You are here
Home > ವಾಹಿನಿ ಸುದ್ದಿ > ಅಭಿಮಾನ ಅಂದ್ರೆ ಇದು.. ಅಭಿಮಾನಿಯ ಆಸೆಯನ್ನ ಈಡೇರಿಸಿದ ಕುಮಾರಣ್ಣ..

ಅಭಿಮಾನ ಅಂದ್ರೆ ಇದು.. ಅಭಿಮಾನಿಯ ಆಸೆಯನ್ನ ಈಡೇರಿಸಿದ ಕುಮಾರಣ್ಣ..

ಕುಮಾರಣ್ಣನಿಗೆ ಕುಮಾರಣ್ಣನೇ ಸಾಟಿ, ಅನ್ನೋದು ಇದಕ್ಕೆ ನೋಡಿ.. ಕುಮಾರಣ್ಣ ಬರೋವರೆಗೆ ನಾನು ಮದುವೆಯಾಗಲ್ಲ ಎಂದು ಉಪವಾಸ ಕುಳಿತ್ತಿದ್ದ ಅಭಿಮಾನಿ ಮನೆಗೆ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.

ನಿಜ, ಸತ್ಯಾಗ್ರಹದ ಮಾಹಿತಿ ತಿಳಿದ ಕುಮಾರಸ್ವಾಮಿ ಅವರು ರವಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮದುವೆಗೆ ಬರುವುದಾಗಿ ಭರವಸೆ ನೀಡಿದರು. ಹೇಳಿದ ಮಾತಿನಂತೆ ರವಿ ಅವರ ಮನೆಗೆ ಹೆಚ್ಡಿಕೆ ಭೇಟಿ ನೀಡಿ ನವ ದಂಪತಿಗಳಿಗೆ ಆಶೀರ್ವಾದಿಸಿದ್ದಾರೆ. ಕುಮಾರಣ್ಣ ಮದುವೆ ಬರಲೇಬೇಕು ಅಂತ ವರನೇ ಉಪವಾಸ ಕುಳಿತ..

ಈ ವೇಳೆ ಮಾತಾನಾಡಿದ ಕುಮಾರಸ್ವಾಮಿ ಅವರು, ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಈಗ ಒತ್ತಡದ ನಡುವೆ ಸಮಾರಂಭಗಳಿಗೆ ಬರಬೇಕೆಂದು ಹೇಳಿದರೆ ಕೊಂಚ ಕಷ್ಟವಾಗಲಿದೆ. ಯಾಕಂದರೆ ನಾನು ಬೇರೆ ಕೆಲಸಗಳು ಮಾಡಲು ಸಾಧ್ಯವಾಗುವುದಿಲ್ಲ. ಒತ್ತಡದ ನಡುವೆ ಈ ಮದುವೆಗೆ ಬಂದಿದ್ದೇನೆ ದಯವಿಟ್ಟು ಅಭಿಮಾನಿಗಳು ಇನ್ಮುಂದೆ ಒತ್ತಡ ಹಾಕಬೇಡಿ. ಬಿಡುವಿನ ವೇಳೆ ಖಂಡಿತವಾಗಿಯೂ ಭೇಟಿ ನೀಡುತ್ತಾನೆ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು. ಜೆಡಿಎಸ್ ನಿಂದ ಹೊರ ಬಂದ ಪ್ರಣಾಳಿಕೆಯಲ್ಲಿವೆ ಜನ ಮೆಚ್ಚುವ ಅಂಶಗಳು..

Comments

comments

Similar Articles

Leave a Reply

Top