ದಿವಾಕರ್ ಬಗ್ಗೆ ಶಾಕಿಂಗ್ ಸ್ಟೇಟ್ ಮೆಂಟ್ ಕೊಟ್ಟ ಅನುಪಮಾ…!!

ಬಿಗ್ ಬಾಸ್ ಮನೆಯಲ್ಲಿ ಕೊನೆ ವಾರ… ಮೂರು ತಿಂಗಳ ಮನರಂಜನೆಯ ಯಾನಕ್ಕೆ ಈ ವಾರಾಂತ್ಯದಲ್ಲಿ ಫುಲ್ ಸ್ಟಾಪ್ ಬೀಳಲಿದೆ… ಗೆಲ್ಲೋರು ಯಾರು ಅನ್ನೋ ಗೊಂದಲದ ನಡುವೆ ಗೆಲ್ಲಬೇಕು ಅನ್ನೋ ಸ್ಪರ್ಧಿಗಳೆಲ್ಲ ಆಚೆ ಬರ್ತಿದ್ದಾರೆ… ಈಗ ಮನೆಯಿಂದ ಆಚೆ ಬಂದವರು ಅನುಪಮಾ ಗೌಡ..

ನಿಮಗೆಲ್ಲ ಗೊತ್ತಿರೋ ಹಾಗೆ ಬಿಗ್ ಬಾಸ್ ಮನೆಯಿಂದ ಈಕೆ ಹೊರ ಬಂದಾಯ್ತು… ಟಾಪ್ ಫೈವ್ ಕಂಟೆಸ್ಟೆಂಟ್ ಗಳ ಪೈಕಿ ಅನು ಇರ್ತಾರೆ ಅಂತ ಕಾದವರಿಗೆ ದೊಡ್ಡ ನಿರಾಸೆಯಾಗಿದ್ದು ಸುಳ್ಳಲ್ಲ.. ಮನೆಯನ್ನ ಬಿಟ್ಟು ಹೊರ ಬಂದ ಅನುಪಮಾ ಗೌಡ ಕಿಚ್ಚನೊಂದಿಗೆ ತನ್ನ ಬಿಗ್ ಬಾಸ್ ಮನೆಯ ಜರ್ನಿ ಬಗ್ಗೆ ಮಾತನಾಡೋಕೆ ಶುರು ಮಾಡಿದ್ರು…

ಅನುಪಮಾಗೆ ಮುಟ್ಟಿ ನೋಡಿಕೊಳ್ಳುವಂತೆ ತನ್ನ ಶೈಲಿಯಲ್ಲಿ‌ ಟಾಂಗ್ ಕೊಟ್ಟ ಜೆಕೆ..!

ಈ ಸಂದರ್ಭದಲ್ಲಿ ಎಂದಿಂತೆ ಮನೆಗೆ ಬಂದು ಹೊದ ಸ್ಪರ್ಧಿಗಳ ಬಗ್ಗೆ ಫೋಟೊ ತೋರಿ ಅವರ ಬಗ್ಗೆ ಅಭಿಪ್ರಾಯವನ್ನ ಹೇಳುವಂತೆ ಕೇಳಲಾಗುತ್ತೆ… ಈ ಸಂದರ್ಭದಲ್ಲಿ ಬಂದಿದ್ದೆ ಕಾಮನ್ ಮ್ಯಾನ್ ಲಿಸ್ಟ್ ನ ದಿವಾಕರ್ ಅವರು…

ದಿವಾಕರ್ ಬಗ್ಗೆ ಮಾತನಾಡಲು ಶುರು ಮಾಡಿದ ಅನುಪಮಾ, ಈತನ ಬಗ್ಗೆ ತನ್ನದೇ ರೀತಿಯಲ್ಲಿ ವಿವರಣೆ ನೀಡಲು ಮುಂದಾದದ್ರು… ಅದರಲ್ಲಿ ಒಂದು ಎಲ್ಲರು ಅಂದುಕೊಂಡಿರುವ ಹಾಗೆ ದಿವಾಕರ್ ಇನ್ನೋಸೆಂಟ್ ಅಲ್ಲ ಅಂತ.. ಹೌದು ದಿವಾಕರ್ ತನಗೆ ಏನು ಗೊತ್ತಾಗಲ್ಲ ಅನ್ನೋದು ಎಲ್ಲ ಸುಳ್ಳು.. ಅವರು ಇನ್ನೋಸೆಂಟ್ ಅಲ್ವೆ ಅಲ್ಲ ಅಂದ್ರು…

ಚಂದನ್ ನಡವಳಿಕೆ ಬಗ್ಗೆ ಜಗನ್-ಅನುಪಮಾ-ಕೃಷಿ ಕೊಟ್ಟ ಸರ್ಟಿಫಿಕೇಟ್ ಏನು ಗೊತ್ತಾ..?

ಇನ್ನೂ ಮಾತು ಮುಂದುವರೆಸಿ, ದಿವಾಕರ್ ಕಷ್ಟದಿಂದ ಬಂದಿದ್ದಾರೆ… ಸದ್ಯಕ್ಕೆ ಮನೆಯ ವಾತಾವರಣಕ್ಕೆ ಒಗ್ಗಿಕೊಂಡಿದ್ದು, ಪಕ್ಕಾ ಆಟ ಆಡೋಕೆ ಶುರು ಮಾಡಿದ್ದಾರೆ ಅಂದ್ರು… ಒಟ್ಟಿನಲ್ಲಿ ಸದ್ಯಕ್ಕೆ ಮನೆಯ ಸ್ಪರ್ಧಿಗಳಲ್ಲಿ ಮತ್ತೊಬ್ಬರು ಕೂಡ ಮನೆಯಿಂದ ಹೊರ ಬಂದಿದ್ದಾರೆ.

Image Courtesy : Colors Super

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Top