You are here
Home > ವಾಹಿನಿ ಸುದ್ದಿ > ಜಗನ್ ಸೀಕ್ರೆಟ್ ರೂಂಗೆ.. ಇದು ಕಿಚ್ಚ ಬಿಚ್ಚಿಟ್ಟ ಸೀಕ್ರೆಟ್ ರೂಂ ರಹಸ್ಯ..!!

ಜಗನ್ ಸೀಕ್ರೆಟ್ ರೂಂಗೆ.. ಇದು ಕಿಚ್ಚ ಬಿಚ್ಚಿಟ್ಟ ಸೀಕ್ರೆಟ್ ರೂಂ ರಹಸ್ಯ..!!

ಯಾರು ಅಂದುಕೊಂಡಿರಲಿಲ್ಲ..‌ ಯಾರು ನಿರೀಕ್ಷೆಯನ್ನ ಕೂಡ ಮಾಡಿರಲಿಲ್ಲ.. ಬಿಗ್ ಬಾಸ್ ಮನೆಯಿಂದ ಜಗನ್ ಹೊರ ಬರ್ತಾರೆ ಅಂತ.. ಆತನ ಕೋಪವನ್ನ ಪಕ್ಕಕ್ಕೆ ಇಟ್ಟು ನೋಡಿದರೆ ಬಿಗ್ ಬಾಸ್ ಮನೆಯಲ್ಲಿರೋ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂದ್ರೆ ಅದು ಜಗನ್..ಮನೆಯವರೆಲ್ಲ ಸಮೀರ್ ಅವರನ್ನ ಆಚೆ ಕಳಿಸೋಕೆ ಹೇಳ್ತಾರೆ.. ಆದರೆ ಸಮೀರ್ ಅವರು ಉಳಿದುಕೊಳ್ತಾರೆ.. ಇನ್ನೂ ಸಮೀರ್ ಹಾಗೆ ಜಗನ್ ಇಬ್ಬರಲ್ಲಿ ಒಬ್ಬರು ಹೊರ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾದಾಗ ಪ್ರೇಕ್ಷಕರು ಸಮೀರ್ ಅಂದುಕೊಂಡಿದ್ದುಂಟು ಆದ್ರೆ ಸಮೀರ್ ಉಳಿದುಕೊಂಡು ಬಿಟ್ರು..

ಎಲ್ಲ‌ ಅಂದುಕೊಂಡಿದ್ದನ್ನ, ಯಾರು ನಿರೀಕ್ಷೆ ಮಾಡದನ್ನ ಮಾಡೋದೆ‌ ಬಿಗ್ ಬಾಸ್ ಆಟ.. ಹೀಗಾಗೆ ಜಗನ್ ಮನೆಯಿಂದ ಹೊರ ಬಂದಿದ್ದಾರೆ.. ಹಾಗಿದ್ರೆ ಜಗನ್ ಬಿಗ್ ಬಾಸ್ ಜರ್ನಿ ಮುಗಿತ.? ಖಂಡಿತ ಇಲ್ಲ ಅನ್ನೋದಕ್ಕೆ ಇಲ್ಲಿದೆ ನೋಡಿ ಪ್ರೂಫ್..ಮೊದಲೇ ಹೇಳಿದ ಹಾಗೆ ಮನೆಯಲ್ಲಿರೋ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂದ್ರೆ ಅದು ಜಗನ್.. ಕೋಪ‌ ಮಾಡಿಕೊಂಡು, ಜಗಳವಾಡಿ, ಅಲ್ಲೊಂದು ಲವ್ ಸ್ಟೋರಿ ಕ್ರಿಯೇಟ್ ಮಾಡಿಕೊಂಡು, ಅಳುತ್ತ ನಗುತ್ತ ಇದ್ದ ಆಟಗಾರ ಈತ..ಮನೆಯಲ್ಲಿರೋ ಕೆಲ‌ ಸ್ಪರ್ಧಿಗಳಿಗೆ ಹೋಲಿಸಿಕೊಂಡ್ರೆ ಜಗನ್ ಅವರಿಗಿಂತ ಉತ್ತಮವಾಗೆ ಆಟ ಆಡಿದ್ದಾರೆ.. ಹೀಗಿದ್ದರೂ ಜಗನ್ ಮನೆಯಿಂದ ಔಟ್ ಅದ್ರು.. ಈ ಬಗ್ಗೆ ಸ್ವತಃ ಸುದೀಪ್ ಬೇಸರಗೊಂಡು, ಮೊದಲ ಬಾರಿಗೆ ಸ್ಟೆಜ್ ಮೇಲೆ ತಮ್ಮ ವಯಕ್ತಿಕ ಅಭಿಪ್ರಾಯವನ್ನ ಹಂಚಿಕೊಂಡ್ರು.. ಅದೇ ಮನೆಯಲ್ಲಿ ಇನ್ನೂ ಕೆಲ ವಾರ ಇರಬೇಕಾದ ಸ್ಪರ್ಧಿಗಳಲ್ಲಿ ನೀವೂ ಒಬ್ಬರು ಅಂದ್ರು..

