You are here
Home > ವಾಹಿನಿ ಸುದ್ದಿ > ಈ ನಟಿಯನ್ನ ಮದುವೆ ಆಗೋಕೆ ರೆಡಿಯಂತೆ ಚಂದನ್.. ಆದ್ರೆ ಒಂದು ಕಂಡಿಷನ್ ಏನದು..?

ಈ ನಟಿಯನ್ನ ಮದುವೆ ಆಗೋಕೆ ರೆಡಿಯಂತೆ ಚಂದನ್.. ಆದ್ರೆ ಒಂದು ಕಂಡಿಷನ್ ಏನದು..?

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಿಂತ ಹೆಚ್ಚಾಗಿ ಮನರಂಜನೆ ನೀಡೋದು ಚಂದನ್.‌. ತನ್ನ ಹಾಡಿನ ಮೂಲಕ ಹಾಗೆ‌ ಪ್ರೀತಿಗೀತಿ ಅಂತ ಶ್ರೀಕೃಷ್ಣನ ಹಾಗೆ ಗುರುತಿಸಿಕೊಂಡಿರುವುದು ಕೂಡ ಈತನೆ.. ಹೀಗಾಗಿ ಚಂದನ್ ಪಕ್ಕ ಎಂಟರ್ಟೈನ್ಮೆಂಟ್ ಫ್ಯಾಕ್ಟರಿ ಆಗಿ ಬದಲಾಗಿಬಿಟ್ಟಿದ್ದಾರೆ…

ಚಂದನ್ ಬಿಗ್ ಬಾಸ್ ಮನೆಯಲ್ಲಿ ತನ್ನ ಲವ್ ಹಾಗೆ ಮದುವೆ ಮ್ಯಾಟರ್ ನಿಂದಲೇ ಫೇಮಸ್ ಆಗಿದ್ದಾರೆ… ಸದ್ಯಕ್ಕೀಗ ಮನೆಯಲ್ಲಿ ಚಂದನ್ ಗಾಗಿ ಉಳಿದಿಕೊಂಡಿರುವ ಏಕೈಕ ಹುಡುಗಿ ಶೃತಿ.. ನಿವೇದಿತಾ ಮೇಲೆ ಕ್ರಷ್ ಅಂತ ಚಂದನ್ ಹೇಳಿಲ್ಲ.. ಜೊತೆಗೆ ಅದು ನಿಮಗೂ ಗೊತ್ತಿದೆ… ಆದರೆ ಚಂದನ್ ಶೃತಿಯೊಂದಿಗೆ ಜಾಸ್ತಿ ಸಮಯ ಕಳೆಯುತ್ತಿದ್ದು ನಿಮಗೂ ಗೊತ್ತು..

ಬಿಗ್ ಬಾಸ್ ಮನೆಯಿಂದ ಚಂದನ್ ಆಚೆ ಬಂದ ನಂತರ ಅವರ ತಂದೆ ಮಾಡೋ ಮೊದಲ ಕೆಲಸ ಇದಂತೆ…!!

ಇನ್ನೂ ಅನುಪಮಾ ಜೊತೆಗೆ ಮದುವೆ ಆಗುವವರೆಗೂ ಮಾತನಾಡಿದ ಚಂದನ್ ಈಗ ಅನು ಬಿಟ್ಟು ಹೋಗಿದ್ದಾರೆ… ಹೀಗಾಗಿ ಮನೆಯಲ್ಲಿರೋ ಒಂದೇ ಆಯ್ಕೆ ಶೃತಿ.. ಬಟ್ ಅನುಪಮಾ ಮನೆಯಿಂದ ಹೊರ ಹೋಗುವುದಕ್ಕೂ ಮೊದಲೇ‌ ಚಂದನ್ ಹೇಳಿದ ಮಾತೊಂದನ್ನ ಕಿಚ್ಚನ ಮುಂದೆ ಹೇಳಿ ಹೋಗಿದ್ದಾರೆ.. ಅದೇ ಚಂದನ್ ಮದುವೆ ಮ್ಯಾಟರ್..

