ಕಣ್ಣೀರಿಟ್ಟ ನಿವೇದಿತಾ..! ಮಾತನಾಡಲು ಹೋದರು ದೂರ ತಳ್ಳಿದ ಈ ಇಬ್ಬರು ಸ್ಪರ್ಧಿಗಳು…!

ಬಿಗ್ ಬಾಸ್ ಮನೆಯ ಬೇಬಿ ಡಾಲ್ ನಿವೇದಿತಾ ಗೌಡ.. ಈಕೆಯ ಮುಗ್ದತೆ ಎಲ್ಲರ ಮನ ಗೆದ್ದಿದೆ. ಒಂದು ಕಡೆ ಸ್ಪರ್ಧಿಗಳು ಫೆವರೆಟ್ ಹುಡುಗಿ, ಮತ್ತೊಂದೆಡೆ ಪ್ರೇಕ್ಷಕರ ಮುದ್ದಾದ ಸ್ಪರ್ಧಿ. ‌ನಿವೇದಿತಾ ಗೌಡ ಆಟ ಹಾಗೂ ಮಾತುಗಳು ವಯಸ್ಸಿಗೂ ಮೀರಿದ್ದು..

ಬಿಗ್ ಬಾಸ್ ಕಾರ್ಯಕ್ರಮ ಕೆಲವೇ ವಾರಗಳಲ್ಲಿ ಮುಗಿಯಲಿದೆ. ಫಿನಾಲೆ ಹತ್ತಿರವಿದ್ದಂತೆ ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳಲ್ಲಿ ಮೂರು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಶೃತಿ, ಅನುಪಮಾ ಹಾಗೂ ನಿವೇದಿತಾ ಗೌಡ. ಅದರಲ್ಲಿ ನಿವೇದಿತಾ ಅತಿ ಕಿರಿಯ ವಯಸ್ಸಿನ ಹುಡುಗಿ.

ಶೃತಿ ಹಾಗೂ ಅನುಪಮಾ ಗೌಡ ಆತ್ಮೀಯ ಸ್ನೇಹಿತರು. ಜೊತೆಗೆ ಉತ್ತಮ ಆಟಗಾರರು ಕೂಡ ಹೌದು. ಜೋಡಿ ಟಾಸ್ಕ್ ಸೇರಿದಂತೆ ಇನ್ನುಳಿದ ಆಟಗಳಲ್ಲೂ ಜೊತೆಗೂಡಿ ಆಟವಾಡಿ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿ ಇವರಿಬ್ಬರ ಮಧ್ಯೆ ಆತ್ಮೀಯತೆ ಬೆಳೆದುಕೊಂಡಿದೆ.

ಇನ್ನು ನಿವೇದಿತಾ ಗೌಡ ಈ ಹಿಂದೆ ಜೆಕೆ ಅವರೊಂದಿಗೆ ಆತ್ಮೀಯರಾಗಿದ್ದು ನಂತರ ಚಂದನ್ ಶೆಟ್ಟಿ ಜೊತೆ ಸೇರಿಕೊಂಡರು. ಇದೀಗ ಫಿನಾಲೆ ಸಮೀಪಿಸುತ್ತಿದ್ದಂತೆ ಮನೆ ಕಾಲಿ ಕಾಲಿ ಎ‌ನಿಸುತ್ತಿದೆ. ಜೊತೆಗೆ ನಿವೇದಿತಾಗೆ ಚಂದನ್ ನ ಹೊರತು ಪಡಿಸಿ ಶೃತಿ ಹಾಗೂ ಅನುಪಮಾ ಅವರೊಂದಿಗೆ ಇರಲು ಬಯಸಿದ್ದಾರೆ.

ಆದರೆ ಶೃತಿ ಹಾಗೂ ಅನುಪಮಾ ಹೆಚ್ಚಾಗಿ ಒಟ್ಟಿಗೆ ಇರ್ತಾರೆ. ನಿವೇದಿತಾ ಗೌಡ ಜೊತೆ ಹೆಚ್ಚು ಕಾಲಾವಕಾಶ ನೀಡಿದ ಕಾರಣ ನಿವೇದಿತಾ ಅವರಿಗೆ ಬೇಸರ ಮೂಡಿಸಿದೆ. ಅಲ್ಲದೆ ಅವರಿಬ್ಬರ ಬಳಿ ಹೋದರು ಅಷ್ಟಾಗಿ ಗಮನ ಹರಿಸಿವುದಿಲ್ಲ. ಇದರಿಂದ ಬೇಸತ್ತು ಚಂದನ್ ಮುಂದೆ‌ ಕಣ್ಣೀರಿಟ್ಟು ತಮ್ಮ ದುಃಖ ಹಂಚಿಸಿಕೊಂಡರು. ಇದು ಇಂದಿನ ಪ್ರೋಮೊ ಹೈಲೈಟ್ಸ್..

Pic courtesy:Colors Super

#BBK5

ಎಲ್ಲರಲ್ಲೊಂದಾಗುವ ಹಂಬಲ. ಸಿಕ್ಕದೆ ಹೋಯ್ತೆ, ಉಳಿದವರ ಬೆಂಬಲ ! #BBK5 #ColorsSuper

Posted by Colors Super on Wednesday, January 17, 2018

Comments

comments

Similar Articles

Top