ಸುದೀಪ್ ಅವರ ಈ ಮಾತಿನಲ್ಲೇ ಇದೆ ಜಗನ್ ಬಿಗ್ ಬಾಸ್ ಮನೆಯಲ್ಲಿ ಇನ್ನೂ ಇರಬೇಕಾದ ಸ್ಪರ್ಧಿ ಅಂತ.. ಹೀಗಾಗೆ ಜಗನ್ ಅವರಿಗೆ ಮನೆಹೊರಗೆ ಇರಲು, ಸೀಕ್ರೆಟ್ ರೂಂ ರೆಡಿಯಾಗಿದೆ.. ಮನೆಯಿಂದ ಹೊರ ಬಂದ ಜಗನ್ ಸೀದಾ ಸೀಕ್ರೆಟ್ ರೂಮ್ ಸೇರಿಕೊಂಡಿದ್ದಾರೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ‌ ಹರಿದಾಡಿದೆ..

ಇಲ್ಲಿ ಸುದೀಪ್ ಅವರ ಮತ್ತೊಂದು ಮಾತನ್ನ ನಿಮಗೆ ನೆನಪಿಸಬೇಕು.. ಜಗನ್ ಅವರನ್ನ ಉದ್ದೇಶಿಸಿ ಮಾತನಾಡುತ್ತಾ ನಾನು‌ ನಿಮಗೆ ತುಂಬಾ ಸಾರಿ ಹೇಳಿದ್ದೆ, ನೀವು ನಿಮ್ಮ ಆಟ ಆಡಿ ಬೇರೆಯವರಿಗಾಗಿ ಬಿಟ್ಟುಕೊಡಬೇಡಿ ಅಂತ.. ಈಗ ನೋಡಿ ಎಲ್ಲಿ ಬಂದು ನಿಂತಿದ್ದೀರ ಅಂದ್ರು.. ಅಂದ್ರೆ ಜಗನ್ ತಾನು ಆಟ ಆಡುತ್ತಿರುವ ರೀತಿಯನ್ನ ಅರ್ಥ ಮಾಡಿಸುವ ಪ್ರಯತ್ನ ಕಿಚ್ಚ ಅವರದಾಗಿತ್ತು..

ಹೀಗಾಗೆ ಜಗನ್ ಸೀಕ್ರೆಟ್ ರೂಮ್ ನಲ್ಲಿ ಕೂತ ತನ್ನ ಜೊತೆಗೆ ಇದ್ದ ಸ್ಪರ್ಧಿಗಳ ಬಂಡವಾಳ ಅರಿತುಕೊಳ್ಳಲು ಅವಕಾಶ ಮಾಡಿಕೊಡಬೇಕಾದ ಸಮಯ ಬಂದಿದೆ.. ಯಾರ್ಯಾರು ಹೇಗೆ ಇರ್ತಾರೆ ಅನ್ನೋದನ್ನ ಆತನಿಗೆ ತಿಳಿಸಿ ಹೇಳಬೇಕಿದೆ.. ಹೀಗಾಗೆ ಸೀಕ್ರೇಟ್ ರೂಮ್ ಗೆ‌ ಜಗನ್ ಅವರನ್ನ ಕಳಿಸಲಾಗಿದೆಯಂತೆ…