ಕಳೆದ ವಾರ ಮನೆಗೆ ಆಶಿತಾ ಎಂಟ್ರಿಕೊಟ್ಟದ್ದು ನಿಮಗೆ ಗೊತ್ತೆ ಇದೆ… ಈಕೆ ಮನೆಗೆ ಬಂದು ಚಂದನ್ ಬಳಿ ಮಾತನಾಡುವಾಗ ನಿನಗೆ ಹೊರಗೆ ಒಂದು ಹುಡುಗಿ ನೋಡಿದ್ದೀನಿ… ಆಚೆ ಬಾ ಮದುವೆ ಮಾಡಿಸ್ತೀನಿ ಅಂದ್ರು.. ಇದಕ್ಕೆ ಚಂದನ್ ಫುಲ್ ಖುಷಿಯಿಂದ ಹೌದ! ಹಾಗಿದ್ರೆ ಓಕೆ ಅಂತ ಸಮ್ಮತಿಯನ್ನ ಸೂಚಿಸಿದ್ರು..

ಚಂದನ್ ಗೆ ಸಪ್ರೈಸ್ ಗಿಫ್ಟ್ ಕೊಟ್ಟ ಬಿಗ್ ಬಾಸ್..!!

ಆನಂತರ ಅನುಪಮಾ ಹಾಗೆ ಚಂದನ್ ನಡುವೆ ನಡೆದ ಸಂಭಾಷಣೆಯಲ್ಲಿ ಚಂದನ್ ಹೀಗೆ ಹೇಳಿದ್ದಾರೆ… ಆಶಿತಾ ನನಗೆ ಹುಡುಗಿ ನೋಡಿದ್ದೀನಿ ಅಂತ ಹೇಳಿದ್ದಾರೆ.. ಆದರೆ ಯಾರಿಗೆ ಗೊತ್ತು ಆಚೆ ಹೋದಮೇಲೆ ಕನ್ನಡಿ ಮುಂದೆ ನಿಲ್ಲಿಸಿ ಅವರನ್ನ ತೋರಿಸಿ ಇದೆ ಹುಡುಗಿ ಅಂದ್ರೆ ಏನ್ ಮಾಡೋದು ಅಂದ್ರು.. ಇದನ್ನೆ ಅನುಪಮಾ ಕಿಚ್ಚ ಸುದೀಪ್ ಮುಂದೆ ಹೇಳಿದ್ರು..

ರಿಯಾಜ್ ಪ್ರಕಾರ ಚಂದನ್ ಈ ಹುಡುಗಿಯನ್ನ ಮದುವೆ ಆಗಬೇಕಂತೆ… ಹುಡುಗಿ ಯಾರು ಅಂತ ಗೊತ್ತಾದ್ರೆ ನೀವೆ ಶಾಕ್ ಆಗ್ತೀರಾ..?

ಇನ್ನೂ ಈ ಬಗ್ಗೆ ಸುದೀಪ್ ಅವರು, ಹಾಗೇನಾದ್ರು ಆಶಿತಾ ತನ್ನನ್ನೇ ಮದುವೆ ಆಗುವಂತೆ ಕೇಳಿದ್ರೆ ಆಗ್ತೀರಾ ಅಂದ್ರು..? ಇದಕ್ಕೆ ಚಂದನ್ ಅಷ್ಟೇ ನಾಜೂಕಾಗಿ ಜಾತಕ ಕೂಡಿ ಬರಬೇಕಲ್ಲ ಅಂದ್ರು… ಹಾಗಿದ್ರೆ ಜಾತಕ ಕೂಡಿ ಬಂದ್ರೆ ಆಶಿತಾ ಕೈ ಹಿಡಿತಾರೆ ಚಂದನ್ ಅನ್ನೋ ಪ್ರಶ್ನೆ ಹಾಗೆ ಉಳಿದುಕೊಂಡಿದೆ..

ಇನ್ನೂ ಆಶಿತಾ ಅವರ ವಿಚಾರಕ್ಕೆ ಬರೋದಾದ್ರೆ ತನ್ನ ನಟನೆಯ ಮೂಲಕ ಕಿರುತೆರೆಯಲ್ಲಿ ಹೆಸರುವಾಸಿಯಾದ ನಟಿಮಣಿ ಈಕೆ.. ಬಿಗ್ ಬಾಸ್ ನಲ್ಲಿ ಕೆಲವೆ ದಿನ ಇದ್ರು, ಬಿಗ್ ಬಾಸ್ ನ ಮನೆಯಲ್ಲಿನ ಗಂಡ್ ಹೈಕ್ಳ ಹಾರ್ಟ್ ಫೇವರೆಟ್ ಆಗಿದ್ದಾಕೆ ಅನ್ನೋದು ನಿಮಗೂ ಗೊತ್ತು..

 ಶೃತಿ ಚಂದನ್ ಜೊತೆಗೆ ಡೇಟಿಂಗ್ ಹೋಗದಂತೆ ತಡೆದಿದ್ಯಾರು..??

Pic Courtesy: Colors Super

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Leave a Reply

Top