ವಿಷ್ಣುವರ್ಧನ್ ಅವರ ಪುತ್ರಿ ಸಿನಿಮಾ ರಂಗದಲ್ಲಿ ಮಾಡಿರೋ ಸಾಧನೆ ನೋಡಿದ್ರೆ ನಿಮಗೆ ಅಚ್ಚರಿಯಾಗುತ್ತೆ..?

ವಿಷ್ಣುವರ್ಧನ್ ಅವರ ಪುತ್ರಿ ಸಿನಿಮಾ ರಂಗದಲ್ಲಿ ಮಾಡಿರುವ ಸಾಧನೆಗೆ ನೀವು ಬೇಷ್ ಅನ್ನಲೇಬೇಕು..!

ಡಾ.ವಿಷ್ಣುವರ್ಧನ್.. ಕೋಟಿ ಕೋಟಿ ಹೃದಯಗಳ ಆರಾಧ್ಯ ದೈವ.. ಸಿಂಹದ ಹೆಜ್ಜೆ ಗುರುತು ಅದರ ಘರ್ಜನೆ ಪ್ರತಿ ವಿಷ್ಣುದಾದ ಹೃದಯದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ.. ಯಾಕಂದ್ರೆ ವಿಷ್ಣುವರ್ಧನ್ ಅವರ ವ್ಯಕ್ತಿತ್ವಕ್ಕೆ ಆ ಘನತೆ ಆ ಶಕ್ತಿ ಇದೆ..ವಿಷ್ಣುದಾದ ನಮ್ಮನ್ನ ಅಗಲಿ 8 ವರ್ಷವೇ ಕಳೆಯುತ್ತ ಬಂದಿದೆ.. ಆದರೆ ಅವರ ಚಿತ್ರಗಳು, ಅವರು ಮಾಡಿದ ಪಾತ್ರಗಳು, ಈ ಜಯಸಿಂಹನನ್ನ ನಮ್ಮ ಮನದಲ್ಲಿ ಇಂದಿಗೂ ಹಾಗೆ ಉಳಿಸಿವೆ.. ಇನ್ನೂ ನಿಮಗೆ ಇಲ್ಲಿ ವಿಷ್ಣುವರ್ಧನ್ ಅವರ ಪುತ್ರಿ ನಟ ಅನಿರುದ್ದ್ ಅವರ ಧರ್ಮ ಪತ್ನಿ ಕೀರ್ತಿ ವಿಷ್ಣುವರ್ದನ್ ಅವರ ಬಗ್ಗೆ ಹೇಳಬೇಕಿದೆ‌.. ಯಾಕಂದ್ರೆ ಈ ಸಾಹಸ ಸಿಂಹ ತೆರೆ ಮೇಲೆ ಅಷ್ಟು ಸುಂದರವಾಗಿ ಕಾಣಲು ಕೀರ್ತಿ ಅವರ ಕೈಚಳಕ ಹೆಚ್ಚಿದೆ ಅಂದ್ರೆ ನೀವೂ ನಂಬಲೇಬೇಕು..

ಹೌದು.. ಕೀರ್ತಿ ವಿಷ್ಣುವರ್ಧನ್ ಅವರು ಹೇಳಿಕೇಳಿ ಕಾಸ್ಟ್ಯೂಮ್ ಡಿಸೈನರ್.. ಈ ಬಗ್ಗೆ ಹೆಚ್ಚಿಗೆ ನಿಮಗೆ ತಿಳಿಯದೆ ಇರಬಹುದು.. ಆದರೆ ಕೀರ್ತಿ ಅವರಿಗೆ ವಸ್ತ್ರ ವಿನ್ಯಾಸ ಮಾಡೋದ್ರಲ್ಲಿ ಎಲ್ಲಿಲ್ಲದ ಆಸಕ್ತಿ.. ಹೀಗಾಗೆ ಮೋಜುಗಾರ ಸೊಗಸುಗಾರ ಸಿನಿಮಾದಿಂದ ಹಿಡಿದ ಆಪ್ತರಕ್ಷಕ ಚಿತ್ರದ ವರೆಗೆ 75 ಸಿನಿಮಾಗಳಿಗೆ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ.. ಅದರಲ್ಲೂ ಸೂರಪ್ಪ ಯಜಮಾನ, ಕೋಟಿಗೊಬ್ಬ ಚಿತ್ರದಲ್ಲಿ ಸಾಹಸಿಂಹ ಅವತಾರವನ್ನ ಮರೆಯೋಕೆ ಹೇಗೆ ಸಾಧ್ಯ.. ಅಲ್ಲಿ ದಾದಾ ತೊಟ್ಟ ಬಟ್ಟೆಗಳ ಹಿಂದಿನ ಶಿಲ್ಪಿ ಅವರ ಕುಡಿ ಕೀರ್ತಿ ವಿಷ್ಣುವರ್ಧನ್ ಅವರು..

