You are here
Home > ವಾಹಿನಿ ಸುದ್ದಿ > ನಾಗಿಣಿ ಧಾರಾವಾಹಿಯ ನಟ ದಿಕ್ಷೀತ್ ಶೆಟ್ಟಿ ಮೇಲೆ ಅಟ್ಯಾಕ್.‌.

ನಾಗಿಣಿ ಧಾರಾವಾಹಿಯ ನಟ ದಿಕ್ಷೀತ್ ಶೆಟ್ಟಿ ಮೇಲೆ ಅಟ್ಯಾಕ್.‌.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ನಾಗಿಣಿ ಧಾರಾವಾಹಿ ಕಿರುತೆರೆಯಲ್ಲಿ ಬಹಳ ಖ್ಯಾತಿಗೊಂಡಿದೆ‌‌. ನಾಗಿಣಿ ಧಾರಾವಾಹಿ ಕಿರುತೆರೆಯಲ್ಲಿ ಒಳ್ಳೆ ಟ್ರೆಂಡ್ ಕ್ರಿಯೆಟ್ ಮಾಡಿದೆ. ಅಲ್ಲದೆ ಈ ಧಾರಾವಾಹಿಗೆ ಒಳ್ಳೆ ರೇಟಿಂಗ್ ಕೂಡ ಇದೆ.

ಕಿರುತೆರೆಯಲ್ಲಿ ಬಹಳ ಫೇಮಸ್ ಜೋಡಿಯಾಗಿರುವ ಅರ್ಜುನ್ ಹಾಗೂ ಅಮೃತ ಇತ್ತೀಚೆಗೆ ಡ್ಯಾನ್ಸ್ ರಿಯಾಲಿಟಿ ಶೋ ವಿನರ್ ಕೂಡ ಆಗಿದರು‌.

ಅರ್ಜುನ್ ಅಲಿಯಾಸ್ ದಿಕ್ಷೀತ್ ಶೆಟ್ಟಿ ಅವರಿಗೆ ಮಹಿಳಾ ಅಭಿಮಾನಿಗಳು ಸೇರಿದಂತೆ ಸಾಕಷ್ಟು ಅಭಿಮಾನಿಗಳ ಬಳಗವೇ ಇದೆ.
ಆದರೆ ಇದೀಗ ಅಭಿಮಾನಿಯಿಂದ ದಿಕ್ಷೀತ್ ಶೆಟ್ಟಿ ಮೇಲೆ ಅಟ್ಯಾಕ್ ಆಗಿದೆ. ನಿಜ, ಅಭಿಮಾನಿಯೊಬ್ಬ ಸೆಲ್ಛಿ ತೆಗೆದುಕೊಳ್ಳಲು ಮುಂದಾಗಿ ಈ ನಟನ ಮೇಲೆ ಹಲ್ಲೆ ಮಾಡಿದ್ದಾರೆ.

ಸೆಲ್ಛಿಗಾಗಿ ನಟ ದಿಕ್ಷೀತ್ ಅವರನ್ನ ಮೂವರು ಜನ ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಬಂದು ಕುಡಿದ ಅಮಲಿನಲ್ಲಿ ನಟ ದಿಕ್ಷೀತ್ ಅವರನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ.

ಸೆಲ್ಛಿ ನೀಡಲು ನಿರಾಕರಿಸಿದ್ದಕ್ಕೆ ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ದಿಕ್ಷೀತ್ ಶೆಟ್ಟಿ ದೂರು ದಾಖಲಿಸಿದ್ದಾರೆ. ಪೊಲೀಸರಿಂದ ಮೂವರು ಕಿಡಿಗೇಡಿಗಳ ಹುಡುಕಾಟದಲ್ಲಿದ್ದಾರೆ.

Comments

comments

Similar Articles

Leave a Reply

Top