You are here
Home > ವಾಹಿನಿ ಸುದ್ದಿ > ಇಂದು ಹೊರ ಹೋಗಲಿದ್ದಾರೆ ಈ ನಾಲ್ವರಲ್ಲಿ ಒಬ್ಬರು.. ಹೊರ ಹೋದವರು ಇವರೇ ನೋಡಿ

ಇಂದು ಹೊರ ಹೋಗಲಿದ್ದಾರೆ ಈ ನಾಲ್ವರಲ್ಲಿ ಒಬ್ಬರು.. ಹೊರ ಹೋದವರು ಇವರೇ ನೋಡಿ

ಬಿಗ್ ಬಾಸ್ ಕೊನೆ ವಾರದ ಕೊನೆ ವಾರ್ ಶುರುವಾಗಿದೆ… ಮನೆಯಲ್ಲಿ ಯಾರ್ ಇರ್ತಾರೆ ಯಾರ್ ಹೊರ ಹೋಗ್ತಾರೆ ಅನ್ನೋ ಮತ್ತೊಂದು ಗೊಂದಲಕ್ಕೆ ವಾರದ ಮೊದಲ ದಿನವೇ ತೆರೆ ಬೀಳಲಿದೆ.. ಅನುಪಮಾ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ಬೆನ್ನಲ್ಲೇ ಮತ್ತೊಬ್ಬ ಸ್ಪರ್ಧಿ ಇಂದು ಆಚೆ ಬರಲಿದ್ದಾರೆ…

ಚಂದನ್ ಹಾಗೆ ಜೆಕೆ ಸೇಫ್ ಆಗಿಬಿಟ್ಟಿದ್ದಾರೆ ಅನ್ನೋದು ಪ್ರೋಮೊದಲ್ಲಿ‌ ಎದ್ದು ಕಾಣ್ತಿದೆ.. ಇನ್ನೂಳಿದಂತೆ ದಿವಾಕರ್, ನಿವೇದಿತಾ, ಸಮೀರ್ ಆಚಾರ್ಯ ಹಾಗೆ ಶೃತಿ ನಡುವೆ ಮನೆಯಿಂದ ಹೊರ ಹೋಗುವ ಸ್ಪರ್ಧೆ ಶುರುವಾಗಿದೆ..

ಈ ನಾಲ್ಕು ಜನರನ್ನ ಗಾರ್ಡನ್ ಏರಿಯಾಗೆ ಕರೆದು ಮುಂದೆ ಒಂದು ಬಜರ್ ಇಟ್ಟು ಹೊರ ಹೋಗಲಿರುವ ಸ್ಪರ್ಧಿಯನ್ನ ವಿಭಿನ್ನವಾಗಿ ಆಯ್ಕೆ ಮಾಡ್ತಿದ್ದಾರೆ ಬಿಗ್ ಬಾಸ್… ಅಂದಹಾಗೆ ಇಂದು ಹೊರಹೋಗಲಿರುವ ಸ್ಪರ್ಧಿಯ ಆಯ್ಕೆ ಪ್ರೇಕ್ಷಕರ ಓಟಿಂಗ್ ಮೇಲೆ ನಿಂತಿದೆ.‌

ಇನ್ನೂ ಬಿಗ್ ಬಾಸ್ ಮನೆಯಿಂದ ಹೊರ ಬರಲಿರುವ ಸ್ಪರ್ಧಿ ಅಂದ್ರೆ ಅದು ಶೃತಿ ಪ್ರಕಾಶ್ ಅಂತ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.. ಸದ್ಯಕ್ಕೆ ಇದು ಬರೀ ಅಂತೆ ಕಂತೆ ನ್ಯೂಸ್ ಆಗ್ದೆ ನಿಜವೇ ಆದ್ರೆ ಶೃತಿ ಹೊರ ಬರುವುದು ಖಚಿತ.

ಇಂದು ರಾತ್ರಿ 6ರಲ್ಲಿ ಒಬ್ಬರಿಗೆ ಗೇಟ್ ಪಾಸ್ ಸಿಗಲಿದ್ದು ಆ ನತದೃಷ್ಟ ಸ್ಪರ್ಧಿ ಯಾರು ಅಂತ ಕಾದು ನೋಡಬೇಕಾದ ಸಮಯ ಎದುರಾಗಿದೆ‌.. ನೋಡೋಣ ಇಂದಿನ ಸಂಚಿಕೆಯಲ್ಲಿ ಈ ನಾಲ್ಕು ಜನರಲ್ಲಿ ಯಾರು ಎಲಿಮಿನೆಟ್ ಆಗಲಿದ್ದಾರೆ ಅಂತ.

Image Courtesy : Colors Super

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

 

 

Comments

comments

Similar Articles

Leave a Reply

Top