You are here
Home > ವಾಹಿನಿ ಸುದ್ದಿ > ರಾಮಾಚಾರಿ‌ ಮೇಷ್ಟ್ರು ಮಗನ ನೋವಿನ ಕಥೆ.. ಬದುಕಿನ ಬಂಡಿ ಸಾಗಿಸಲು ಡ್ರೈವರ್‌ ಆದ್ರು

ರಾಮಾಚಾರಿ‌ ಮೇಷ್ಟ್ರು ಮಗನ ನೋವಿನ ಕಥೆ.. ಬದುಕಿನ ಬಂಡಿ ಸಾಗಿಸಲು ಡ್ರೈವರ್‌ ಆದ್ರು

ಹಿರಿಯ ನಟ ಅಶ್ವಥ್ ಅವರನ್ನು‌ ನೋಡಿದ‌ ಕೂಡಲೇ ಮೊದಲು‌ ನೆನಪಿಗೆ ಬರುವುದು ಡಾ.ರಾಜಕುಮಾರ್ ಅವರ ತಂದೆ ಎಂದು. ಬಹುತೇಕ ರಾಜಕುಮಾರ್ ಚಿತ್ರಗಳಲ್ಲಿ ತಂದೆ ಪಾತ್ರವನ್ನು ನಿರ್ವಹಿಸಿರುವ ಅಶ್ವಥ್ ಅವರು ನಿಧನರಾಗಿ ಬಹಳ ವರ್ಷಗಳೇ ಕಳೆದಿದ್ದೆ. ನಿಧನದ ನಂತರ ಅವರ ಮಗ ಶಂಕರ್‌ ಅಶ್ವಥ್ ಚಿತ್ರರಂಗಕ್ಕೆ ಕಾಲಿಟ್ಟರು.‌.

ಶಂಕರ್ ಅಶ್ವಥ್ ಅವರು‌ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಎರಡರಲ್ಲೂ‌ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಈಗ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಏನ್ ಮಾಡ್ತಿದ್ದಾರೆ ಗೊತ್ತಾ..??

ಶಂಕರ್ ಅಶ್ವಥ್ ಅವರು ಈಗ ಉಬರ್ ಕ್ಯಾಬ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೌದು, ಇದು‌ ನಿಜ ಅಶ್ವಥ್ ಪುತ್ರ ಅನ್ನೋ ಯಾವುದೇ ಅಹಂ ಇಲ್ಲದೆ ಸಾಮಾನ್ಯನಂತೆ ಚಾಲಕನ ಕೆಲಸ‌ ಮಾಡುತ್ತಿದ್ದಾರೆ.

ಕಾರಣವೇನು:

ಚಿತ್ರಗಳಲ್ಲಿ ಅಥವಾ ಧಾರಾವಾಹಿಗಳಲ್ಲಿ ಹೆಚ್ಚು ಅವಕಾಶ ಶಂಕರ್ ಅವರಿಗೆ ಸಿಗಲಿಲ್ಲ. ಬಹಳ ದಿನ ಮನೆಯಲ್ಲಿ ಕುಳಿತ್ತುಕೊಳ್ಳಬೇಕಾಯಿತು. ಅರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಅನಿವಾರ್ಯವಾಗಿ ಕ್ಯಾಬ್ ಡ್ರೈವರ್ ಕೆಲಸ‌ ಮಾಡುತ್ತಿದ್ದಾರೆ. ಹಾಗೆಂದು ಅವರು ಚಿತ್ರರಂಗವನ್ನು ಎಂದು ದೂಷಿಸುತ್ತಿಲ್ಲ.

ತಂದೆ ಅಶ್ವಥ್ ಅವರು ಸ್ವಾಭಿಮಾನದಿಂದ ಬದುಕಬೇಕು‌, ಯಾರ ಮುಂದೆಯೂ ಅವಕಾಶಕ್ಕಾಗಿ ಅಥವಾ ಹಣಕ್ಕಾಗಿ ಕೈ ಚಾಚಬಾರದೆಂದು ಹೇಳಿಕೊಟ್ಟಿದ್ದಾರೆ. ಹೀಗಾಗಿ ಉಬರ್ ಕ್ಯಾಬ್ ಓಡಿಸಲು ನಿರ್ಧರಿಸಿ, ಅಪ್ಪನ ಫೋಟೋಗೆ ಕೈಮುಗಿದು ಶ್ರದ್ಧೆ ಹಾಗೂ ನಿಷ್ಠೆಯಿಂದ ಪ್ರತಿ ದಿನ ಕೆಲಸ ಪ್ರಾರಂಭಿಸುತ್ತಾರಂತೆ ಶಂಕರ್ ಅಶ್ವಥ್.

ಅಲ್ಲದೆ ಜನವರಿ 19ಕ್ಕೆ ಕೆ.ಎಸ್.ಅಶ್ವಥ್ ಅವರ 8ನೇ ವರ್ಷದ ಶ್ರಾದ್ಧವಿದೆ. ಅಪ್ಪನ ಕಾರ್ಯಕ್ಕೆ ಹಣವಿಲ್ಲ, ಅಲ್ಲದೆ ಪದ್ಧತಿ ಪ್ರಕಾರ ಈ ಕಾರ್ಯ ಮಾಡುವಾಗ ಸಾಲ ಮಾಡಬಾರದು ಅಥವಾ ಯಾವುದನ್ನೂ ಮಾರಟ ಮಾಡಿ ಕಾರ್ಯ ಮಾಡುವಂತಿಲ್ಲ. ತಾವು ದುಡಿದ‌ ಹಣದಿಂದ ಕಾರ್ಯ ಮಾಡಬೇಕು.

ಹಣವಿಲ್ಲದ ಕಾರಣ ಅಪ್ಪನ ಶ್ರಾದ್ಧ ಖರ್ಚು ಹೊಂದಿಸಲು ಧೈರ್ಯ ಮಾಡಿ ಕ್ಯಾಬ್ ಓಡಿಸಲು ಮುಂದಾಗಿದ್ದಾರೆ. ಉಬರ್ ಕ್ಯಾಬ್ ಸೇವೆಯಿಂದ ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ಸಮಸ್ಯೆ ನೀಗಿದೆ. ಡ್ರೈವರ್ ಕೆಲಸದ ಬಗ್ಗೆ ನನ್ನಗೆ ಹೆಮ್ಮೆ‌ ಇದೆ. ಯಾವ ಕೆಲಸವನ್ನು ತುಚ್ಛವಾಗಿ‌ ಕಾಣಬೇಡಿ‌ ಎಂದಿದ್ದಾರೆ ಶಂಕರ್ ಅಶ್ವಥ್..

Comments

comments

Similar Articles

Leave a Reply

Top