ಪುಟ್ಟಗೌರಿ ‌ಮೇಲೆ‌ ಹೊಸ ಆರೋಪ.. ಕೋಟಿ‌ ಕೋಟಿ‌ ವಂಚನೆ ಮಾಡಿದ ಗೌರಿ..

ಪುಟ್ಟಗೌರಿ ಹವಾ ಹೇಗಿದೆ ಅಂದ್ರೆ‌ ಪುಟ್ಟಗೌರಿ ಕೂತ್ರು ಸುದ್ದಿ, ನಿಂತ್ರೂ ಸುದ್ದಿ.. ಅಷ್ಟರ ಮಟ್ಟಿಗೆ ಪುಟ್ಟಗೌರಿ ಎಲ್ಲರನ್ನೂ ಆವರಿಸಿಕೊಂಡಿದ್ದಾರೆ.. ಇತ್ತೀಚಿಗೆ ಅಷ್ಟೆ ಪುಟ್ಟಗೌರಿ, ಕರಿಷ್ಮಾ ಆಗಿ ಬದಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿ ಮಾಡಿದರು. ಗೌರಿ ಕರಿಷ್ಮಾ ಆಗಿ ಬದಲಾಗಲು ಕಾರಣ ಧರ್ಮ ರಾಜ ತೇಜ…‌

ಧರ್ಮ, ಹಿಮಾ ಅವರ ತಂದೆ..‌‌ ಮಹೇಶ‌ ಹಾಗೂ ಹಿಮಾ ಮದುವೆ ಮಾಡಿಸುವಲ್ಲಿ ಧರ್ಮ ಯಶಸ್ವಿಯಾಗಿದ್ರು.. ನಂತರ ಗೌರಿಯನ್ನು ಮುಗಿಸಬೇಕೆಂದು ಸುಪಾರಿ ಕೊಟ್ಟು ಕೊಲ್ಲಲು ಪ್ರಯತ್ನಿಸಿದರು. ಇದು ವಿಫಲವಾದ ಬಳಿಕ ಬೆಟ್ಟದಿಂದ ಕೆಳಗೆ ತಳ್ಳಿದರು. ಪುಟ್ಟಗೌರಿ ಬದುಕಿ‌ ಬಂದು ಕರಿಷ್ಮಾ ಆಗಿ ಬದಲಾಗಿ ಧರ್ಮ ಅವರ‌ ಮೇಲೆ ಸೇಡು ತೀರಿಸಿಕೊಳ್ಳುಲು ಮುಂದಾದ್ರು..

ಇನ್ನೂ ಮುಂದೆ ಸೀರಿಯಲ್ ಮಾಡಲ್ವಂತೆ ಪುಟ್ಟಗೌರಿ ರಂಜಿನಿ.. ಕಾರಣ ಕೇಳಿದ್ರೆ ನೀವೂ ಬೇಸರವಾಗೋದು ಗ್ಯಾರಂಟಿ

ಪ್ರಪಂಚದಾದ್ಯಂತ ಕೋಟಿ ಕೋಟಿ ವ್ಯವಹಾರ ನಡಿಸುತ್ತೇನೆ..‌ ಕಾಲ್ ಕೆಳಗೆ ಸಾವಿರಾರು ಕೆಲಸಗಾರರು. ಓಡಾಡಲು ಬೆಲೆ ಬಾಳುವ ಕಾರುಗಳು‌. ಮನೆ ವಸ್ತುಯಿಂದ ಹಿಡಿದು ನಾಯಿವರೆಗೆ ಎಲ್ಲವೂ ಬಾಡಿಗೆಗೆ ಖರೀದಿ‌‌ ಮಾಡಿ, ಸಾವಿರಾರು ಕೋಟಿ ರೂಪಾಯಿ ಒಡತಿ ಎಂದು ಹೇಳಿ ಧರ್ಮ ಅವರನ್ನು ನಂಬಿಸುತ್ತಾರೆ ಕರಿಷ್ಮಾ.

ಬುಸ್ಸಿನೆಸ್ಸ್ ಪಾಟ್ನರ್ಶಿಪ್ ನೆಪದಲ್ಲಿ ಖಾಲಿ ಪೇಪರ್ ಮೇಲೆ ಸೈನ್ ಮಾಡಿಸಿಕೊಂಡು ಧರ್ಮ ಅವರಿಗೆ 420 ಕೋಟಿ ಮೋಸ ಮಾಡಿದ್ದಾರೆ‌ ಪುಟ್ಟಗೌರಿ ಅಲಿಯಾಸ್ ಕರಿಷ್ಮಾ..

