You are here
Home > ವಾಹಿನಿ ಸುದ್ದಿ > ಅಭಿಮಾನಿಗಳ ಸಾರಥಿ ದರ್ಶನ್ ಅವರನ್ನ ಅಡ್ಡಗಟ್ಟಿದ್ರಾ ಪೋಲಿಸರು..?

ಅಭಿಮಾನಿಗಳ ಸಾರಥಿ ದರ್ಶನ್ ಅವರನ್ನ ಅಡ್ಡಗಟ್ಟಿದ್ರಾ ಪೋಲಿಸರು..?

ಸದ್ಯಕ್ಕೆ ಒಂದು ವಾರದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತುಂಬಾ ದೊಡ್ಡ ಮಟ್ಟದಲ್ಲಿ‌ ಸುದ್ದಿಯಾಗ್ತಿದ್ದಾರೆ… ಈ‌ ಎಲ್ಲ ಸುದ್ದಿಗಳು ಅಭಿಮಾನಿಗಳಿಗೆ ಖುಷಿ ಕೊಡುವುದೆ ಆಗಿದೆ ಅನ್ನೋದು ಮತ್ತೊಂದು ವಿಶೇಷ…

ಕೋಟ್ಯಾಂತರ ರೂಪಾಯಿ ಕೊಟ್ಟು ಲಂಬೋರ್ಘಿನಿ ಕಾರ್ ತೆಗೆದುಕೊಂಡು ಸುದ್ದಿಯಾಗಿದ್ದ ದರ್ಶನ್ ಅವರು, ಅದರ ಜೊತೆಗೆ ಮತ್ತೆ ಸುದ್ದಿಯಾಗಿದ್ದು ಅವರ ಮುಂದಿನ ಸಿನಿಮಾ ಸೆಟ್ಟೇರಿದಾಗ.. ಅದಾದ ಮೇಲೆ ಸಂಕ್ರಾಂತಿಯಂದು ಹಸುಗಳನ್ನ ಕಿಚ್ಚಾಯಿಸುವ ಮೂಲಕ… ಒಟ್ಟಿನಲ್ಲಿ ದರ್ಶನ್ ಭಾರಿ ಸುದ್ದಿ ಮಾಡಿದ್ರು…

ಸುದೀಪ್-ದರ್ಶನ್ ಅವರ ಬಗ್ಗೆ ಯಶ್ ಹೇಳಿದ್ದನ್ನ ಕೇಳಿದ್ರೆ ಫ್ಯಾನ್ಸ್ ಖುಷಿಯಾಗೋದು ಗ್ಯಾರಂಟಿ…

ಸದ್ಯ ತನ್ನ ನೆಚ್ಚಿನ ಕಾರನ್ನ ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ಪೂಜೆಗಾಗಿ ತೆಗೆದುಕೊಂಡಿದ್ದು ಹೋಗಿದ್ದು ನಿಮಗೆ ಗೊತ್ತಿದೆ… ಅಲ್ಲೂ ಅಭಿಮಾನಿಗಳ ದಂಡೆ ಸೇರಿತ್ತು… ತನ್ನ ನೆಚ್ಚಿನ ನಟನನ್ನ ಕಣ್ತುಂಬಿಕೊಳ್ಳುವ ಅವಕಾಶ ಅಲ್ಲೂ ಅಭಿಮಾನಿಗಳಿಗೂ ಒದಗಿ ಬಂತು..

ಇನ್ನೂ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಕಾರು ಕರ್ನಾಟಕದಲ್ಲಿ ಫುಲ್ ಫೇಮಸ್ ಆಗಿದೆ.. ಈ ಕಾರ್ ರಸ್ತೆಗೆ ಬಂದ್ರೆ‌ ಅದರಲ್ಲಿ ದರ್ಶನ್ ಇರ್ತಾರೆ ಅನ್ನೋದು ಅಭಿಮಾನಿಗಳಿಗೆ ಪಕ್ಕಾ ಆಗಿದೆ… ಇನ್ನೂ ಚಾಮುಂಡಿ ಬೆಟ್ಟದ ಬಳಿ ಪೋಲಿಸರು ದರ್ಶನ್ ಅವರ ಕಾರನ್ನ ಅಡ್ಡಗಟ್ಟಿ ನಿಲ್ಲಿಸಿದ್ರು.. ಇದಕ್ಕೆ ಕಾರಣವೇನಿರಬಹದು ಅಂತ ಹಲವರು ಯೋಚಿಸಿದ್ರು…

ತನ್ನ ತಂದೆ ತೀರಿಕೊಂಡ ಘಳಿಗೆ ದರ್ಶನ್ ಏನು ಹೇಳಿದ್ರು ಗೊತ್ತಾ..? ಛಲಗಾರ ಚಾಲೆಂಜಿಂಗ್ ಸ್ಟಾರ್..!!

ಅದು ಬೇರೆ ಯಾವುದಕ್ಕೂ ಅಲ್ಲ ದರ್ಶನ್ ಅವರ ಮೇಲಿನ ಅಭಿಮಾನಕ್ಕೆ… ದರ್ಶನ್ ಜೊತೆಗೆ ಅಲ್ಲಿನ ಟ್ರಾಫಿಕ್ ಪೋಲಿಸರು ಫೋಟೊ ಕ್ಲಿಕ್ಕಿಸಿಕೊಂಡ್ರು.. ಪೋಲಿಸರೊಂದಿಗೆ ದಾಸ ಕೂಡ ಸೇರಿ ಫೋಟೊಗೆ ಫೋಸ್ ನೀಡಿದ್ರು…

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Leave a Reply

Top