ಮನೆಯಲ್ಲಿರೋವಾಗಲೇ ರೊಚ್ಚಿಗೇಳುವ ಜಗನ್ 24 ಗಂಟೆಗಳ ಕಾಲ‌ ಎಲ್ಲ‌ ಸ್ಪರ್ಧಿಗಳ ಚಲನವಲಗಳನ್ನ ಗಮನಿಸಿ ಮತ್ತೆ ಬಿಗ್ ಬಾಸ್ ಮನೆಗೆ ಹೋದ್ರೆ ಇನ್ಯಾವ ಪರಿ ಆಟ ಆಡಬೇಡ ಅಲ್ವ.. ಹೀಗಾಗೆ ಜಗನ್ ಅವರನ್ನ‌ ಸೀಕ್ರೆಟ್ ರೂಮ್ ಗೆ ಕಳುಹಿಸಲಾಗಿದೆಯಂತೆ..

ಮತ್ತೊಂದು ಕಡೆ ಸಂಯುಕ್ತ ಮನೆಯಿಂದ ಹೊರ ಬರುವ ನಿರೀಕ್ಷೆಗಳಿದ್ದು, ಈಕೆಯ ಬದಲಿಗೆ ಮತ್ತೆ ಜಗನ್ ಒಳ ಹೋಗ್ತಾರೆ ಅಂತ ಹೇಳಲಾಗಿದೆ.. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಮಾತ್ರ ಗೊತ್ತಿಲ್ಲ..

ಉಳಿದಂತೆ ಈ ವಾರ ಜಗನ್ ಸೀಕ್ರೆಟ್ ರೂಮ್ ಸೇರಿದ್ರೆ ಮುಂದಿನ ವಾರವೇ ಮನಗೆ ವಾಪಸ್ ಹೋಗ್ತಾರೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ.. ಯಾಕಂದ್ರೆ ಕಳೆದ ಸೀಸನ್ ನಲ್ಲಿ ಮಾಳವಿಕ ಹಾಗೆ ಪ್ರಥಮ್ ಇಬ್ಬರು ಜೊತೆಯಾಗೆ ಸೀಕ್ರೆಟ್ ರೂಮ್ ನಲ್ಲಿದ್ರು..

ಸದ್ಯಕ್ಕೆ ಜಗನ್ ಸೀಕ್ರೆಟ್ ರೂಮ್ ಸೇರಿದ್ದೆ ಆದ್ರೆ, ಈತನೊಂದಿಗೆ ಎಲಿಮಿನೆಟ್ ಆಗುವ ಮತ್ತೊಬ್ಬ ಸ್ಪರ್ಧಿ ಕೂಡ ಇದೇ ಸೀಕ್ರೆಟ್ ರೂಮ್ ಸೇರಿಕೊಳ್ಳಲ್ಲಿದ್ದಾರೆ.. ಒಟ್ಟಿನಲ್ಲಿ ಜಗನ್ ಇಷ್ಟು ಬೇಗಾ ಸೋಲೊಪ್ಪಿಕೊಂಡು ಹೊರ ಬರುವ ಸ್ಪರ್ಧಿ ಅಲ್ಲ ಅನ್ನೋದಂತು ನಿಜ.. ಕಾದು ನೋಡೋಣ ಬಿಗ್ ಬಾಸ್ ಆಟದ ವೈಖರಿ ಬಲ್ಲವರ್ಯಾರು..

Pic Courtesy: Colors Kannada HD & Colors Super

Comments

comments

Similar Articles

Leave a Reply

Top