ಜೈ ಶ್ರೀನಿವಾಸನ್ ಪಾಂಡಿತ್ಯಕ್ಕೆ ಓಪನ್ ಸವಾಲ್ ಹಾಕಿದ ಸಮೀರ್ ಆಚಾರ್ಯ..! ಇಲ್ಲಿದೆ ನೋಡಿ ಕಾರಣ..!

ಬಿಗ್ ಬಾಸ್ ಮನೆಯಲ್ಲಿ ಒಬ್ಬರಿಗೆ ಒಬ್ಬರನ್ನ ಕಂಡರೆ ಆಗಲ್ಲ.. ಅದರಲ್ಲೂ ದಿವಾಕರ್ ಹಾಗೆ ರಿಯಾಜ್, ಜೈ ಶ್ರೀನಿವಾಸನ್ ಗುರುಜೀ ಹಾಗೆ ಸಮೀರ್ ಆಚಾರ್ಯ.. ಈ ನಾಲ್ಕು ಜನರ ನಡುವೆ ದೊಡ್ಡದಾಗಿ ಜಗಳ ನಡಿತಾನೆ ಇರುತ್ತೆ.. ಈ ವಿಚಾರವಾಗಿ ಇಂದು ಸುದೀಪ್ ಅವರು ಸ್ಪಷ್ಟೀಕರಣ ಕೇಳಿದ್ರು..

ಜೈ ಶ್ರೀನಿವಾಸನ್ ಹಾಗೆ ಸಮೀರ್ ನೀವ್ಯಾಕೆ ಇಬ್ಬರು ಒಬ್ಬರ ಹೆಸರನ್ನ ಒಬ್ಬರು ತೆಗೆದುಕೊಳ್ತೀರ..? ನೀವಿಬ್ಬರು ಒಂದೇ ಫಿಲ್ಡ್ ನಲ್ಲಿ(ಜ್ಯೋತಿಷ್ಯ) ಇರೋದ್ರಿಂದ ನಿಮ್ಮ ನಡುವೆ ಇಷ್ಟೊಂದು ಭಿನ್ನಾಭಿಪ್ರಾಯಗಳು ಮೂಡಲು ಕಾರಣವಾಗಿದ್ಯ ಅಂತ ಕಿಚ್ಚ ಪ್ರಶ್ನೆ ಕೇಳಿದ್ರು..

ಇದಕ್ಕೆ ಮೊದಲು ಉತ್ತರಿಸಿದ ಜೈ ಶ್ರೀನಿವಾಸನ್ ಅವರು ಗುರುಜೀ ಗೆಟಪ್ ನಲ್ಲಿ ಇರೋದು ಸಮೀರ್, ನಾನು ಆ ಗೆಟಪ್ ನಲ್ಲಿ ಇರದೆ ಇರುವ ಗುರುಜೀ.. ನಾನು ಜ್ಯೋತಿಷ್ಯ ವಿಚಾರವಾಗಿ ಕೆಲ ಪ್ರಶ್ನೆಗಳನ್ನ ಸಮೀರ್ ಅವರಿಗೆ ಕೇಳಿದಾಗ ಅವರಿಗೆ ಉತ್ತರ ಗೊತ್ತಿರಲಿಲ್ಲ. ಹೀಗಾಗೆ ನಾನು ಇವರಿಗೆ ತಿಳಿದಿಲ್ಲ ಅಂತ ಹೇಳಿ ಅಲ್ಲಿಗೆ ಬಿಟ್ಟೆ.. ಅದರೆ ಅವರು ಅದನ್ನೆ ಸಾಧಿಸುತ್ತಿದ್ದಾರೆ ಅಂದ್ರು.

ಇನ್ನೂ ಈ ವಿಚಾರವಾಗಿ ಮಾತಾನಾಡಿದ ಸಮೀರ್ ಆಚಾರ್ಯ, ಪಾಂಡಿತ್ಯದಲ್ಲಿ, ಪೂಜೆ, ಪುನಸ್ಕಾರ, ಮಂತ್ರ-ಯಂತ್ರ-ತಂತ್ರ ಈ ವಿಚಾರಗಳಿಗೆ ಸಂಬಂಧ ಪಟ್ಟಹಾಗೆ ನಾನು ಎಂದು ಮಾತಾನಾಡಲು ಸಿದ್ದ..

ಇಲ್ಲಿ ಕಣ್ಣು ತಪ್ಪಿಸಿಕೊಳ್ಳುವುದೇನು ಇಲ್ಲ.. ಈ ವಿಚಾರವಾಗಿ ಅವರು ಯಾವಾಗ ಬೇಕಾದ್ರು ಚರ್ಚೆಗೆ ಕರೆಯಲಿ.. ನಾನು ಖಂಡಿತ ಅವರೊಂದಿಗೆ ಓಪನ್ ಡಿಬೇಟ್ ನಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ರು..

ಶ್ರೀನಿವಾಸನ್ ಗುರುಜೀ ಸಮಯ ನೋಡಿ ಆಟ ಆಡ್ತಾರೆ.. ಅವರು ಸಮಯ ಸಾಧಕ.. ಜೊತೆಗೆ ಬೇರೆಯವರನ್ನ ತುಳಿದು ಬೆಳೆಯುವ ವ್ಯಕ್ತಿ ಜೈ ಶ್ರೀನಿವಾಸ್ ಅಂದ್ರು..

Pic Courtesy: Colors Super

Comments

comments

Similar Articles

Top