You are here
Home > ವಾಹಿನಿ ಸುದ್ದಿ > ಸಮೀರ್ ಆಚಾರ್ಯ ಮೇಲೆ ಹಲ್ಲೆ ಮಾಡಿದ ಸಂಯುಕ್ತ.. ಮನೆಯಿಂದ ಔಟ್‌‌..!!

ಸಮೀರ್ ಆಚಾರ್ಯ ಮೇಲೆ ಹಲ್ಲೆ ಮಾಡಿದ ಸಂಯುಕ್ತ.. ಮನೆಯಿಂದ ಔಟ್‌‌..!!

ಇಂದಿನ ಸಂಚಿಕೆಯಲ್ಲಿ ಯಾರು ನಿರೀಕ್ಷೆ ಮಾಡದ ಘಟನೆಯೊಂದು‌ ಬಿಗ್ ಬಾಸ್ ಮನೆಯಲ್ಲಿ ನಡೆದೆ ಹೋಯ್ತು.. ಮನೆಗೆ ಗೆಸ್ಟ್ ಆಗಿ ಹೋಗಿದ್ದ ಸಂಯುಕ್ತ ಸಮೀರ್ ಆಚಾರ್ಯರ ಮೇಲೆ ಹಲ್ಲೆ ಮಾಡಿದ್ದಾರೆ.. ಈ ಮೂಲಕ ಬಿಗ್ ಬಾಸ್ ಮನೆಯಲ್ಲಿ ಇಂದಿನ ಸಂಚಿಕೆ ಕಪ್ಪು ಚೆಕ್ಕೆಯಾಗೆ ಉಳಿಯುವಂತೆ ಮಾಡಿದ್ದಾರೆನಡೆದದ್ದೇನು..?
ಇಂದಿನ ಸಂಚಿಕೆಯಲ್ಲಿ ಎಂದಿನಂತೆ ಟಾಸ್ಕ್ ನೀಡಲಾಗಿತ್ತು.. ಚಂದನ್ ಬಳಿ ಇದ್ದ ಕತ್ತರಿಯನ್ನ ಕಿತ್ತುಕೊಳ್ಳೊಕೆ ಸಂಯುಕ್ತ ಮುಂದಾಗಿದ್ರು.. ಈ ಸಂದರ್ಭದಲ್ಲಿ ಸಂಯುಕ್ತ ಚಂದನ್ ಅವರನ್ನ ಕೆಳಗೆ ಹಾಕಿ ಮೇಲೆ ಕುಳಿತಿದ್ರು..ಮನೆಗೆ ಸೇರಿದ ಮೊದಲ ದಿನವೇ ಮನೆಯವರ ಪಿತ್ತ ನೆತ್ತಿಗೇರಿಸಿದ ಕಿರಿಕ್ ಹುಡುಗಿಯರು..

ಇದೇ ಸಂದರ್ಭದಲ್ಲಿ ಚಂದನ್ ಬಳಿ ಇದ್ದ ಕತ್ತರಿಯನ್ನ ಕಾಪಾಡಲು ಜೆಕೆ ಹಾಗೆ ಸಮೀರ್ ಮುಂದೆ ಬಂದ್ರು.. ಈ ಸಮಯದಲ್ಲಿ ಚಂದನ್ ಮೇಲೆ ಕುಳಿತಿದ್ದ ಸಂಯುಕ್ತಳನ್ನ ಹೊರೆಗೆಳೆಯಲು ಮುಂದಾದ್ರು.. ಈ ಸಂದರ್ಭದಲ್ಲಿ ಸಮೀರ್ ಆಚಾರ್ಯ ಸಂಯುಕ್ತ ಅವರನ್ನ ಮುಟ್ಟಿದ ರೀತಿ ಸರಿ ಇಲ್ಲ ಅಂತ ಕೋಪಗೊಂಡ ಈಕೆ ನೇರಾನೇರ ಹಲ್ಲೆಗೆ ಮುಂದಾದ್ರು..

ಸಮೀರ್ ಆಚಾರ್ಯ ತನ್ನ ಎದೆಯನ್ನ ಮುಟ್ಟಿದ್ರು ಅಂತ ಆಚಾರ್ಯರ ಮೇಲೆ ಕೈ ಮಾಡಿದ್ರು.. ಇದಕ್ಕೆ ಆಚಾರ್ಯ ವಿರೋಧ ವ್ಯಕ್ತ ಪಡೆಸಿ ತಾನು ಹಾಗೆ ನಡೆದುಕೊಂಡಿಲ್ಲ ಅಂತ ಹೇಳಿ, ತನ್ನ ಮೇಲೆ ಹಲ್ಲೆ ಮಾಡಿದಕ್ಕೆ ಬಿಗ್ ಬಾಸ್ ಈಗಲೇ ಉತ್ತರ ನೀಡಬೇಕು.. ಇಲ್ಲವಾದರೆ ಇಲ್ಲಿ ನಡೆಯುವುದೆ ಬೇರೆಯಾಗುತ್ತೆ ಅಂದ್ರು‌..

ಆನಂತರ ಇಬ್ಬರನ್ನ ಮಾತಿಗೆ ಕರೆದ ಬಿಗ್ ಬಾಸ್, ಇಬ್ಬರಿಂದಲೂ ಹೇಳಿಕೆ ಪಡೆದುಕೊಂಡ್ರು.. ನಂತರ ಸಂಯುಕ್ತರನ್ನ ಮನೆಯಿಂದ ಈ ಕೂಡಲೆ ಹೊರ ಬರುವಂತೆ ಆಜ್ಞೆ ಮಾಡಿದ್ರು.. ಸದ್ಯಕ್ಕೆ ಆಟವನ್ನ ಆಟವಾಗಿ ಆಡದೇ ಸಂಯುಕ್ತ ನಡೆದುಕೊಂಡ ರೀತಿಯೇ ಆಕೆ ಮನೆಯಿಂದ ಹೊರ ಬರಲು ಕಾರಣವಾಯ್ತು..ಆಚಾರ್ಯರ ಮೇಲೆ ಹಲ್ಲೆ ಮಾಡಿದಕ್ಕೆ ಮಾತನಾಡಿದ ದಿವಾಕರ್ ಸಮೀರ್ ಆಚಾರ್ಯ ಮೇಲೆ ಹೀಗೆ ಆರೋಪ ಮಾಡಿದ ಸಂಯುಕ್ತ ಮುಂದೆ ನಮ್ಮಮೇಲು ಹೀಗೆ ಆರೋಪ ಮಾಡ ಬಹುದು ಅಂತ ಹೇಳಿದ್ರು.. ಒಟ್ಟಿನಲ್ಲಿ ಇಂದಿನ ಸಂಚಿಕೆಯಲ್ಲಿ ಯಾರು ಊಹಿಸಿರದ ಘಟನೆಯೊಂದು ನಡೆದೆ ಹೋಯ್ತು..

Courtesy: Colors Kannada HD
This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Leave a Reply

Top