You are here
Home > ವಾಹಿನಿ ಸುದ್ದಿ > ಚಂದನ್ ಗೆ ಸಪ್ರೈಸ್ ಗಿಫ್ಟ್ ಕೊಟ್ಟ ಬಿಗ್ ಬಾಸ್..!!

ಚಂದನ್ ಗೆ ಸಪ್ರೈಸ್ ಗಿಫ್ಟ್ ಕೊಟ್ಟ ಬಿಗ್ ಬಾಸ್..!!

ಕಾಲಾಯ ತಸ್ಮೆ’ ನಮಃ’ ಅನ್ನೋ ಟಾಸ್ಕ್ ಅನ್ನ ಬಿಗ್ ಬಾಸ್ ಮನೆಯಲ್ಲಿ‌ ನೀಡಲಾಗಿತ್ತು.. ವಾರ ಪೂರ್ತಿ ನಡೆದ ಈ ಟಾಸ್ಕ್ ನಲ್ಲಿ ಮನೆಯವರೆಲ್ಲ ಎರಡು ತಂಡಗಳಾಗಿ ಆಟ ಆಡಿ, ಸೋಲುಗೆಲುವುಗಳ ನಡುವೆ ಟಾಸ್ಕ್ ಅನ್ನ ಯಶಸ್ವಿಯಾಗಿ ಮುಗಿಸಿದ್ದಾರೆ..

ಆದರೆ ಈ ಬಾರಿ ಕೆಲ ಟಾಸ್ಕ್ ಗಳು ನಡೆಯ ಬೇಕಾದ್ರೆ ಮನೆಯಲ್ಲಿ ಒಬ್ಬರನ್ನ ಎಲ್ಲ ಮಿಸ್ ಮಾಡಿಕೊಂಡಿದ್ರು.. ಅದೇ ಮನೆಯ ಅದ್ಭುತವೆಂದೆ ಹೆಸರುವಾಸಿಯಾದ ಕಾಮನ್ ಮ್ಯಾನ್ ದಿವಾಕರ್..

ದಿವಾಕರ್ ಇಲ್ಲದ ಬಿಗ್ ಬಾಸ್ ಮನೆ ಎಲ್ಲ ಸ್ಪರ್ಧಿಗಳಿಗಿಂತ ಚಂದನ್ ಗೆ ಅತೀ ಹೆಚ್ಚು ಬೇಸರದ ಗೂಡಾಗಿತ್ತು.. ತನ್ನ ಸ್ನೇಹಿತ ಮನೆಯಿಂದ ಇಷ್ಟು ಬೇಗಾ ಹೋಗುತ್ತಾನೆ ಅಂತ ಚಂದನ್ ಅಂದುಕೊಂಡಿರಲಿಲ್ಲ.. ಬಟ್ ಬಿಗ್ ಬಾಸ್ ಆಟವೆ ಬೇರೆ ಇತ್ತು.. ಕಳೆದ ವಾರ ಮನೆಯಿಂದ ಹೊರ ಬರುವಂತೆ ದಿವಾಕರ್ ಗೆ ಹೇಳಲಾಗಿತ್ತು.. ಮನೆಯವರಿಗೆ ದಿವಾಕರ್ ಹೊರ ಹೋಗಿದ್ದಾರೆ ಅನ್ನೋದು ಸ್ಪಷ್ಟವಾಗಿತ್ತು..

ಆದರೆ ಈ ನಡುವೆ ಸಮೀರ್ ಹಾಗೆ ಜೈ ಶ್ರೀನಿವಾಸ್ ಅವರ ಬಳಿಕ ತೆರವಾಗಿದ್ದ ಬಿಗ್ ಬಾಸ್ ನ ಸೀಕ್ರೆಟ್ ರೂಂಗೆ ಎಂಟ್ರಿ ಕೊಟ್ಟವರೆ ಈ ದಿವಾಕರ್.. ವಾರ ಪೂರ್ತಿ ಅಲ್ಲೆ ಕಳೆದಿದ್ದಾರೆ.. ಟಾಸ್ಕ್ ನ ಮಧ್ಯದಲ್ಲಿ ದಿವಾಕರ್ ಅವರನ್ನ ತೋರಿಸುತ್ತಿದ್ದರಿಂದ ಇನ್ನೂ ದಿವಾಕರ್ ಮನೆಯಲ್ಲೇ ಇದ್ದಾರೆ ಅನ್ನೋದು ಪ್ರೇಕ್ಷಕರ ಗಮನಕ್ಕೆ ಆಗಾಗ ಬಂದಿದೆ..

ಶುಕ್ರವಾರಕ್ಕೆ‌ ಟಾಸ್ಕ್ ಎಲ್ಲ ಕಂಪ್ಲೀಟ್ ಆಗಿದೆ.. ಇನ್ನೇನಿದ್ರು ಎಲಿಮಿನೆಷನ್ ಬಾಕಿ ಇದೆ.. ಹೀಗಾಗೆ ಸೀಕ್ರೆಟ್ ರೂಂನಲ್ಲಿ ಇರುವ ದಿವಾಕರ್ ಗೆ ಮತ್ತೆ ಬಿಗ್ ಬಾಸ್ ಮನೆ‌ ಸೇರುವ ಅವಕಾಶ ನೀಡಲಾಗಿದೆ.. ಹೌದು ನಿನ್ನೆ ಟಾಸ್ಕ್ ಅಂತ್ಯವಾದ ಬಳಿಕ ಸೀದಾ ದಿವಾಕರ್ ಮನೆಗೆ ಬಂದಿದ್ದಾರೆ.

ಇವರು ಮನೆಗೆ ವಾಪಾಸಾಗಿದ್ದಾರೆ ಅನ್ನೋದು ಯಾವ ಸ್ಪರ್ಧಿಗಳ ಗಮನಕ್ಕೂ ಬಂದಿಲ್ಲ.. ಯಾಕಂದ್ರೆ‌ ಎಲ್ಲ ನಿದ್ದೆಯಲ್ಲಿದ್ದ ಸಂದರ್ಭದಲ್ಲಿ ದಿವಾಕರ್ ಅವರನ್ನ ಒಳಗೆ‌ ಕಳುಹಿಸಲಾಗಿದ್ದು, ಶನಿವಾರದ ಎಪಿಸೋಡ್ ನಲ್ಲಿ‌ ಇದು ಪ್ರಸಾರವಾಗಲಿದೆ..

ಇನ್ನೂ ಇದು ಸ್ವತಃ ಚಂದನ್ ಗೆ ಬಿಗ್ ಸಪ್ರೈಸ್ ಅಲ್ಲದೇ ಮತ್ತೇನು‌ ಅಲ್ಲ.. ದಿವಾಕರ್ ಹೊರಬಂದ ಬಳಿಕ‌ ಚಂದನ್ ಈತನನ್ನ ತುಂಬಾ‌ ಮಿಸ್ ಮಾಡಿಕೊಂಡಿದ್ರು ಹಾಗೆ ಕಣ್ಣೀರು ಹಾಕಿದ್ರು.. ಬಟ್ ಈಗ ತನ್ನ ಸ್ನೇಹಿತ ಮನೆಗೆ ರೀಟರ್ನ್ ಆಗಿರೋದು ಚಂದನ್ ಗೆ ದೊಡ್ಡ ಖುಷಿಕೊಡುವ ವಿಚಾರವಲ್ಲದೆ ಮತ್ತೇನು ಅಲ್ಲ ಅಲ್ವ..?

Courtesy : colors HD

Comments

comments

Similar Articles

Leave a Reply

Top