ತನ್ನ ತಂದೆ ಯಾವ ಸನ್ನಿವೇಶಕ್ಕೆ ಯಾವ ಬಟ್ಟೆ ತೊಡಬೇಕು ಅಂತ ಕೀರ್ತಿ ವಿಷ್ಣುವರ್ಧನ್ ಅವರಿಗಿಂತ ಮತ್ಯಾರು ಅರಿತುಕೊಳ್ಳು ಸಾಧ್ಯವಿಲ್ಲ ಅಂದ್ರೆ ಅದು ಅತಿಶಯೋಕ್ತಿ ಏನಲ್ಲ..

ಹೀಗಾಗೆ ಇವರ ಸಾಧನೆಯನ್ನ, ಚಿತ್ರರಂಗಕ್ಕೆ ಕೀರ್ತಿ ವಿಷ್ಣುವರ್ಧನ್ ಅವರು ಸಲ್ಲಿಸಿದ ಸೇವೆಯನ್ನ ಮನಗಂಡು ‘ಕರ್ನಾಟಕ ಚಿತ್ರ ರಸಿಕರ ಸಂಘ’ ವಿಶೇಷ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ..

ಇನ್ನೂ ನಿಮಗಿಲ್ಲಿ ಒಂದು ವಿಷ್ಯವನ್ನ ಹೇಳಲೇಬೇಕು.. ಕೀರ್ತಿ ವಿಷ್ಣುವರ್ಧನ್ ಅವರ ಪತಿ ನಟ ಅನಿರುದ್ದ್ ಅವರು ಕೀರ್ತಿ ಅವರ ಬೆನ್ನಿಗೆ ನಿಂತಿದ್ದಾರೆ.. ಅವರಿಗೆ ಇಷ್ಟವಾದ ಕ್ಷೇತ್ರದಲ್ಲಿ ಬೆಳೆಯಲು ತಮ್ಮ ಬೆಂಬಲ ಸೂಚಿಸುತ್ತ ಬಂದಿದ್ದಾರೆ.. ತನ್ನ ಪತ್ನಿ ಪ್ರಶಸ್ತಿಯನ್ನ ಪಡೆಯುವ ಸಂದರ್ಭದಲ್ಲಿ ಸ್ಟೆಜ್ ಮೇಲೆ ನಿಂತು ಹೆಮ್ಮೆ ಪಟ್ಟಿದ್ದಾರೆ.. ಈ ವಿಚಾರವನ್ನ ಮತ್ತಷ್ಟು ಹೆಮ್ಮೆಯಿಂದ ಶೇರ್ ಮಾಡಿಕೊಂಡಿದ್ದಾರೆ..ಅಂದಹಾಗೆ ಅನಿರುದ್ದ್ ಅವರು ನಾಯಕನಾಗಿ ನಟಿಸಿರುವ ರಾಜಾಸಿಂಹ ಚಿತ್ರ ರಿಲೀಸ್ ಗೆ ರೆಡಿಯಾಗಿದೆ.. ಈ ಚಿತ್ರಕ್ಕೂ ಕೀರ್ತಿ ವಿಷ್ಣುವರ್ಧನ್ ಅವರೆ ಕಾಸ್ಟೂಮ್ ಡಿಸೈನ್ ಮಾಡಿರೋದು ಮತ್ತೊಂದು ವಿಶೇಷ.. ವಿಭಿನ್ನ ಗೆಟಪ್ನಲ್ಲಿ ಅನಿರುದ್ದ್ ನಿಮ್ಮ ಮುಂದೆ ಬರಲಿದ್ದು ನಿಮ್ಮ ಬೆಂಬಲ ಬೇಕಿದೆ..

Comments

comments

Similar Articles

Top