You are here
Home > ವಾಹಿನಿ ಸುದ್ದಿ > ಚಂದನ್ ನಡವಳಿಕೆ ಬಗ್ಗೆ ಜಗನ್-ಅನುಪಮಾ-ಕೃಷಿ ಕೊಟ್ಟ ಸರ್ಟಿಫಿಕೇಟ್ ಏನು ಗೊತ್ತಾ..?

ಚಂದನ್ ನಡವಳಿಕೆ ಬಗ್ಗೆ ಜಗನ್-ಅನುಪಮಾ-ಕೃಷಿ ಕೊಟ್ಟ ಸರ್ಟಿಫಿಕೇಟ್ ಏನು ಗೊತ್ತಾ..?

ವಾರ ಕಳೆದ ಹಾಗೆ ಒಬ್ಬೊಬ್ಬರು ಮನೆಯಿಂದ ಆಚೆ ಬರುತ್ತಿದ್ದಾರೆ.. ಇಷ್ಟು ದಿನ ಹಾಗೋ ಹೀಗೊ ಆಡ್ತಾ ಇದ್ದ ಸ್ಪರ್ಧಿಗಳು ನೇರಾ ನೇರಾ ತಮ್ಮ ಪ್ರತಿ ಸ್ಪರ್ಧಿಗಳು, ಗೆಲ್ಲೋ ಕಂಟೆಸ್ಟೆಂಟ್ ಗಳ ಮೇಲೆ ದಾಳಿ ಮಾಡೋಕೆ ಸಜ್ಜಾಗಿದ್ದಾರೆ.. ಅದರಲ್ಲಿ ಇನ್ನೂ ಮುಂದೆ ಚಂದನ್ ಕೆಲವರಿಗೆ ಟಾರ್ಗೆಟ್ ಆಗಲಿರೋದ್ರಲ್ಲಿ ಡೌಟ್ ಇಲ್ಲ ಅನ್ನಿಸುತ್ತೆ..

ಈ ಹಿಂದೆ ಮನೆಯಿಂದ ಹೊರ ಹೋಗಿ ಮತ್ತೆ‌ ವಾಪಸ್ ಬಿಗ್ ಬಾಸ್ ಮನೆ ಸೇರಿರೋ ಕೃಷಿಗೆ ಮನೆಯಲ್ಲಿರೋ ಸ್ಟ್ರಾಂಗ್ ಸ್ಪರ್ಧಿ ಯಾರು ಅನ್ನೋದು ಗೊತ್ತಾಗಿದೆ.. ಹೊರಗಡೆ ಜನ ಚಂದನ್ ಮೇಲಿಟ್ಟಿರೋ ಪ್ರೀತಿ ಕೃಷಿಗೆ ತಿಳಿದು ನಾನು ಅಂದುಕೊಂಡದ್ದಕ್ಕಿಂತ ಹೊರಗಡೆ ಚಂದನ್ ಬಗ್ಗೆ ಇರೋ ಅಭಿಪ್ರಾಯ ಈಕೆಯ ಹೆಬ್ಬೇರುವಂತೆ ಮಾಡಿದೆ…

ಈ ಹಿಂದಿನ‌ ಸಂಚಿಕೆಯಲ್ಲಿ ಅನುಪಮಾ-ಜಗನ್-ಕೃಷಿ ಮಾತಾನಾಡಲು‌ ಶುರು ಮಾಡಿದ್ರು.. ಅದು ಚಂದನ್ ಬಗ್ಗೆ.. ಅನುಪಮಾ ಚಂದನ್ ಮಾತಾನಾಡುವ ರೀತಿ ನನಗೆ ಇಷ್ಟ ಆಗ್ತಿಲ್ಲ ಅಂತೆಲ್ಲ ಹೇಳಿದ್ರು..

ಇದಕ್ಕೆ ಕೃಷಿ ಮಾತಾನಾಡಿ ಚಂದನ್ ನಾವು ಅಂದುಕೊಂಡಿರುವಷ್ಟು ಮುಗ್ದನಲ್ಲ.. ಅವನು ಚೆನ್ನಾಗೆ ಗೇಮ್ ಪ್ಲಾನ್ ಮಾಡಿ ಆಟ ‌ಆಡ್ತಿದ್ದಾನೆ.. ಅವನಿಗೆ ಹೊರಗಡೆಯಿಂದ ಒಳ್ಳೆ ಬೆಂಬಲ ಸಿಗ್ತಿದೆ ಅಂದ್ರು..

ಇದಕ್ಕೆ ಪ್ರತಿ ಉತ್ತರ ನೀಡಿದ ಜಗನ್, ಅವನೊಬ್ಬನೇ ಏನು ಆಟ ಆಡ್ತಿಲ್ಲ, ನಾವು ಆಡುತ್ತಿದ್ದೇವೆ.. ಅವನೊಬ್ಬನೆ ಸ್ಪರ್ಧಿಯಲ್ಲ.. ನಾವು ಸ್ಪರ್ಧಿಗಳೆ ಅಂತ ಹೇಳಿದ್ರು… ಈ ಮೂಲಕ ಈ ಮೂರು ಜನ ಚಂದನ್ ವಿಷ್ಯವಾಗಿ ತಮಗೆ ಇರೋ ಅಸಮಾಧಾನವನ್ನ ಹೊರ ಹಾಕಿದ್ರು..

ಮನೆಯಲ್ಲಿ ಏನು ನಡಿತಿದೆ ನನಗೆ ಗೊತ್ತಾಗುತ್ತಿಲ್ಲ ಅಂತ ನಾಟಕ ಆಡ್ತಾನೆ ಚಂದನ್, ಬಟ್ ಅವನಿಗೆ ಎಲ್ಲ ವಿಷ್ಯವೂ ಗೊತ್ತು.. ಎಲ್ಲರ ಬಗ್ಗೆನೂ ಗೊತ್ತು ಅಂತ ಈ ಮೂವರು ಮಾತಾನಾಡಿದ್ರು..

ಮುಂದಿನ ದಿನಗಳಲ್ಲಿ ಚಂದನ್ ಈ ಮೂರು ಜನರ ಮುಖ್ಯ ಟಾರ್ಗೆಟ್ ಆಗಿ ಬದಲಾಗ್ತಾರ ಅಂತ ಕಾದು ನೋಡಬೇಕು.. ಸದ್ಯಕ್ಕೆ ಚಂದನ್ ತನ್ನ ಆಟವನ್ನ ತಾನು ಆಡಿ ಮನೆಯಲ್ಲಿರೋ ಕೆಲಸ ಸ್ಪರ್ಧಿಗಳನ್ನ ಹಾಗೆ ಹೊರಗೆ ಅದೆಷ್ಟೋ ಅಭಿಮಾನಿಗಳ ಮನಸ್ಸು ಗೆಲ್ಲುವ ಕೆಲಸ ಮಾಡಿರೋದಂತು ಸುಳ್ಳಲ್ಲ..

Pic Courtesy: Colors Kannada HD

Comments

comments

Similar Articles

Leave a Reply

Top