You are here
Home > ವಾಹಿನಿ ಸುದ್ದಿ > ಜಗನ್ ಕಡೆಯಿಂದಲೇ ತನ್ನ ಗರ್ಲ್ ಫ್ರೆಂಡ್ ಬಗ್ಗೆ ಬಾಯಿ ಬಿಡಿಸಿದ ಸಂಯುಕ್ತ..!!

ಜಗನ್ ಕಡೆಯಿಂದಲೇ ತನ್ನ ಗರ್ಲ್ ಫ್ರೆಂಡ್ ಬಗ್ಗೆ ಬಾಯಿ ಬಿಡಿಸಿದ ಸಂಯುಕ್ತ..!!

ಜಗನ್ ಹಾಗೆ ಆಶಿತಾ ನಡುವೆ ಬಿಗ್ ಬಾಸ್ ಮನೆಯಲ್ಲಿದ್ದ ಸಲಿಗೆ ಈ ಇಬ್ಬರ ನಡುವೆ ಪ್ರೇಮಕ್ಕೆ ತೀರುಗಿದೆ ಅನ್ನೋ ಮಾತುಗಳು ಕೇಳಿ ಬಂತು.. ಹೀಗಾಗೆ ಈ ಇಬ್ಬರನ್ನ ಬಿಗ್ ಬಾಸ್ ಮನೆಯ ಪ್ರೇಮಪಕ್ಷಿಗಳು ಅಂತೆಲ್ಲಾ ಕರೆಯಲಾಗಿತ್ತು..

ಇದರ ಜೊತೆಗೆ ತನ್ನ ಮಾಜಿ ಗರ್ಲ್ ಫ್ರೆಂಡ್ ಕೂಡ ಅದೆ ಮನೆಯಲ್ಲಿದ್ದ ಬಗ್ಗೆ ನಿಮಗೆ ಹೇಳಬೇಕಿಲ್ಲ.. ಯಾರು ಏನೇ ಹೇಳಿದ್ರು ಯಾರು ಏನೇ ಮಾಡಿದ್ರು ತಲೆ ಕೆಡಿಸಿಕೊಳ್ಳದ ಈ ಜೋಡಿ ಈಗ ಬೇರಾಗಿದೆ.. ಕಾರಣ ಬಿಗ್ ಬಾಸ್ ಮನೆಯಿಂದ ಕಳೆದ ವಾರವಷ್ಟೆ ಆಶಿತಾ ಔಟ್ ಆಗಿದ್ದಾರೆ..

ಇನ್ನೂ ಈಗ ತಾನೆ ಮನೆ ಸೇರಿರುವ ಸಂಯುಕ್ತ ಹಾಗೆ ಲಾಸ್ಯ ಬಿಗ್ ಬಾಸ್ ಕಾರ್ಯಕ್ರಮವನ್ನ ವೀಕ್ಷಿಸಿಯೇ ಒಳ ಹೋಗಿದ್ದಾರೆ.. ಹೀಗಾಗೆ ಎಲ್ಲರ ಬಂಡವಾಳವನ್ನ ಅವರ ಮುಂದೆ ಬಯಲು ಮಾಡುತ್ತಿದ್ದಾರೆ.. ಈ ಹಿಂದಿನ ಸಂಚಿಕೆಯಲ್ಲಿ ಜಗನ್ ಪ್ರೇಯಸಿಯ ಬಗ್ಗೆ ಮಾತಾನಾಡಿದ್ರು ಸಂಯುಕ್ತ..

ನಿಮಗೆ ಹೊರಗಡೆ ಗರ್ಲ್ ಇರಬೇಕು ಅಲ್ವ ಜಗನ್ ಅಂದ್ರು.. ಇದಕ್ಕೆ ಉತ್ತರಿಸಿದ ಜಗನ್, ಹೌದು ನನಗೆ ಹೊರಗಡೆ ಗರ್ಲ್ ಫ್ರೆಂಡ್ ಇದ್ದಾರೆ ಅಂದ್ರು.. ಜೊತೆಗೆ ಜಗನ್ ಫ್ರೆಂಡ್ ಇರೋದು ದುಬೈನಲ್ಲಿ‌ ಅಂತೆ.. ಇದನ್ನ ಕೂಡ ಜಗನ್ ಒಪ್ಪಿಕೊಂಡ್ರು..

ಈ ಮೊದಲೇ ನಿಮಗೆ ಗರ್ಲ್ ಫ್ರೆಂಡ್ ಇದ್ರೆ ನೀವ್ಯಾಕ ಆಶಿತಾ ಜೊತೆ ಹಾಗಿದ್ರಿ ಅಂತ ಸಂಯುಕ್ತ ಪ್ರಶ್ನೆ ಮಾಡಿದ್ರು.. ನಾವಿಬ್ಬರು ಲವರ್ ಗಳಲ್ಲ, ಬರೀ ಫ್ರೆಂಡ್ಸ್ ಅಷ್ಟೆ.. ಅದು ಬಿಟ್ಟು ಬೇರೇನೂ ಇಲ್ಲ.. ನಮ್ಮಿಬ್ಬರ ಸ್ನೇಹಕ್ಕೆ ಬೇರ ಅರ್ಥ ಕಲ್ಪಿಸುವುದು ಬೇಡವೆಂದ್ರು.

ಒಂದು ಕ್ಷಣ ಸಂಯುಕ್ತ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜಗನ್ ಅಷ್ಟೇ ತಾಳ್ಮೆಯಿಂದ ಸಂಯುಕ್ತ ಪ್ರಶ್ನೆಗೆ ನೇರವಾದ ಉತ್ತರವನ್ನ ನೀಡಿದ್ರು

Pic Courtesy: Colors Kannada HD

Comments

comments

Similar Articles

Leave a Reply

Top