You are here
Home > ವಾಹಿನಿ ಸುದ್ದಿ > ಬಿಗ್ ಬಾಸ್ ಮನೆಯಲ್ಲಿ ಬೆಟ್ಟಿಂಗ್ ಕಟ್ಟಿದ ಜೆಕೆ ಈ ವಾರ ಮನೆಯಿಂದ ಹೊರಕ್ಕೆ..!!

ಬಿಗ್ ಬಾಸ್ ಮನೆಯಲ್ಲಿ ಬೆಟ್ಟಿಂಗ್ ಕಟ್ಟಿದ ಜೆಕೆ ಈ ವಾರ ಮನೆಯಿಂದ ಹೊರಕ್ಕೆ..!!

ವಾರ ಕಳೆದ ಹಾಗೆ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ಸೃಷ್ಟಿಯಾಗಿದೆ.. ಮನೆಯಲ್ಲಿನ ಸ್ಟ್ರಾಂಗ್ ಆಟಗಾರರೆಲ್ಲ ಪ್ರತಿವಾರ ಆಚೆ ಬರ್ತಿದ್ದಾರೆ.. ಈಗಾಗ್ಲೇ ಫೈನಲ್ ನಲ್ಲಿ ಇರ್ತಾರೆ ಅಂತ ಗುರುತಿಸಿಕೊಂಡಿದ್ದ ಜಗನ್ ಸಿಹಿಕಹಿ ಚಂದ್ರು ಇಬ್ಬರು ಅತೀ ಬೇಗವೆ ಮನೆಗೆ ವಾಪಸ್ ಆಗಿದ್ದಾರೆ..

ಸದ್ಯಕ್ಕೆ‌ ಬಿಗ್ ಬಾಸ್ ಒಳಗೆ ಉಳಿದುಕೊಂಡಿರುವವರ ನಡುವೆ ಯಾರ್ಯಾರು ಮನೆಯಲ್ಲಿ ಇರಲಿದ್ದಾರೆ.. ಯಾರು ಫೈನಲ್ ವರೆಗೂ ತಲುಪಲಿದ್ದಾರೆ ಅನ್ನೋ ಬಗ್ಗೆ ಚರ್ಚೆ ನಡಿತಿದೆ.. ನಿನ್ನೆಯ ಸಂಚಿಕೆಯಲ್ಲೂ ಇಂತಹದ್ದೆ ಚರ್ಚೆಯಾಯ್ತು.. ಕೃಷಿ ಪ್ರಕಾರ ಚಂದನ್, ಜೆಕೆ, ಅನುಪಮಾ, ರಿಯಾಜ್ ಜೊತೆಗೆ ಮತ್ತೊಬ್ಬರು ಟಾಪ್ ಫೈನಲ್ಲಿ ಇರ್ತಾರೆ ಅಂತೆ..

ಈ ಬಗ್ಗೆ ಮಾತಾನಾಡಿದ ಜೆಕೆ ಮುಂದಿನ ವಾರ ಮನೆಯಿಂದ ಹೊರಹೋಗುವುದು ನಾನೆ ಅಂತ ಹೇಳಿದ್ರು.. ಇದು ಮನೆಯಲ್ಲಿ ಇದ್ದವರಿಗೆ ದೊಡ್ಡ ಶಾಕ್ ಆಗಿತ್ತು.. ಯಾಕಂದ್ರೆ ಚಂದನ್ ಬಿಟ್ಟರೆ ಬಿಗ್ ಬಾಸ್ ಗೆಲ್ಲುವ ಅರ್ಹತೆ ಇರುವ ಮತ್ತೊಬ್ಬ ಸ್ಪರ್ಧಿ ಜೆಕೆ ಅಂತ ಈಗಾಗ್ಲೇ ವಿಶ್ಲೇಷಣೆ ಗಳು ಶುರುವಾಗಿದೆ..

ಯಾವಾಗ ಜೆಕೆ ಹೀಗೆ ಹೇಳಿದ್ರೋ ಆಗ ಅಲ್ಲಿ ಸಮೀರ್ ಹಾಗೆ ಜೆಕೆ ನಡುವೆ ಮಾತುಕತೆ ನಡೆಯಿತು.. ಈ ಬಾರಿ ನಾನೆ(ಜೆಕೆ) ಮನೆಯಿಂದ ಹೊರ ಹೋಗುವುದು ಬೇಕಿದ್ರೆ 10ಲಕ್ಷ ಬೆಟ್ ಕಟ್ಟುತ್ತಿನಿ ಅಂದ್ರು.. ಇದಕ್ಕೆ ಸಮೀರ್ ಅಷ್ಟು ಬ್ಯಾಡ 5 ಲಕ್ಷ ಕಟ್ಟೋಣ ಅಂದ್ರು..

12 ವಾರ ಮನೆಯಿಂದ ಜೆಕೆ ಹೊರ ಬಂದ್ರೆ ಸಮೀರ್ ಆಚಾರ್ಯ 5 ಲಕ್ಷವನ್ನ ನೀಡಬೇಕು.. ಅಕಸ್ಮಾತ್ ಜೆಕೆ ಸೇಫ್ ಆದ್ರೆ ಸಮೀರ್ ಆಚಾರ್ಯಗೆ 5ಲಕ್ಷ ಹಣವನ್ನ ನೀಡಬೇಕು.. ಇದಕ್ಕೆ ಮನೆಯವರೆಲ್ಲ ಸಾಕ್ಷಿ ಅಂದ್ರು..

ಇನ್ನೂ ಹಣದಲ್ಲಿ ಯಾವುದೇ ರೀತಿ ಟ್ಯಾಕ್ಸ್ ಅದು ಇದು ಅಂತ ಕಟ್ ಮಾಡೋ ಹಾಗಿಲ್ವಂತೆ ಬರೊಬ್ಬರಿ 5 ಲಕ್ಷ ಪೂರ ಹಾಗೆ ಕೊಡಬೇಕಂತೆ‌… ಕಾದು ನೋಡೋಣ ಹಣ ಕೊಡೊಕೆ ಜೆಕೆನೆ ಹೊರಗೆ ಹೋಗ್ತಾರ.? ಅಥವಾ ಹಣ ಪಡೆಯೋ ಸಮೀರ್ ಆಚೆ ಹೋಗಿ ಬಿಡ್ತಾರ ಅಂತ..

Pic Courtesy :Colors HD

Comments

comments

Similar Articles

Leave a Reply

Top