ಸೈನ್ ಮಾಡುವಾಗ ತಂಗಿ ಸಾಗರಿ ಹೇಳಿದರೂ ಹಿಂದೆ‌ ಮುಂದೆ‌ ನೋಡದೇ ಧರ್ಮ ಖಾಲಿ ಪೇಪರ್ ಗೆ ಸೈನ್ ಮಾಡಿ, ದುಡ್ಡು ಕೂಡ ಅನ್ ಲೈನ್ ನಲ್ಲಿ ಕಳುಹಿಸುತ್ತಾರೆ. ನಯಾ ಪೈಸಾನೂ ಬಿಡದೆ ಎಲ್ಲವನ್ನೂ ದೊಚಿದ್ರು ಪುಟ್ಟಗೌರಿ..

ಮೋಸ ಹೋಗಿದ್ದೇವೆ ಎಂದು ತಿಳಿದ್ಮೇಲೆ ಸತ್ವಃ ಗೌರಿಯೇ ಬಂದು ಈ ಬಗ್ಗೆ ವಿವರಣೆ ನೀಡ್ತಾರೆ.

ಸಂಭಾವನೆ ವಿಷ್ಯದಲ್ಲೂ ಪುಟ್ಟಗೌರಿಯದ್ದೇ ಹವಾ.. ಪುಟ್ಟಗೌರಿ ಪಡೆಯೋ ಸಂಭಾವನೆ ಎಷ್ಟಿದೆ ಗೊತ್ತಾ..?

ತನ್ನಿಂದ ಮಹೇಶನನ್ನು ಕಿತ್ತುಕೊಂಡು, ಕ್ಯಾನ್ಸರ್ ಇದೆ ಎಂದು ಸುಳ್ಳು ಹೇಳಿ, ಸುಪಾರಿ‌ ಕೊಟ್ಟು ಕೊಲ್ಲಲು ಪ್ರಯತ್ನ ಮಾಡಿ ಎಲ್ಲವೂ ವಿಫಲವಾದ ನಂತರ ಬೆಟ್ಟದಿಂದ ಕೆಳಗೆ ತಳ್ಳಿದ್ರಿ.‌ ಅದೃಷ್ಟವಶಾತ್ ನಾನು ಬದುಕಿ ಬಂದೆ, ಇದಕ್ಕೆ ಉತ್ತರ ಕೊಡಬೇಕೆಂದು ಹಾಗೂ ಸೇಡಿನ ಪ್ರತಿಕಾರವಾಗಿ ಈ ರೀತಿ ಮಾಡಿದ್ದೇನೆ ಎಂದಿದ್ದಾರೆ.

ಎಲ್ಲವೂ ಕಳೆದುಕೊಂಡು ಧರ್ಮ ಹಾಗೂ ಅವರ ಕುಟುಂಬ ಈಗ ಬೀದಿಯಲ್ಲಿ ವಾಸ ಮಾಡುತ್ತಿದ್ದಾರೆ. ಗೌರಿ ಬದುಕು ಬರಡು ಮಾಡಿದರು ಸಹ, ಗೌರಿ ಅವರಿಗೆ ಮೋಸ ಮಾಡಿರುವುದರ ಕುರಿತು ಬೇಸರ ವ್ಯಕ್ತಪಡಿಸಿದರು.

ಸೋಶಿಯಲ್ ಮೀಡಿಯಾದಲ್ಲಿ ಪುಟ್ಟಗೌರಿಯದ್ದೆ ದೊಡ್ಡ ಹವಾ..!!

ಅರಮನೆಯಲ್ಲಿ ಇದ್ದವರು ಬೀದಿಯಲ್ಲಿ ಹೇಗೆ ಇರುತ್ತಾರೆ. ಮೋಸ ಮಾಡಿದರು ಸಹ ಪ್ರತಿ ದಿನ, ಪ್ರತಿ ಕ್ಷಣ ಅವರ ಬಗ್ಗೆಯೇ ಪುಟ್ಟಗೌರಿ ಯೋಚಿಸುತ್ತಿದ್ದಾರೆ.


Image Courtesy : Colors Super
This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Top