You are here
Home > ವಾಹಿನಿ ಸುದ್ದಿ > ಆಶಿತಾಗೆ ಜಗನ್‌ ಅಂದ್ರೆ ಯಾರು‌ ಅಂತಾನೆ ಗೊತ್ತಿಲ್ವಂತೆ..! ಹೀಗೆ ಹೇಳಲು ಕಾರಣವೇನು ಗೊತ್ತಾ..?

ಆಶಿತಾಗೆ ಜಗನ್‌ ಅಂದ್ರೆ ಯಾರು‌ ಅಂತಾನೆ ಗೊತ್ತಿಲ್ವಂತೆ..! ಹೀಗೆ ಹೇಳಲು ಕಾರಣವೇನು ಗೊತ್ತಾ..?

ಕಳೆದ‌ ವಾರ ಮನೆಯ ಸದಸ್ಯರಿಗೆ ತಮ್ಮ‌ ಮನೆಯವರನ್ನ ನೋಡುವ ಅವಕಾಶ‌‌ ಕೊಟ್ಟಿದ್ರು ಬಿಗ್ ಬಾಸ್… ಈ‌ ಎಲ್ಲ‌ ಸಂಚಿಕೆಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.. ಜೊತೆಗೆ ಸ್ಪರ್ಧಿಗಳಿಗೂ‌ ತಮ್ಮ‌ ಮನೆಯವರನ್ನ‌ ನೋಡಿದ ಖುಷಿ ಸಿಕ್ಕಿತ್ತು…

ಈ ವಾರವೂ ಮನೆಗೆ ಅತಿಥಿಗಳಾಗಿ ಬಿಗ್ ಬಾಸ್ ಹಳೆ ಸ್ಪರ್ಧಿಗಳೆ ಹೋಗುತ್ತಿದ್ದಾರೆ… ನಿನ್ನೆಯ ಸಂಚಿಕೆಯಲ್ಲಿ ತೇಜಸ್ವಿನಿ ಹಾಗೆ ಆಶಿತಾ ಬೇರೆ ಬೇರೆ ಸಮಯಗಳಲ್ಲಿ ಬಿಗ್ಬಾಸ್ ಮನೆಗೆ ಒಂದು ಸುತ್ತು ಹೋಗಿ ಬಂದ್ರು… ಹೋಗಿ ಬಂದಿದ್ದು ಮಾತ್ರವಲ್ಲ ಟಾಸ್ಕ್ ನ ಸಹ ಆಡಿಸಿ ಬಂದ್ರು..

ಇನ್ನೂ ಆಶಿತಾ ಬಂದಿದ್ದು‌ ಎಂದಿನಂತೆ ಮನೆಯವರಿಗೆ ಖುಷಿ ನೀಡಿತ್ತು… ಹೀಗಾಗೆ ಈಕೆಯನ್ನ ಮನೆಯವರೆಲ್ಲ ಆತ್ಮೀಯವಾಗಿಯೆ ಬರ ಮಾಡಿಕೊಂಡಿದ್ರು.. ಕುಶಲೋಪರಿಯನ್ನ ವಿಚಾರಿಸುತ್ತ ಮಾತನಾಡುತ್ತಿದ್ದ ಆಶಿತಾಗೆ ಕೇಳಿಬಂದ ಪ್ರಶ್ನೆ ಜಗನ್ ಬಗ್ಗೆ…

ನಿಮಗೆ ಜಗನ್ ಆಶಿತಾ‌ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ.. ಮನೆಯಲ್ಲಿ ಪ್ರೇಮಿಗಳ ಹಾಗೆ ಇದ್ರು ಅನ್ನೋ ಮಾತುಗಳಿದ್ರು, ಬಿಗ್ ಬಾಸ್ ನಿಂದ ಹೊರ ಬಂದಮೇಲೆ ಈ ಬಗ್ಗೆ ಜನತೆಗೆ ಸ್ಪಷ್ಟ ಹೇಳಿಕೆಯನ್ನ ನೀಡಿ ನಾವು ಜಸ್ಟ್ ಫ್ರೆಂಡ್ ಅಂತ ಹೇಳಿದ್ರು…

ಆದ್ರೆ ಮನೆಯಲ್ಲಿ ಇಂದು ದಿವಾಕರ್ ಜಗನ್ ಹೇಗಿದ್ದಾರೆ ಅನ್ನೋ ಪ್ರಶ್ನೆಯನ್ನ ಆಶಿತಾ ಮುಂದಿಟ್ಟಾಗ ಆಶಿತಾ ಹೇಳಿದ್ದು ಹೀಗಿತ್ತು‌‌‌..’ಜಗನ್ ಅಂದ್ರೆ ಯಾರು ಅಂದ್ರು’… ಇದಕ್ಕೆ‌ ಒಂದು ಕ್ಷಣ ಎಲ್ಲ ಶಾಕ್ ಆದ್ರೂ… ಇದಕ್ಕೆ ಚಂದನ್ ಫೋಟೊ ತೋರಿಸಿ ಅವರೆ ಜಗನ್ ಅಂದ್ರು…

ಈ ವಿಚಾರಕ್ಕೆ ಅಷ್ಟೇನೂ ಸೊಪ್ಪು ಹಾಕದ ಆಶಿತಾ ಇನ್ನೇನು‌ ಕೆಲವಾರಗಳಲ್ಲಿ ನೀವೂ ಎಲ್ಲ ಆಚೆ ಬರ್ತೀರಾ ಅಲ್ವ ಆಗ ಗೊತ್ತಾಗುತ್ತೆ ಜಗನ್ ಹೇಗಿದ್ದಾನೆ ಅಂತ ಹೇಳಿ ಸುಮ್ಮನಾದ್ರು…

ಇದಿಷ್ಟು ತಮಾಷೆಯಾಗಿ ನಡೆಯುತ್ತಿದ್ದ ಮಾತುಕತೆಯಾಗಿದ್ರಿಂದ ಆಶಿತಾ ಅವರು ಕೂಡ ಅದಕ್ಕೆ ಅಷ್ಟೆ ತಮಾಷೆಯಾಗಿ ಉತ್ತರ ನೀಡಿದ್ರು… ಆದ್ರೆ ಈ ಉತ್ತರವನ್ನ ಮನೆಯವರು ನಿರೀಕ್ಷಿಸಿರಲಿಲ್ಲ ಅನ್ನಿಸುತ್ತೆ… ಒಟ್ಟಿನಲ್ಲಿ‌ ಆಶಿತಾ ಇಂದು ಮನೆಗೆ ಹೋಗಿದ್ದು ಅಲ್ಲಿನ ಸ್ಪರ್ಧಿಗಳ ಮೊಗದಲ್ಲಿ‌ ನಗುವನ್ನ ತರೆಸಿತ್ತು…

pic courtsy:Colore HD

Comments

comments

Similar Articles

Leave a Reply

Top