟ್ಟಾರೆ ಪುರುಷ ಮತ್ತು ಮಹಿಳೆಯರ 250ಕ್ಕೂ ಹೆಚ್ಚು ಪಂದ್ಯಗಳು ನಡೆಯಲಿವೆ.

ಕರ್ನಾಟಕವನ್ನು ಪ್ರತಿನಿಧಿಸುವ ಪುರುಷ ತಂಡದಲ್ಲಿ ಈಗಾಗಲೇ ಚಾಂಪಿಯನ್ ಎನಿಸಿಕೊಂಡಿರುವ ಚಿನ್ನ ಪದಕ ವಿಜೇತ ಆದಿತ್ಯ ಹಾಗೂ ಮಹಿಳಾ ತಂಡದಲ್ಲಿ ನ್ಯಾಷನಲ್ ಚಾಂಪಿಯನ್ ಆಟಗಾರ್ತಿ ದೀಪಿಕಾ ರಾಜು ಆಡಲಿದ್ದಾರೆ.

ಲಂಕಾ ದಹನ ಮಾಡಿದ ರೋಹಿತ್..

ಜನವರಿ 24ರ ಬೆಳಗ್ಗೆ 8.00 ರಿಂದಲೇ ತಂಡಗಳ ತಪಾಸಣೆ ನೊಂದಣಿ ಆರಂಭವಾಗುತ್ತದೆ. ಮಧ್ಯಾಹ್ನ 3.30ಕ್ಕೆ ಎಲ್ಲಾ ಬಾಕ್ಸರ್‍ಗಳು ಕಾಡುಮಲ್ಲೇಶ್ವರ ದೇವಸ್ಥಾನದಿಂದ ಮಲ್ಲೇಶ್ವರ ಆಟದ ಮೈದಾನದವರೆಗೂ ಪಥಸಂಚಲನ ನಡೆಸಲಿದ್ದಾರೆ. ನಂತರ ಕ್ರೀಡಾ ನಿಯಮ ಮುರಿಯದೆ, ಕ್ರೀಡಾಸ್ಪೂರ್ತಿಯಿಂದ ಆಡುವ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ನಂತರ ಚಾಂಪಿಯನ್‌ಶಿಪ್‌ಗೆ ವಿದ್ಯುಕ್ತ ಚಾಲನೆ ದೊರೆಯಲಿದೆ. ನಿತ್ಯ ಬೆಳಗ್ಗೆ 10.00ಕ್ಕೆ ಪಂದ್ಯಗಳು ಆರಂಭವಾಗಲಿದೆ.

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Leave a Reply

Top