You are here
Home > ವಾಹಿನಿ ಸುದ್ದಿ > ಸಂಯುಕ್ತ ನಡೆಗೆ ಮಾತಲ್ಲೆ ಮಂಗಳಾರತಿ ಎತ್ತಿದ ನವರಸ ನಾಯಕ.. ಆಚಾರ್ಯರ ಬಗ್ಗೆಯೂ ಹಿಂಗದ್ರು..

ಸಂಯುಕ್ತ ನಡೆಗೆ ಮಾತಲ್ಲೆ ಮಂಗಳಾರತಿ ಎತ್ತಿದ ನವರಸ ನಾಯಕ.. ಆಚಾರ್ಯರ ಬಗ್ಗೆಯೂ ಹಿಂಗದ್ರು..

ಸಂಯುಕ್ತ ಮನೆಯಲ್ಲಿ ಇದಷ್ಟು ದಿನ ಯಾರಿಗೂ ಅಷ್ಟಾಗಿ ಇಷ್ಟವಾಗಿರಲಿಲ್ಲ.. ಎಲ್ಲದಕ್ಕೂ ತನ್ನದೇ ಸರಿ ಅಂತ ನಡೆದುಕೊಳ್ಳುತ್ತಿದ ರೀತಿಗೆ, ಎಲ್ಲ ವಿಷ್ಯದಲ್ಲೂ ಮೂಗಿ ತುರಿಸುತ್ತಿದ್ದ ಪರಿಗೆ ಪ್ರೇಕ್ಷಕರು ಕೆಂಡಕಾರಿದಲ್ಲದೆ ಮನೆಯವರು ಅಸಮಾಧಾನಗೊಂಡಿದ್ರು..ಮನೆಗೆ ಸೇರಿದ ಮೊದಲ ದಿನವೇ ಮನೆಯವರ ಪಿತ್ತ ನೆತ್ತಿಗೇರಿಸಿದ ಕಿರಿಕ್ ಹುಡುಗಿಯರು..

ಆದರೆ ನಿನ್ನೆಯ ಸಂಚಿಕೆಯಲ್ಲಿ ಈಕೆ‌ ಮಾಡಿದ ದೊಡ್ಡ ಯಡವಟ್ಟಿಗೆ ಮನೆಯಿಂದ ಆಚೆ ಬರಬೇಕಾಯಿತು.. ಈಕೆ ತಾಳ್ಮೆ ಕಳೆದುಕೊಂಡು ಆಚಾರ್ಯರ ಮೇಲೆ ಹಲ್ಲೆ ಮಾಡೇಬಿಟ್ರು.. ಸಮೀರ್ ಅವರು ಅದು ನಾನಲ್ಲ ಅಂದ್ರು ಕೇಳದೆ ಕ್ಷಣಾರ್ಧದಲ್ಲಿ ಕೈ ಮಾಡಿದ್ದು ಯಾರಿಗೂ ಇಷ್ಟವಾಗಲಿಲ್ಲ..ತನ್ನ ಪತಿಯ ಮೇಲೆ ಹಲ್ಲೆ ಮಾಡಿದ ಸಂಯುಕ್ತಗೆ ಹೀಗೆ ಕೇಳ್ತಾರಂತೆ ಆಚಾರ್ಯರ ಪತ್ನಿ ಶ್ರಾವಣಿ.?

ಇದೇ ಸಂದರ್ಭದಲ್ಲಿ ಸಮೀರ್ ಆಚಾರ್ಯರು ತಾಳ್ಮೆಯನ್ನ ಕಳೆದುಕೊಳ್ಳದೆ ನಡೆದುಕೊಂಡ್ರು.. ಇದು ಎಲ್ಲರಿಗೂ ಇಷ್ಟವಾಯಿತು.. ಆದರೆ ಸಂಯುಕ್ತ ನಡೆಯ ಬಗ್ಗೆ ವಿರೋಧ ಇದ್ದೆ ಇದೆ.. ಈಗ ನವರಸ ನಾಯಕ ಜಗ್ಗೇಶ್ ಅವರು ಈ ವಿಚಾರವಾಗಿ ಟ್ವಿಟ್ ಮಾಡಿದ್ದಾರೆ..Pic Courtesy: Colors Super

ನವರಸ ನಾಯಕ ಜಗ್ಗೇಶ್ ರವರ  ಟ್ವಿಟ್ ಗಳು ಇಲ್ಲಿವೆ ನೋಡಿ.

This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Leave a Reply

Top