You are here
Home > ವಾಹಿನಿ ಸುದ್ದಿ > ಮನೆಯೊಳಗೆ ಈ ಕೆಲಸ ಮಾಡಬಾರದಿತ್ತು ಅಂತ ಕಿಚ್ಚ ಜಗನ್ ಗೆ ಹೇಳಿದ್ದೇಕೆ.. ಜಗನ್ ಮಾಡಿದ ಆ ತಪ್ಪೇನು..?

ಮನೆಯೊಳಗೆ ಈ ಕೆಲಸ ಮಾಡಬಾರದಿತ್ತು ಅಂತ ಕಿಚ್ಚ ಜಗನ್ ಗೆ ಹೇಳಿದ್ದೇಕೆ.. ಜಗನ್ ಮಾಡಿದ ಆ ತಪ್ಪೇನು..?

ಕಿಚ್ಚ ಸುದೀಪ್ ಪ್ರತಿವಾರ ಕೊನೆಯಲ್ಲಿ  ಬಿಗ್ ಬಾಸ್ ನ ಪಂಚಾಯತಿಗೆ ಹಾಜರಾಗ್ತಾರೆ.. ಅದನ್ನ ಸ್ಪರ್ಧಿಗಳು ಹೇಗೆ ಕಾಯ್ತರೋ ಹಾಗೆ ವೀಕ್ಷಕರು ಕಾಯುವುದುಂಟು.. ಯಾಕಂದ್ರೆ ಕಿಚ್ಚ ಇಲ್ಲಿ ವಾರದ ತಪ್ಪು ಸರಿಯ ಬಗ್ಗೆ ಸ್ಪರ್ಧಿಗಳಿಗೆ ತನ್ನದೇ ಶೈಲಿಯಲ್ಲಿ ಹೇಳಿ ಅರ್ಥ ಮಾಡಿಸುತ್ತಾರೆ..ಬಿಗ್ ಬಾಸ್ ತೋರಿಸಿದ ಸಿನಿಮಾ ನೋಡಿ ಮೆಂಟಲ್ ಆದ ಜಗನ್.. ಅಷ್ಟಕ್ಕೂ ಸಿನಿಮಾದಲ್ಲಿ ಅಂತಹದು ಏನಿತ್ತು..?

ಇಂದು ಮನೆಯಿಂದ ಹೊರಬಂದ ಜಗನ್ ಜೊತೆಗೆ ಸುದೀಪ್ ಮಾತಾನಾಡಿದ್ರು.. ಇದೇ ಸಂದರ್ಭದಲ್ಲಿ ಜಗನ್ ಮನೆಯಲ್ಲಿದ್ದಾಗ ಮಾಡಿಕೊಂಡ ಎಡವಟ್ಟಿನ ಬಗ್ಗೆ ಇಂಚಿಂಚು ಬಿಡಿಸಿ ಹೇಳಿದ್ರೆ.. ಕೋಪಿಷ್ಟನಾಗಿದ್ದ ಜಗನ್ ಗೆ ತನ್ನ ಕೋಪದ ಅತಿರೇಕದ ಅರಿವನ್ನು ಮಾಡಿಸಿದ್ರು.. 

ಇದೇ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅನುಪಮಾ ಹಾಗೆ ಆಶಿಕಾ‌ ವಿಷ್ಯವನ್ನ ಪ್ರಸ್ತಾಪ ಮಾಡಿದ್ರು.. ಒಂದು ಕಡೆ ಕೋಪ ಮತ್ತೊಂದು ಕಡೆ ಆಶಿಕಾ ಇನ್ನೊಂದು ಕಡೆ ಅನುಪಮಾ ಈ ಎಲ್ಲವನ್ನೂ ನಿಭಾಯಿಸುವಲ್ಲಿ ವಿಫಲವಾದ್ರ ಅಂತ ಕೇಳಿದ್ರು.. ಜೊತೆಗೆ ಈ ವಿಚಾರಕ್ಕೆ ನೀವೂ ಹೆಚ್ಚಾಗಿ ತಲೆ ಕೆಡಿಸಿಕೊಂಡಿದ್ರಿ ಅಂತ ಅನ್ನಿಸುತ್ತೆ.. ಹೀಗಾಗೆ ನೀವೂ ಇವರನ್ನು ಸೇವ್ ಮಾಡುವುದರಲ್ಲಿ ನಿಮ್ಮ ಆಟವನ್ನ ಮರೆತು ಬಿಟ್ರಾ ಅಂತ ಪ್ರಶ್ನೆ ಮಾಡಿದ್ರು..ಇರೋ‌ ಬರೋ ಕೋಪವನೆಲ್ಲ ಜಗನ್ ಯಾರ ಮೇಲೆ ತೀರಿಸಿ ಕೊಳ್ಳುತ್ತಾರಂತೆ ಗೊತ್ತಾ..?

ಅದರಲ್ಲೂ ಜಗನ್ ಒಂದು ವಿಚಾರವನ್ನ ಮನವರಿಕೆ ಮಾಡಿಕೊಟ್ರು ಕಿಚ್ಚ. ಅದೇ ಆಶಿತಾ ಹಾಗೆ ಅನುಪಮಾ ಜೊತೆಗೆ ಒಡನಾಟದ ಬಗ್ಗೆ.. ಇದನ್ನ ನೀವೂ ಮನೆಯಿಂದ ಹೊರ ಬಂದ ಮೇಲೆ ಇಟ್ಟುಕೊಳ್ಳಬೇಕಿತ್ತು.. ಅದನ್ನ ಬಿಟ್ಟು ಮನೆಯಲ್ಲಿ ಹೀಗೆ ಇದದ್ದು ವೀಕ್ಷಕರಿಗೆ ಇಷ್ಟವಾಗಲಿಲ್ಲ ಅನ್ನಿಸುತ್ತೆ ಅಂದ್ರು.. ಇದಕ್ಕೆ ಜಗನ್ ಕೂಡ ಸಮ್ಮತಿ ವ್ಯಕ್ತ ಪಡೆಸಿದ್ರು..Pic Courtesy: Colors Super
This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Leave a Reply

Top